ಕೂಡಲೇ ರಮೇಶ್ ಜಾರಕಿಹೊಳಿ ಬಂಧಿಸಬೇಕು, ಹೈಕೋರ್ಟ್ ‌ನಿಗಾದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು; ಸಿದ್ದರಾಮಯ್ಯ

ಹೈಕೋರ್ಟ್ ‌ನಿಗಾದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು. ಆರೋಪಿಯನ್ನು ಕೂಡಲೇ ಬಂಧಿಸಬೇಕು. ರಮೇಶ್ ಜಾರಕಿಹೊಳಿ ರಕ್ಷಣೆಗೆ ನಿಂತಿರುವ ಸಚಿವರ ಬಗ್ಗೆ ತನಿಖೆಯಾಗಬೇಕು. ರಮೇಶ್ ಜಾರಕಿಹೊಳಿ ಅರೆಸ್ಟ್ ಮಾಡದೇ ಇದ್ರೆ ಮಹಿಳೆಯರಿಗೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂದು ಗೊತ್ತಾಗುತ್ತೆ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು: ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಬೆಳಗಿಗೆ ಬಂದು ಮೂರು ತಿಂಗಳಾಗಿದೆ. ಮಾರ್ಚ್ 2 ರಂದು ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡ್ತಾರೆ. ಅವರು ದೂರನ್ನು ತೆಗೆದುಕೊಳ್ಳದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡ್ತಾರೆ. ಪೊಲೀಸರು ದೂರನ್ನು ಸ್ವೀಕರಿಸಿ ಎಫ್ಐಆರ್ ಮಾಡಿಲ್ಲ. ಎನ್​ಸಿಆರ್ ಸಹ ಮಾಡಲ್ಲ. ನನ್ನ ತೇಜೊವಧೆ ಮಾಡೋಕೆ ನಕಲಿ ಸಿಡಿ ಮಾಡಿದ್ದಾರೆ ಅಂತ ರಮೇಶ್ ಜಾರಕಿಹೊಳಿ ಹೇಳ್ತಾರೆ. ಮೊದಲು ನಾನು ರಾಜೀನಾಮೆ ನೀಡಲ್ಲ ಅಂದರು. ಇದರಲ್ಲಿ ಸಂಚಿದೆ ಅದನ್ನು ಬಯಲು ಮಾಡ್ತೇನೆ ಅಂತ ಹೇಳ್ತಾರೆ. ಮಾಚ್೯ 3ರಂದಯ ರಮೇಶ್ ಜಾರಕಿ ಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಸಿಡಿ ಪ್ರಕರಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

  ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮಾರ್ಚ್ 5 ರಂದು ಐದು ಮಂದಿ ಸಚಿವರ ಕೋರ್ಟ್ ಮೊರೆ ಹೋಗಿ 67 ಮಾಧ್ಯಮಗಳ ಮೂಲಕ ಸುದ್ಧಿಪ್ರಸಾರಕ್ಕೆ ತಡೆ ತರುತ್ತಾರೆ. ಮಾರ್ಚ್ 4ರಂದೇ ದಿನೇಶ್ ಕನಕಪುರದಲ್ಲಿ ಠಾಣೆಯಲ್ಲಿ ಭಯ ಇದೆ ಅಂತಾ ದೂರು ನೀಡ್ತಾರೆ. ಹಾಗಾಗಿ ಮಾರ್ಚ್ 7 ರಂದು ದಿನೇಶ್ ಕಲ್ಲಳ್ಳಿ ದೂರು ವಾಪಸ್ ಪಡೆಯಲು ಮುಂದಾಗ್ತಾರೆ. ಮಾರ್ಚ್ 9ರಂದು ರಮೇಶ್ ಜಾರಕಿಹೊಳಿ  ಗೃಹ ಸಚಿವರಿಗೆ ಪತ್ರ ಬರೆಯುತ್ತಾರೆ. ನಾನು ನಿರಪರಾಧಿ, ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಆ ಸಿಡಿ ನಕಲಿ ಅದರಲ್ಲಿರುವುದು ನಾನಲ್ಲ ಅಂತಾ ಹೇಳುತ್ತಾರೆ. ಜಾರಕಿಹೊಳಿ ಪತ್ರದ ಮೇಲೆ ಮಾರ್ಚ್ 10 ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತಾರೆ. ಎಸ್​ಐಟಿ ರಚಿಸಿ ಎಂದು ಸೂಚಿಸುತ್ತಾರೆ. ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್​ಐಟಿ ರಚನೆ ಮಾಡಲು ಸೂಚಿಸುತ್ತಾರೆ. ಅವರು ವಿಚಾರಣೆ ಮಾಡಿ ವರದಿ ನೀಡಲಿ ಎಂದು ಸೂಚಿಸುತ್ತಾರೆ. ದೂರು ನೀಡದ ಮೇಲೆ ಎಫ್​ಐಆರ್ ದಾಖಲಿಸಬೇಕು, ತನಿಖೆ ನಡೆಸಬೇಕು. ಆ ಬಳಿಕ ಚಾರ್ಜ್ ಶೀಟ್ ದಾಖಲಿಸಬೇಕು. ಇದು ಕಾನೂನಿನ ಪದ್ಧತಿ. ಆದರೆ ಗೃಹ ಸಚಿವರು ವಿಚಾರಣೆ ಮಾಡಿ ವರದಿ ನೀಡಿ ಅಂತಾರೆ. ಪೊಲೀಸ್ ಆಯುಕ್ತ ಕಮಲ್ ಪಂಥ್, ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ ಐ ಟಿ ರಚನೆ ಮಾಡುತ್ತಾರೆ. ಇದರಲ್ಲಿ 6 ಅಧಿಕಾರಿಗಳು ಇರ್ತಾರೆ. ಮಾರ್ಚ್ 11 ರಂದು ಕಮಲ್ ಪಂಥ್ ಆದೇಶ ಮಾಡುತ್ತಾರೆ. ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ಪರವಾಗಿ ನಾಗರಾಜ್ ಎಂಬ ಮಾಜಿ ಶಾಸಕ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಅದರಲ್ಲಿ ಯಾರು ತಪ್ಪೆಸಗಿದ್ದಾರೆ ಎಂಬುದರ ಯಾವುದೇ ಮಾಹಿತಿ ಇಲ್ಲ. ಯಾರ ಹೆಸರನ್ನು ಕೂಡ ಉಲ್ಲೇಖಿಸುವುದಿಲ್ಲ  ಎಂದು ಹೇಳಿದರು.

  ಈ ನಡುವೆ ಮಾರ್ಚ್ 13 ರಂದು ಶ್ರವಣ್ ಮತ್ತು ನರೇಶ್ ಎಂಬುವವರ ಮನೆ ರೇಡ್ ಮಾಡುತ್ತಾರೆ. ಮಾರ್ಚ್ 13ಕ್ಕೆ ಸಂತ್ರಸ್ತ ಮಹಿಳೆ ವಿಡಿಯೋ ರೆಕಾರ್ಡ್ ಮಾಡುತ್ತಾರೆ. ನಾನು ರಮೇಶ್ ಜಾರಕಿಹೊಳಿ ಬಳಿ ಕೆಲಸ ಕೇಳಲು ಹೋಗಿದ್ದೆ. ಅವರು ನನ್ನ ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡರು ಎಂದು ಸಿಡಿಯಲ್ಲಿ ಹೇಳಿದ್ದಾರೆ. ಇದೇ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಅಸೆಂಬ್ಲಿಯಲ್ಲಿ ನಾನು ಹೇಳಿದ್ದೆ. ನಾನು ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್ ಎಲ್ಲಾ ಚರ್ಚೆ ಮಾಡಲು ಅವಕಾಶ ಕೇಳಿದ್ವಿ. ಆದರೆ ಸ್ಪೀಕರ್ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲು ಆಗೋಲ್ಲ ಅಂದರು. ಇದಾದ ಬಳಿಕ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ ಐ ಆರ್ ದಾಖಲಾಗುತ್ತದೆ. ಐಪಿಸಿ 376 ಸಿ ಅಡಿ ಕೇಸ್ ದಾಖಲಾಗುತ್ತದೆ. ಇದರ ಅಡಿ 10 ವರ್ಷದವರೆಗೆ ಶಿಕ್ಷೆಗೆ ಅವಕಾಶ ಇದೆ. ತನಿಖೆ ಸರಿಯಾಗಿ ನಡೆಯಲೇ ಇಲ್ಲ. ಷಡ್ಯಂತ್ರ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯಿತೇ ಹೊರತು 376 ಅಡಿ ತನಿಖೆ ನಡೆದಿಲ್ಲ. 60 ದಿನಗಳ ಒಳಗೆ ತನಿಖೆ ಮುಗಿಸುವುದು ಕಡ್ಡಾಯ. ಆ ಮೇಲೆ ಸ್ವತಂತ್ರ ತನಿಖೆ ಕೋರಿ ಹೈಕೋರ್ಟ್ ನಲ್ಲಿ ಪಿಐಎಲ್ ದಾಖಲಾಗುತ್ತದೆ. ನಾನು ಕೂಡ ಸತ್ಯ ಹೊರಗೆ ಬರಲು ಹೈಕೋರ್ಟ್ ನಿಗಾದಲ್ಲಿ ಸ್ವತಂತ್ರ ತನಿಖೆ ಸಂಸ್ಥೆಯಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದೆ.  ಪಿಐಎಲ್ ಕೂಡ ಇದೇ ಮನವಿ ಮಾಡಿತ್ತು ಎಂದರು.

  ಸಂತ್ರಸ್ತ ಮಹಿಳೆ ಲಿಖಿತ ದೂರನ್ನ ಕೂಡ ನೀಡುತ್ತಾಳೆ. ಮಾ.30 ರಂದು ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಾಗುತ್ತದೆ. ರಮೇಶ್ ಜಾರಕಿಹೊಳಿ ಮಹಿಳೆಯ ನಂಬಿಕೆಯನ್ನ ದುರುಪಯೋಗ ಮಾಡಿಕೊಂಡಿರುವುದನ್ನ ಸೂಚಿಸುತ್ತದೆ. ಕೆಲಸ ಕೊಡಿಸುವುದಾಗಿ ಲೈಂಕಿವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿದೆ. ಕಾನೂನು ಪ್ರಕಾರ ರಮೇಶ್ ಜಾರಕಿಹೊಳಿ ಕೂಡಲೇ ಅರೆಸ್ಟ್ ಆಗಬೇಕಿತ್ತು. ಭಾರತ ದೇಶದಲ್ಲಿ ರೇಪ್ ಕೇಸ್ ಗೆ ಸಂಬಂಧಿಸಿದಂತೆ ಅರೆಸ್ಟ್ ಮಾಡದೇ ಇರುವುದು ಇದೇ ಕೇಸ್ ನಲ್ಲಿ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.

  ನನಗೆ ಇರುವ ಮಾಹಿತಿ ಪ್ರಕಾರ ರಮೇಶ ಜಾರಕಿಹೊಳಿ ಶನಿವಾರ ಗೃಹ ಸಚಿವರನ್ನು ಹುಬ್ಬಳ್ಳಿಯಲ್ಲಿ ಭೇಟಿ‌ ಮಾಡಿದ್ದಾರೆ. ಆರೋಪಿ‌ ಸ್ಥಾನದಲ್ಲಿ ಇದ್ದವರು ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಪ್ರಕರಣ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ, ಮಾತನಾಡಿದ್ದಾರೆ. ಒಬ್ಬ ರೇಪ್ ಆರೋಪಿ ಗೃಹ ಸಚಿವರನ್ನು ಭೇಟಿ ಮಾಡಿರುವುದು ಇದೇ ಮೊದಲು. ಪ್ರಾರಂಭದಲ್ಲಿ ವಿಡಿಯೋ ಫೇಕ್ ಎಂದು ಹೇಳಿದ್ದರು. ಇದೀಗ ವಿಡಿಯೋದಲ್ಲಿ ಇರುವುದು ನಾನೇ ಎಂದು ಹೇಳಿದ್ದಾರೆ. ಅದು ನಾನು, ನಾನೇ - ಅವಳು, ಅವಳೇ ಎಂದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ನಡೆಯನ್ನು ವ್ಯಂಗ್ಯ ಮಾಡಿದರು.

  ಇದನ್ನು ಓದಿ: BS Yediyurappa: ಸಿಎಂ ಯಡಿಯೂರಪ್ಪ ಸದ್ಯಕ್ಕೆ ಸೇಫ್; ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದ ಬಿಜೆಪಿ ಹೈಕಮಾಂಡ್

  ಸರ್ಕಾರದ ಸಂಪೂರ್ಣ ರಕ್ಷಣೆ ಇದ್ದ ಹಿನ್ನಲೆಯಲ್ಲಿ ರಮೇಶ್ ಜಾರಕಿಹೊಳೆಯನ್ನು ಬಂಧಿಸಿಲ್ಲ. ಹೀಗಾಗಿ ರಮೇಶ್ ಆರಾಮಾಗಿ ಓಡಾಡುತ್ತಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗ್ತಾರೆ. ಇಂದು ಕೂಡ ರಮೇಶ್ ಜಾರಕಿಹೊಳಿ ಫ್ರೀಯಾಗಿ ಓಡಾಡಿಕೊಂಡಿದ್ದಾರೆ. ಕಾರಣ ಸರ್ಕಾರ ರಮೇಶ್ ಜಾರಕಿಹೊಳಿಗೆ ರಕ್ಷಣೆ ನೀಡುತ್ತಿದೆ.‌ ಪೊಲೀಸರಿಗೆ ಅರೆಸ್ಟ್ ಮಾಡಬೇಡಿ ಎಂದು ಒತ್ತಡ ಹಾಕಿದ್ದಾರೆ. ಇತ್ತಿಚೆಗೆ ಎಸ್ ಐ ಟಿ ಮುಖ್ಯಸ್ಥ ಸೌಮೇಂಧು ಮುಖರ್ಜಿಯನ್ನ ರಜೆಯ ಮೇಲೆ ಕಳುಹಿಸಲಾಗಿದೆ. ಈ ಮೂಲಕ ಎಸ್ ಐ ಟಿ ನಿಷ್ಕ್ರಿಯಗೊಳಿಸಿದ್ದಾರೆ. ಮೇಲ್ನೋಟಕ್ಕೆ ಸರ್ಕಾರ ಆರೋಪಿಯನ್ನ ರಕ್ಷಣೆ ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಆರೋಪಿಸಿದರು.

  ರಮೇಶ್ ಜಾರಕಿಹೊಳಿ ಬಿಪಿ, ಶುಗರ್ ಪರೀಕ್ಷೆ ಮಾಡಿ ಕಳುಹಿಸಿದ್ದಾರೆ. ಇದುವರೆಗೂ ಡಿಎನ್ ಎ ಟೆಸ್ಟ್ ಮಾಡಿಲ್ಲ. ಕಾನೂನು ಪ್ರಕರಣ ಡಿ ಎನ್ ಎ ಟೆಸ್ಟ್ ಮಾಡಬೇಕಿತ್ತು. ಸುಪ್ರೀಂ ಕೋರ್ಟ್ ಆರ್ಡರ್ ಕೂಡ ಇದೆ. ಆರೋಪಿಯ ಡಿ ಎನ್ ಐ ಟೆಸ್ಟ್ ಮಾಡಬೇಕು ಎಂದು. ಆದರೆ ಸರ್ಕಾರ ರಮೇಶ್ ಜಾರಕಿಹೊಳಿ ರಕ್ಷಣೆ ಮಾಡುತ್ತಿದೆ. ಒಪ್ಪಿಗೆ ಮೇರ ಸೆಕ್ಸ್ ನಡೆದಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸರ್ಕಾರ ರಾಮನ ಬಗ್ಗೆ ಜಪ ಮಾಡುತ್ತಾರೆ. ಮಹಿಳೆಯರ ಬಗ್ಗೆ ಹೆಚ್ಚು ಮಾತಾಡುತ್ತಾರೆ. ಬಿಜೆಪಿ ಸರ್ಕಾರ ಬರಲು ರಮೇಶ್ ಜಾರಕಿಹೊಳಿ ಕಾರಣವಾಗಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿನ ಇದುವರೆಗೂ ಅರೆಸ್ಟ್ ಮಾಡಿಲ್ಲ. ರಮೇಶ್ ಜಾರಕಿಹೊಳಿನ ಗೃಹ ಸಚಿವ ಬಸವರಾಜ್ ಬೊಮ್ಮಯಿ ರಕ್ಷಣೆ ಮಾಡುತ್ತಿದ್ದಾರೆ. ಗೃಹ ಮಂತ್ರಿಯಾಗಿ ಬಸವರಾಜ್ ಬೊಮ್ಮಯಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಈ ಕೂಡಲೇ ಬಸವರಾಜ್ ಬೊಮ್ಮಯಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೈಕೋರ್ಟ್ ‌ನಿಗಾದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು. ಆರೋಪಿಯನ್ನು ಕೂಡಲೇ ಬಂಧಿಸಬೇಕು. ರಮೇಶ್ ಜಾರಕಿಹೊಳಿ ರಕ್ಷಣೆಗೆ ನಿಂತಿರುವ ಸಚಿವರ ಬಗ್ಗೆ ತನಿಖೆಯಾಗಬೇಕು. ರಮೇಶ್ ಜಾರಕಿಹೊಳಿ ಅರೆಸ್ಟ್ ಮಾಡದೇ ಇದ್ರೆ ಮಹಿಳೆಯರಿಗೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂದು ಗೊತ್ತಾಗುತ್ತೆ ಎಂದು ಆಗ್ರಹಿಸಿದರು.
  Published by:HR Ramesh
  First published: