ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಅಂತ ಹೆಸರು ಹೇಳಿಬಿಡಿ: ದೇವೇಗೌಡರಿಗೆ ಸಿದ್ದು ಸವಾಲ್​​

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

  • Share this:
ಮೈಸೂರು(ಡಿಸೆಂಬರ್​. 27): ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಸಿಗಬೇಕಿತ್ತು, ಆದರೆ, ಅವರ ಪಕ್ಷದಲ್ಲೆ ಅದನ್ನ ತಡೆದರು ಅಂತ ನಿನ್ನೆ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ನೀಡಿದ ಹೇಳಿಕೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಖರ್ಗೆಯವರಿಗೆ ಯಾರು ಸಿಎಂ ಸ್ಥಾನ ತಪ್ಪಿಸಿದರು ಅಂತ ಹೆಸರು ಹೇಳಿಬಿಡಿ. ನಾನಂತು ಆ ಕೆಲಸ ಮಾಡಿಲ್ಲ, ನಿಮಗೆ ಹೆಸರು ಗೊತ್ತಿದ್ದರೆ ಹೇಳಿ ಬಿಡಿ ಅಂತ ಸಿದ್ದರಾಮಯ್ಯ ದೊಡ್ಡಗೌಡರಿಗೆ ಸವಾಲು ಹಾಕಿದ್ದಾರೆ. ಪಕ್ಷ ಕಟ್ಟಿಲ್ಲ ಎಂಬ ಗೌಡರ ಹೇಳಿಕೆಗು ಸಿದ್ದು ಗುದ್ದು ಕೊಟ್ಟಿದ್ದು, 6 ವರ್ಷ ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿದ್ದು ವ್ಯರ್ಥವೇ ಅಂತ ಪ್ರಶ್ನೆ ಹಾಕಿದ್ದಾರೆ. ಇಂದು ಮಾಜಿ ಪ್ರಧಾನಿಗೆ ಪ್ರಶ್ನೆ ಹಾಕಿರುವ ಸಿದ್ದು. ನಾನು 6 ವರ್ಷ ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿದ್ದು ವ್ಯರ್ಥವೇ?  ಹಾಗಾದ್ರೆ ಜೆಡಿಎಸ್‌ಗೆ ನನ್ನ ಕೊಡುಗೆ ಇಲ್ಲವೇ ಅಂತ ಗುಡುಗಿದ್ದಾರೆ.

ಅಷ್ಟೇ ಅಲ್ಲದೆ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಲಭಿಸಬೇಕಿತ್ತು. ಆದರೆ, ಕಾಂಗ್ರೆಸ್‌ನಲ್ಲೆ ಅದನ್ನ ಯಾರೋ ತಪ್ಪಿಸಿದರು ಎನ್ನುವ ಹೇಳಿಕೆಗು ತಿರುಗೇಟು ನೀಡಿರುವ ಸಿದ್ದರಾಮಯ್ಯ. ನಾನಂತು ಖರ್ಗೆಯವರಿಗೆ ಸಿಎಂ ಸ್ಥಾನ ತಪ್ಪಿಸಿಲ್ಲ. ದೇವೇಗೌಡರಿಗೆ ಹೆಸರು ಗೊತ್ತಿದ್ದರೆ ಹೇಳಿಬಿಡಲಿ ಅಂತ ಸವಾಲು ಹಾಕಿದ್ದಾರೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿ ಸುಧಿರ್ಘ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಸಿಗಬೇಕಿತ್ತು. ಅವರು ಸಹ ಒಪ್ಪಿಗೆ ನೀಡಿದ್ದರು. ಆದರೆ, ಖರ್ಗೆಯವರಿಗೆ ಅಲ್ಲದ್ದವರೇ ಯಾರೋ ಒಬ್ಬರು ಸಿಎಂ ಸ್ಥಾನ ತಪ್ಪಿಸಿದರು ಎಂದು ಆರೋಪಿಸಿದ್ದರು.

ಗುರುಗಳ ಆರೋಪಕ್ಕೆ ಉತ್ತರಿಸಿರುವ ಶಿಷ್ಯ  ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತು ಅಲ್ಲ, ಯಾರು ಖರ್ಗೆ ಹೆಸರು ತಿರಸ್ಕಾರ ಮಾಡಿದರು ಅಂತ ಹೆಸರು ಹೇಳಲಿ. ದೇವೇಗೌಡರನ್ನ ಹೆಸರು ಹೇಳಲಿ ಅಂತ ಸವಾಲು ಹಾಕಿದ ಸಿದ್ದರಾಮಯ್ಯ ನಾನಂತು ಖರ್ಗೆ ಹೆಸರು ತಿರಸ್ಕಾರ ಮಾಡಿಲ್ಲ, ಯಾರು ಮಾಡಿದರು. ಅಂತ ನನಗೆ ಗೊತ್ತಿಲ್ಲ  ಅವರಿಗೆ ಗೊತ್ತಿದ್ರೆ ಹೆಸರು ಹೇಳಲಿ ಎಂದು ಹೇಳಿದರು.

ಇನ್ನು ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ ಎಂಬ ದೇವೇಗೌಡರ ಹೇಳಿಕೆ ವಿಚಾರಕ್ಕು ಪ್ರತಿಕ್ರಿಯಿಸಿದ ಅವರು. ದೇವೇಗೌಡರನ್ನ ಪಾಪ ಎಂದ ಸಂಬೋದಿಸಿದರು. ದೇವೇಗೌಡರು ಪಾಪ, ದೇವೇಗೌಡರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೀನಿ. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು? 6 ವರ್ಷಗಳ ಕಾಲ‌ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು  ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ?. ನಾನು ರಾಜ್ಯ ಪ್ರವಾಸ ಮಾಡಿಲ್ಲವೇ? ಪಕ್ಷ ಸಂಘಟನೆಯಲ್ಲಿ ನಾನು ತೋಡಗಿರಲಿಲ್ಲವೇ ಅಂತ ದೇವೇಗೌಡರಿಗೆ ಪ್ರಶ್ನೆ ಹಾಕಿದರು.

ಡಿಸೆಂಬರ್ 29 ಕ್ಕೆ ಮೈಸೂರಿನಲ್ಲಿ ಕುರುಬರ ಎಸ್‌ಟಿ‌ ಮೀಸಲಾತಿ ಹೋರಾಟ ಹಮ್ಮಿಕೊಂಡಿರುವ ವಿಚಾರವಾಗಿ, ಈ ವಿಷಯದಲ್ಲಿ ಹೋರಾಟದ ಅಗತ್ಯವೇ ಇಲ್ಲ ಎಂದ ಸಿದ್ದರಾಮಯ್ಯ, ಇದು ಕುರುಬರನ್ನ ಇಬ್ಬಾಗ ಮಾಡುವ ಹುನ್ನಾರ ಎಂದು ಆರೋಪಿಸಿದರು. ನಾನು ಸಿಎಂ ಆಗಿದ್ದಾಗಲೇ ಕುರುಬರ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ಸು ಮಾಡಿದ್ದೆ. ಅದರ ವರದಿ ಸಿದ್ದವಾಗಿದೆ. ಅದನ್ನ ಸ್ವೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ ಸಾಕು ಎಂದರು.

ಇದನ್ನೂ ಓದಿ : ಚನ್ನಪಟ್ಟಣದಲ್ಲಿ 25ಕ್ಕೂ ಹೆಚ್ಚು ಪಂಚಾಯಿತಿಗಳು ಬಿಜೆಪಿ ತೆಕ್ಕೆಗೆ, ಕುಮಾರಸ್ವಾಮಿ ಕಾರ್ಯವೈಖರಿ ಈಗ ಗೊತ್ತಾಗುತ್ತೆ: ಯೋಗೇಶ್ವರ್

ಸಚಿವ ಈಶ್ವರಪ್ಪ, ವಿಶ್ವನಾಥ ಇಬ್ಬರು ಬಿಜೆಪಿ ಸರ್ಕಾರದಲ್ಲಿದ್ದಾರೆ, ಎರಡು ಕಡೆ ಅವರದ್ದೆ ಸರ್ಕಾರ ಇದೆ.  ಅವರು ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಲಿ ಅದನ್ನ ಬಿಟ್ಟು ಹೋರಾಟ ಯಾಕೇ ಮಾಡಬೇಕು. ಇದು ಕುರುಬರನ್ನ ಇಬ್ಬಾಗ ಮಾಡುವ ಆರ್‌ಎಸ್‌ಎಸ್‌ ನ ಹುನ್ನಾರವಾಗಿದೆ. ಇದಕ್ಕೆ ಹೋರಾಟದ ಅಗತ್ಯ ಇಲ್ಲ ಅಷ್ಟಕ್ಕು ಹೋರಾಟ ಯಾರ ವಿರುದ್ದ ಮಾಡುತ್ತಾರೆ.

ಈಶ್ವರಪ್ಪ, ವಿಶ್ವನಾಥ ಇಬ್ಬರು ಸಹ  ಅವರದ್ದೆ ಸರ್ಕಾರದ ವಿರುದ್ದ ಹೋರಾಟ ಯಾಕೇ ಮಾಡುತ್ತಾರೆ ಅಂತ ಪ್ರಶ್ನೆ ಹಾಕಿ, ಕುರುಬರನ್ನ ಎಸ್.ಟಿ.ಸಮುದಾಯಕ್ಕೆ ಸೇರಿಸುವ ವಿಚಾರದಲ್ಲಿ ಮತ್ತೆ ತಮ್ಮ ನಿಲುವು ಸ್ಪಷ್ಟ ಪಡಿಸದೆ ಜಾರಿಕೊಂಡರು.
Published by:G Hareeshkumar
First published: