ಪ್ರಧಾನಿ ಹೆಲಿಕಾಪ್ಟರ್ ಪರಿಶೀಲನೆಗೆ ಯತ್ನಿಸಿದ್ದ ಐಎಎಸ್ ಅಧಿಕಾರಿ ಅಮಾನತು; ಖಂಡನಾರ್ಹ ಎಂದ ಸಿದ್ದರಾಮಯ್ಯ

ಪ್ರಚಾರಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ತಪಾಸಣೆ ಮಾಡಲು ಚುನಾವಣಾ ಅಧಿಕಾರಿ  ಮೊಹಮ್ಮದ್ ಮೊಹ್ಸಿನ್ ಯತ್ನಿಸಿದ್ದರು. ಬಳಿಕ ಒಡಿಶಾದ ಸಂಬಲ್ಪುರದ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಿನ್ಸ್ ಅವರನ್ನು ನಿಯಮ ಉಲ್ಲಂಘಿಸಿದ್ದಾರೆ ಎಂದು ಅಮಾನತುಗೊಳಿಸಲಾಯ್ತು.

Ganesh Nachikethu | news18
Updated:April 19, 2019, 11:36 AM IST
ಪ್ರಧಾನಿ ಹೆಲಿಕಾಪ್ಟರ್ ಪರಿಶೀಲನೆಗೆ ಯತ್ನಿಸಿದ್ದ ಐಎಎಸ್ ಅಧಿಕಾರಿ ಅಮಾನತು; ಖಂಡನಾರ್ಹ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ
  • News18
  • Last Updated: April 19, 2019, 11:36 AM IST
  • Share this:
ಬೆಂಗಳೂರು(ಏ.19): ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ಪರಿಶೀಲಿಸಿದ ಕರ್ನಾಟಕ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್​​ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಖಂಡಿಸಿದ್ದಾರೆ. ಈ ಬಗ್ಗೆ ಖುದ್ದು ಟ್ವೀಟ್​​ ಮಾಡಿರುವ ಸಿದ್ದರಾಮಯ್ಯ ಅವರು, ಸ್ವಯಂ ಘೋಷಿತ ಚೌಕಿದಾರ್ ಹೆಲಿಕಾಪ್ಟರ್ ಪರಿಶೀಲಿಸಿದ್ದಕ್ಕೆ ದಿಟ್ಟ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇಂತಹ ಐಎಎಸ್​​ ಅಧಿಕಾರಿ ​ಮೊಹಮ್ಮದ್ ಮೊಹ್ಸಿನ್ ಅವರನ್ನು ಸೇವೆಯಿಂದ ವಜಾಗೊಳಿಸಿರುವುದು ಖಂಡನಾರ್ಹ. ಮುಚ್ಚಿಡಲು ಏನು ಇಲ್ಲದಿದ್ದಾಗ ಅಭದ್ರತೆ ಯಾಕೆ ಮಿಸ್ಟರ್ ಚೌಕಿದಾರ್? ಎಂದು ಪ್ರಶ್ನಿಸಿದ್ದಾರೆ.​​

ಇನ್ನು ಎರಡು ದಿನದ ಹಿಂದೆ ಪ್ರಚಾರಕ್ಕೆಂದು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ತಪಾಸಣೆ ಮಾಡಲು ಚುನಾವಣಾ ಅಧಿಕಾರಿ  ಮೊಹಮ್ಮದ್ ಮೊಹ್ಸಿನ್ ಯತ್ನಿಸಿದ್ದರು. ಬಳಿಕ ಒಡಿಶಾದ ಸಂಬಲ್ಪುರದ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಿನ್ಸ್ ಅವರನ್ನು ನಿಯಮ ಉಲ್ಲಂಘಿಸಿದ್ದಾರೆ ಎಂದು ಅಮಾನತುಗೊಳಿಸಲಾಯ್ತು. ಜತೆಗೆ ಮುಂದಿನ ಆದೇಶದವರೆಗೂ ಜಿಲ್ಲಾ ಕೇಂದ್ರದಲ್ಲಿರುವಂತೆ ಭಾರತೀಯ ಚುನಾವಣಾ ಆಯೋಗ ಕಾರ್ಯದರ್ಶಿ ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದರು.

ಮಂಗಳವಾರ ಎರಡನೇ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಲು ಮೋದಿ ಸಂಬಲ್ಪುರಕ್ಕೆ ಬಂದಿದ್ದರು. ಈ ವೇಳೆ ಮೋದಿ ಅವರ ಹೆಲಿಕಾಪ್ಟರ್ ಅನ್ನು ಮೊಹ್ಸಿನ್ ಪರಿಶೀಲನೆ ನಡೆಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಒಟ್ಟು 15 ನಿಮಿಷ ಮೋದಿ ಅವರ ಹೆಲಿಕಾಪ್ಟರ್ ಅನ್ನು ಅಧಿಕಾರಿ ತಪಾಸಣೆ ಮಾಡಿದ್ದಾರೆ ಎಂದು ವರದಿಯೂ ಮಾಡಲಾಗಿತ್ತು.

ಇದನ್ನೂ ಓದಿ: ತಪ್ಪಾಗಿ ಬಿಜೆಪಿಗೆ ವೋಟ್​​ ಮಾಡಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿಕೊಂಡ ಬಿಎಸ್​​ಪಿ ಬೆಂಬಲಿಗ; ವಿಡಿಯೋ ವೈರಲ್​​

ಅಮಾನತು ಮಾಡಿದ್ದೇಕೆ?: ಕೇಂದ್ರ ಚುನಾವಣೆ ಆಯೋಗ ಚುನಾವಣಾ ಸಮಯದಲ್ಲಿ ಎಸ್‍ಪಿಜಿ ಭದ್ರತೆ ಇರುವ ವ್ಯಕ್ತಿಗಳಿಗೆ ತಪಾಸಣೆಯಿಂದ ವಿನಾಯಿತಿಯನ್ನು ನೀಡಿರುತ್ತದೆ. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮೊಹ್ಸಿನ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಡಿಐಜಿ ಅವರ ವರದಿಯ ಆಧಾರದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ್ದಕ್ಕೆ ಚುನಾವಣಾ ಆಯೋಗ ಮೊಹಿನ್ಸ್ ಅವರನ್ನು ಅಮಾನತುಗೊಳಿಸಿದೆ ಎನ್ನಲಾಗಿದೆ.
----------------
First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading