ಆಡಿಯೋ ಸಂಭಾಷಣೆ ಕುರಿತು ತನಿಖೆಗೆ ಆಗ್ರಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಇಡೀ ಸಂಭಾಷಣೆ ಕುರಿತು ತನಿಖೆಯಾಗಬೇಕು. ಬೇಜಬ್ದಾರಿಯ ಮಾತನಾಡಿರುವರ ಮೇಲೆ ಕ್ರಮವಾಗಬೇಕು.ರಾಜಕೀಯ ಲಾಭಕ್ಕಾಗಿ ನಿಮ್ಮ ಮೇಲೆ ಕಪ್ಪುಚುಕ್ಕೆ. ಶಾಸಕರ ಖರೀದಿಗೆ ಯತ್ನ ನಡೆದಿದೆ. . ಧ್ವನಿಸುರುಳಿಯಲ್ಲಿ ಈ ಕುರಿತು ಬಹಳ ಸ್ಪಷ್ಟವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು

Seema.R | news18
Updated:February 11, 2019, 1:20 PM IST
ಆಡಿಯೋ ಸಂಭಾಷಣೆ ಕುರಿತು ತನಿಖೆಗೆ ಆಗ್ರಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
Seema.R | news18
Updated: February 11, 2019, 1:20 PM IST
ಬೆಂಗಳೂರು (ಫೆ.11): ಸಂಭಾಷಣೆಯಲ್ಲಿ ನಿಮ್ಮ ಹೆಸರು ಪ್ರಸ್ತಾಪ ಮಾಡಿರುವುದು  ನಿಮ್ಮ ಮೇಲೆ ಕಪ್ಪು ಚುಕ್ಕೆ ತರಲು ಮಾಡಿರುವ ಪ್ರಯತ್ನವಾಗಿದೆ. ಸ್ಪೀಕರ್​ ಕುರಿತು ಇಷ್ಟು ಹಗುರವಾಗಿ ಮಾತನಾಡಿರುವುದನ್ನು ಸಾಮಾನ್ಯವಾಗಿ ಪರಿಗಣಿಸಬಾರದು. ಈ ಘಟನೆ ರಾಷ್ಟ್ರಕ್ಕೆ ಸಂದೇಶವಾಗಬೇಕು. ಈ ಹಿನ್ನಲೆಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿ, ತನಿಖೆಗೆ ನಡೆಸಬೇಕು ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.

ಆಡಿಯೋದಲ್ಲಿ  ತಮ್ಮ ಮೇಲಿನ ಆಪಾದನೆಗೆ ನೊಂದುಕೊಂಡ ಸ್ಪೀಕರ್​ ರಮೇಶ್​ ಕುಮಾರ್​, ಸದನದಲ್ಲಿ ಈ ಕುರಿತು ಎಲ್ಲರೂ ಮಾತನಾಡುವಾಗ ಸಿದ್ದರಾಮಯ್ಯ ಅವರನ್ನು ಮೌನವಹಿಸಿದ್ದನ್ನು ಪ್ರಶ್ನಿಸಿದರು. ಈ ಆಪಾದನೆಯಿಂದ  ನಿಮಗೂ ನಮ್ಮ ಮೇಲೆ ಅನುಮಾನವೇ  ಎಂದು ಪ್ರಶ್ನಿಸಿದರು

ಇದಕ್ಕೆ ನಗುತ್ತಾ ಮಾತು ಶುರು ಮಾಡಿದ ಸಿದ್ದರಾಮಯ್ಯ, ನಿಮ್ಮ ಗುಣ-ನಡವಳಿಕೆ ನೋಡಿದ್ದೇನೆ. ಸಾರ್ವಜನಿಕ, ವೈಯಕ್ತಿಕ ಬದುಕು ನೋಡಿದ್ದೇನೆ. ನಿಮ್ಮ ಮೇಲೆ ಅನುಮಾನ ಪಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಸ್ಪೀಕರ್​ ಬಗ್ಗೆ ಹಗುರವಾಗಿ ಮಾತನಾಡಿರುವ ಬಗ್ಗೆ ಚರ್ಚೆಯಾಗಬೇಕಾಗಿದೆ. ಈ ಆಡಿಯೋವನ್ನು ಬಿಜೆಪಿ ಶಾಸಕ ಮಾಧುಸ್ವಾಮಿ ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ ಇದು ಹೊರಗಡೆ ಮಾತನಾಡಿರೋದು. ಹಗುರವಾಗಿ ಪರಿಗಣಿಸುವಂತೆ ಕೇಳಿದ್ದಾರೆ.  ಹೊರಗಡೆಯೋ ಒಡಗಡೆಯೋ ಆದರೆ, ಇದನ್ನು ಹಗುರವಾಗಿ ಪರಿಗಣಿಸಬಾರದು. ನಿಮ್ಮನ್ನು ಈ ಸದನ ಸರ್ವಾನುಮತದಿಂದ ಆರಿಸಿದೆ. ಗೌರವ ಎತ್ತಿ ಹಿಡಿಯೋದು ಎಲ್ಲರ ಜವಾಬ್ದಾರಿ. ನಿಮ್ಮ ಮೇಲೆ ಮಾತನಾಡೋದು ಸರಿಯಲ್ಲ. ಅದು ಸದನದ ಹಕ್ಕುಚ್ಯುತಿಗೆ ಸಮನಾದದ್ದು. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದರು.

ಇದನ್ನು ಓದಿ: ಮತ್ತೆ ಸದನದಲ್ಲಿ ಯಡಿಯೂರಪ್ಪ ಯೂ ಟರ್ನ್​; ಧ್ವನಿ ತಮ್ಮದು ಎಂದು ಒಪ್ಪಿಕೊಂಡಿಲ್ಲವಂತೆ

ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಬುಕ್​  ಆಗಿದ್ದಾರೆ ಎಂಬ  ಮಾತಿನಿಂದ ಎಂತಹ ಸಂದೇಶ ರವಾನೆಯಾಗಿತ್ತದೆ. ಇಡೀ ಸಂಭಾಷಣೆ ಕುರಿತು ತನಿಖೆಯಾಗಬೇಕು. ಬೇಜಬ್ದಾರಿಯ ಮಾತನಾಡಿರುವರ ಮೇಲೆ ಕ್ರಮವಾಗಬೇಕು. ಈ ಮೂಲಕ ಸಮಾಜಕ್ಕೆ, ದೇಶಕ್ಕೆ ಸಂದೇಶ ರವಾನೆಯಾಗಬೇಕು.  ಈ ಆಡಿಯೋ ರಾಷ್ಟ್ರದಲ್ಲೇ ಸುದ್ದಿಯಾಗಿದೆ. ಕೋಟ್ಯಂತರ ಜನರಿಗೆ ಅವರ ಮಾತು ತಲುಪಿದೆ. ಈ ಕುರಿತು ತನಿಖೆಯಾಗಿ, ತಪ್ಪಿತಸ್ಥರ ಪತ್ತೆಯಾಗಲಿ ಎಂದು ಒತ್ತಾಯಿಸಿದರು.

ರಾಜಕೀಯ ಲಾಭಕ್ಕಾಗಿ ನಿಮ್ಮ ಮೇಲೆ ಕಪ್ಪುಚುಕ್ಕೆ. ಶಾಸಕರ ಖರೀದಿಗೆ ಯತ್ನ ನಡೆದಿದೆ.
Loading...

ಇದು ಎಮೋಷನಲ್​ ಮಾಡುವ ವಿಚಾರವಲ್ಲ. ಧ್ವನಿಸುರುಳಿಯಲ್ಲಿ ಈ ಕುರಿತು ಬಹಳ ಸ್ಪಷ್ಟವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...