• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah-Lingayat: ಬಸವ ಜಯಂತಿ ವೇಳೆ ಸಿದ್ದರಾಮಯ್ಯ ಭಾಷಣಕ್ಕೆ ಸಿಗದ ಅವಕಾಶ; ಸಮಯದ ಅಭಾವವೋ? ಬಣ ರಾಜಕೀಯವೋ?

Siddaramaiah-Lingayat: ಬಸವ ಜಯಂತಿ ವೇಳೆ ಸಿದ್ದರಾಮಯ್ಯ ಭಾಷಣಕ್ಕೆ ಸಿಗದ ಅವಕಾಶ; ಸಮಯದ ಅಭಾವವೋ? ಬಣ ರಾಜಕೀಯವೋ?

ಬಸವ ಜಯಂತಿ 2023

ಬಸವ ಜಯಂತಿ 2023

Siddaramaiah-Lingayat: ನಾನು ಹೇಳಿದ್ದೇನು? ಲಿಂಗಾಯತ ಸಮಾಜದವರು ಬಹಳ ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದಾರೆ. ಬಸವರಾಜ ಬೊಮ್ಮಾಯಿ ಬಂದು ಭ್ರಷ್ಟರಾಗಿದ್ದಾರೆ. ನಾನು ಲಿಂಗಾಯತರು ಎಂದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

  • Share this:

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ರಾಹುಲ್​ ಗಾಂಧಿ (Rahul Gandhi) ಅವರೊಂದಿಗೆ ಕೂಡಲಸಂಗಮದಲ್ಲಿ ನಡೆದ ಬಸವ ಜಯಂತಿದಲ್ಲಿ (Basava Jayanti) ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ಸಿದ್ದರಾಮಯ್ಯ ಅವರಿಗೆ ಭಾಷಣಕ್ಕೆ (Speech) ಅವಕಾಶ ಸಿಗಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವೇದಿಕೆ ಮೇಲಿದ್ದ ಗಣ್ಯರಲ್ಲಿ ಇಬ್ಬರು ಸ್ವಾಮೀಜಿಗಳು (Swamiji) ಹಾಗೂ ರಾಹುಲ್​ ಗಾಂಧಿ ಅವರಿಗೆ ಮಾತ್ರ ಭಾಷಣ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಮೇಲಿದ್ದರೂ ಸಿದ್ದರಾಮಯ್ಯ ಅವರಿಗೆ ಭಾಷಣ ಮಾಡಲು ಅವಕಾಶ ಸಿಕ್ಕಿಲ್ಲ. ಈ ಬೆಳಣಿಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


ನಿನ್ನೆಯಷ್ಟೇ ಮಾಜಿ ಸಿಎಂ ಅವರು ಲಿಂಗಾಯತ ಸಿಎಂ ಕುರಿತಂತೆ ನೀಡಿದ್ದ ಹೇಳಿಕೆ ತೀವ್ರ ವಿವಾದವನನ್ನು ಉಂಟು ಮಾಡಿತ್ತು. ಈ ವೇಳೆ ಇವತ್ತು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಭಾಷಣಕ್ಕೆ ಅವಕಾಶ ಸಿಕ್ಕಿದ್ದರೆ, ಸ್ವಾಮೀಜಿಗಳ ಎದುರಲ್ಲೇ ತಮ್ಮ ಹೇಳಿಕೆಗೆ ಸಿದ್ದು ಸ್ಪಷ್ಟೀಕರಣ ನೀಡುತ್ತಿದ್ದರು ಎನ್ನಲಾಗಿದೆ. ಆದರೆ, ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಭಾಷಣಕ್ಕೆ ಅವಕಾಶವೇ ಸಿಗಲಿಲ್ಲ.


ಬಸವ ಜಯಂತಿ 2023


ಮಾಧ್ಯಮಗಳಿಂದ ದೂರ ಉಳಿದ ಕಾಂಗ್ರೆಸ್ ನಾಯಕರು


ಲಿಂಗಾಯತ ಸಿಎಂ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿವಾದದಲ್ಲಿ ಹೆಚ್ಚಿನ ಡ್ಯಾಮೆಜ್ ಕಂಟ್ರೋಲ್​ಗೆ ಕಾಂಗ್ರೆಸ್ ನಾಯಕರ ಕಸರತ್ತು ನಡೆಸಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಹೇಳಿಕೆ ಸಮರ್ಥನೆ ಮಾಡಿಕೊಂಡರು ಕಷ್ಟ, ವಿರೋಧಿಸಿದರು ಕಷ್ಟ ಎಂಬ ಸಂಕಷ್ಟ ಎದುರಾಗಿದೆ. ಈಗಾಗಿಯೇ ಎಂ ಬಿ ಪಾಟೀಲ್​ ಹಾಗೂ ವಿಜಯಾನಂದ ಕಾಶಪ್ಪನವರ್ ಮಾಧ್ಯಮಗಳಿಂದ ದೂರ ಉಳಿದಿದ್ದರು ಎನ್ನಲಾಗಿದೆ.


ವೇದಿಕೆಯಲ್ಲಿ ಡಾ. ಸಿದ್ದರಾಮ ಸ್ವಾಮಿಜಿ ಹಾಗೂ ರಾಹುಲ್ ಗಾಂಧಿಗೆ ಮಾತ್ರ ಭಾಷಣಕ್ಕೆ ಅವಕಾಶ ನೀಡಿದ್ದು, ಸಮಯದ ಅಭಾವವೋ ಅಥವಾ ಕಾಂಗ್ರೆಸ್ ನ ಬಣ ರಾಜಕೀಯವೋ ಎಂಬ ಚರ್ಚೆಯೂ ಶುರುವಾಗಿದೆ.


ಇದನ್ನೂ ಓದಿ: Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’


ಇದಕ್ಕೂ ಮುನ್ನ ಕೂಡಲಸಂಗಮದಲ್ಲಿ ಮಾತನಾಡಿದ ಮಾಜಿ ಸಿಎಂ, ಬಸವ ಜಯಂತಿ ಕಾರ್ಯಕ್ರಮ ಚುನಾವಣೆಗಾಗಿ ಮಾಡಿದ್ದಲ್ಲ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು, ಆದ್ದರಿಂದಲೇ ಭಾಗಿಯಾಗಿದ್ದೆ. ಇದೇ ವೇಳೆ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿ, ನಾನು ವಿವಾದ ಆಗುವ ಹೇಳಿಕೆ ಕೊಟ್ಟೆ ಇಲ್ಲ. ತಿರುಚಿರುವ ವಿಡಿಯೋ ಬಿಟ್ಟಿದ್ದಾರೆ.




ನಾನು ಹೇಳಿದ್ದೇನು? ಲಿಂಗಾಯತ ಸಮಾಜದವರು ಬಹಳ ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದಾರೆ. ಬಸವರಾಜ ಬೊಮ್ಮಾಯಿ ಬಂದು ಭ್ರಷ್ಟರಾಗಿದ್ದಾರೆ. ನಾನು ಲಿಂಗಾಯತರು ಎಂದಿಲ್ಲ. ನನ್ನ ಹೇಳಿಕೆ ತಿರುಚಿರುವ ಉದ್ದೇಶ ಏನು ನೀವೇ ಹೇಳಿ. ನನಗೆ ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಅದು ಸಾಧ್ಯವಿಲ್ಲ. ನನಗೆ ಲಿಂಗಾಯತರ ಬಗ್ಗೆ ಲಿಂಗಾಯತ ಧರ್ಮದ ಬಗ್ಗೆ ಅಪಾರ ಗೌರವ ಇದೆ ಎಂದು ಹೇಳಿದರು.

top videos
    First published: