ಸಂಪುಟ ಸರ್ಕಸ್​ನಲ್ಲಿ ದಿಕೆಟ್ಟ ಆಡಳಿತ; ಸರ್ಕಾರದ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಟೀಕೆ

ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ಎರಡು ದಿನದ ಹಿಂದೆ ದೆಹಲಿಗೆ ತೆರಳಿದ್ದರು. ಆದರೆ, ಹೈಕಮಾಂಡ್ ಯಾವುದಕ್ಕೂ ಗ್ರೀನ್ ಸಿಗ್ನಲ್ ನೀಡಿಲ್ಲ. ಏತನ್ಮಧ್ಯೆ ರಾಜ್ಯದಲ್ಲಿ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಸಕಲ ಸರ್ಕಸ್ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ-ಯಡಿಯೂರಪ್ಪ.

ಸಿದ್ದರಾಮಯ್ಯ-ಯಡಿಯೂರಪ್ಪ.

 • Share this:
  ಬೆಂಗಳೂರು; ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಇದೀಗ ಸಂಪುಟ ರಚನೆ ಸರ್ಕಸ್ ಆರಂಭವಾಗಿದೆ. ಬಿಜೆಪಿ ನಾಯಕರು ತಾ ಮುಂದು ನಾ ಮುಂದು ಎಂದು ಸಚಿವ ಸ್ಥಾನಕ್ಕೆ ಮುಗಿಬಿದ್ದಿದ್ದಾರೆ. ಇದೇ ವಿಷಯವಾಗಿ ಹಲವು ಮುಖಂಡರು ತಾವೂ ಸಚಿವಾಕಾಂಕ್ಷಿ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೇ ವಿಷಯವಾಗಿ ಇಂದು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸರ್ಕಸ್ ನಲ್ಲಿ ಆಡಳಿತ ದಿಕ್ಕೆಟ್ಟು ಹೋಗಿದೆ ಎಂದು ಆರೋಪಿಸಿದ್ದಾರೆ.

  ಈ ವಿಷಯವಾಗಿ ಇಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಸಿಎಂ ಬದಲಾವಣೆಯೋ. ಇವೆಲ್ಲ ನಿಮ್ಮ ಪಕ್ಷದ ಹಣೆಬರಹ. ಮೊದಲು ಏನಾದರೂ ನಿರ್ಧಾರ ಕೈಗೊಂಡು ಬಿಕ್ಕಟ್ಟು ಕೊನೆಗೊಳಿಸಿ. ಆಡಳಿತದ ಕಡೆ ಗಮನ ಕೊಟ್ಟು ರಾಜ್ಯವನ್ನು ಉಳಿಸಿ ಎಂದು  ಆಗ್ರಹಿಸಿದ್ದಾರೆ.

  ಇದನ್ನು ಓದಿ: ಕಾರವಾರದ ಸಮುದ್ರ ತೀರದಲ್ಲಿ ಮತ್ತೆ ನೀಲಿ ‌ಬೆಳಕು; ಅಲೆಗಳಲ್ಲಿ ಕಾಣುವ ವಿಸ್ಮಯಕಾರಿ ಬೆಳಕು!

  ಹಿಂದೆ ನಮ್ಮ ವಿರುದ್ದ ‘ಹೈಕಮಾಂಡ್ ಸಂಸ್ಕೃತಿ. ಮೂಲನಿವಾಸಿಗಳು-ವಲಸಿಗರು ಅಂತ ಟೀಕೆ ಮಾಡುತ್ತಿದ್ದರು. ಜೊತೆಗೆ ಕುಟುಂಬ ರಾಜಕಾರಣವೆಂದು ಹಗಲು ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು. ಈಗ ಅದೇ ಆರೋಪಗಳನ್ನು ಪರಸ್ಪರ ಮಾಡ್ಕೊಂಡು ನೀವು ಬೆತ್ತಲಾಗುತ್ತಿದ್ದೀರಿ ಎಂದುಸರ್ಕಾರ ದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.  ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ಎರಡು ದಿನದ ಹಿಂದೆ ದೆಹಲಿಗೆ ತೆರಳಿದ್ದರು. ಆದರೆ, ಹೈಕಮಾಂಡ್ ಯಾವುದಕ್ಕೂ ಗ್ರೀನ್ ಸಿಗ್ನಲ್ ನೀಡಿಲ್ಲ. ಏತನ್ಮಧ್ಯೆ ರಾಜ್ಯದಲ್ಲಿ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಸಕಲ ಸರ್ಕಸ್ ನಡೆಸುತ್ತಿದ್ದಾರೆ.
  Published by:HR Ramesh
  First published: