ಕುರಿ ಕಾಯೋ ತೋಳ ಅಂದರೆ ಸಂಬಳ ಬೇಡ ಅಂತಂತೆ.. CM ಬಗ್ಗೆ ಸಿದ್ದರಾಮಯ್ಯ ಹೀಗಂದಿದ್ದೇಕೆ?

ನಾನು ಕುಟುಂಬ ರಾಜಕಾರಣ ತಪ್ಪು ಅಂಥಾ ಹೇಳ್ಲಿಲ್ಲ. ಜನ ಬಯಸಿದರೆ ನಿಲ್ಲಬೇಕು, ಆದರೆ ಒಂದೇ ಕುಟುಂಬದವರು ನಿಂತಿದ್ದಾರೆ ಅಂಥಾ ಹೇಳಿದ್ದು. ಭವಾನಿ ಜಿ.ಪಂ. ಸದಸ್ಯರಾಗಿದ್ರು, ಒಬ್ಬ ಮಗ ಎಂಪಿ ಆಗಿದ್ದಾನೆ, ರೇವಣ್ಣ ಶಾಸಕರಾಗಿದ್ದಾರೆ. ಬೇರೆಯವರಿಗೆ ಕೊಡಬಹುದಿತ್ತು , ಅಲ್ಪಸಂಖ್ಯಾತರಿಗೆ ಕೊಡ್ಲಿ ಎಂದು ಒತ್ತಾಯಿಸಿದರು.

ಸಿಎಂ ಬೊಮ್ಮಾಯಿ - ಸಿದ್ದರಾಮಯ್ಯ

ಸಿಎಂ ಬೊಮ್ಮಾಯಿ - ಸಿದ್ದರಾಮಯ್ಯ

  • Share this:
ಹಾಸನ: ವಿಧಾನ ಪರಿಷತ್​ ಚುನಾವಣೆಗೆ (MLC Election) ದಿನಗಣನೆ ಶುರುವಾಗಿದ್ದು, ಘಟಾನುಘಟಿ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್​ (CONGRESS) ನಾಯಕ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಇಂದು ಜೆಡಿಎಸ್​ (JDS) ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಪ್ರಚಾರ ನಡೆಸಿದರು. ಅರಕಲಗೂಡಿನಲ್ಲಿ ಸಿದ್ದರಾಮಯ್ಯ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಬಳಿಕ ಮಾತನಾಡಿದ ಅವರು ಬಿಜೆಪಿ (BJP) ನಾಯಕ ವಿರುದ್ಧ ಅಬ್ಬರದ ಭಾಷಣ ಮಾಡಿದರು. ಬಿಜೆಪಿ ಸರ್ಕಾರಿದ ಮೇಲೆ 40 ಪರ್ಸೆಂಟ್​ ಕಮಿಷನ್​ ಗಂಭೀರ ಆರೋಪ ಇದೆ. ಇದಕ್ಕೆ ಬಿಎಸ್​ ಯಡಿಯೂರಪ್ಪ ಕಿತ್ತಾಕಿದ ಮೇಲೆ ಮುಖ್ಯಮಂತ್ರಿ ಆಗಿದರಲ್ಲಾ ಬಸವರಾಜ ಬೊಮ್ಮಯಿ ಅವರು ಅಧಿಕಾರಿಗಳ ಕೈಯಲ್ಲಿ ತನಿಖೆ ಮಾಡಿಸುತ್ತೇನೆ ಎನ್ನುತ್ತಿದ್ದಾರೆ. ಕುರಿ ಕಾಯೋ ತೋಳ‌ ಅಂದರೆ ಸಂಬಳ ಬೇಡ ಅಂತಂತೆ. ಯಾರೂ ಲಂಚ ತಿಂದಿದರೆ ಅವರ ಕೈಯಲ್ಲಿ ತನಿಖೆ ಮಾಡಿಸುತ್ತಿದ್ದಾರೆ ಎಂದು ಗಾದೆ ಮಾತಿನ ಮೂಲಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ರಾಜಕೀಯದಿಂದ ನಿವೃತ್ತಿಯಾಗುತ್ತೇನೆ.. ಸಿದ್ದರಾಮಯ್ಯ ಸವಾಲು

ಖಾಸಗಿ ಏಜೆನ್ಸಿ ಮೂಲಕ ತನಿಖೆ ಮಾಡಿಸಬಹುದಿತ್ತು. ಈ‌ ಸರ್ಕಾರ ಭ್ರಷ್ಟ ಸರ್ಕಾರ, ದುರಾಡಳಿತ ಸರ್ಕಾರ, ಕೊರೊನಾನ ಸರಿಯಾಗಿ ನಿಯಂತ್ರಣ ಮಾಡಲಿಲ್ಲ. ಕರ್ನಾಟಕದಲ್ಲಿ ರಾಜಕೀಯ ಧೃವಿಕರಣ ನಡೆಯುತ್ತಿದೆ, ಜನ ಬದಲಾವಣೆ ಬಯಸುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಮುಂದಿಟ್ಟುಕೊಂಡು ಓಟು ಕೇಳುತ್ತೇವೆ. ನಾನು ಐದು ವರ್ಷ ಸಿಎಂ ಆಗಿದ್ದೆ, ಎನ್.ಓ.ಸಿ. ನಾನೇ ಕೊಡುತ್ತಿದ್ದೆ. ಯಾವುದೇ ಕಂಟ್ರಾಕ್ಟರ್ ನಮ್ಮ‌ ಮೇಲೆ ಕಂಪ್ಲೆಂಟ್ ಮಾಡಲಿಲ್ಲ. ಸಿದ್ದರಾಮಯ್ಯ ಎನ್.ಓ.ಸಿ. ಕೊಡಕೆ ಒಂದು ರೂಪಾಯಿ ಲಂಚ ತೆಗೆದುಕೊಂಡಿದ್ದಾನೆ ಎಂದು ಹೇಳಲಿ, ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲೆಸೆದರು. ಈಗ ಎಲ್ಲಾ ಇಲಾಖೆಗಳಲ್ಲಿ ಲಂಚ ನಡೆಯುತ್ತಿದೆ, ಗಬ್ಬೆದ್ದು ಹೋಗಿದೆ ಆಡಳಿತ, ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: JDS ಬೆಂಬಲ ಇಲ್ಲದಿದ್ದರೆ ಡಿಕೆಶಿ ಸೋದರ ಡಿಕೆ ಸುರೇಶ್ ಸಹ ಗೆಲ್ಲುತ್ತಿರಲಿಲ್ಲ: CT Ravi ತಿರುಗೇಟು

ಸುಮ್ ಸುಮ್ನೆ ಥ್ಯಾಂಕ್ಸ್ ಹೇಳ್ತಾರಾ..?

ಹಾಸನದಲ್ಲಿ ಜೆಡಿಎಸ್-ಬಿಜೆಪಿ ಯಾವ ರೀತಿ ಒಳ ಒಪ್ಪಂದ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಕುಮಾರಸ್ವಾಮಿ ಹೇಳಿರಬಹುದು ಸ್ಥಳೀಯ ಲೀಡರ್ ಗೆ ಬಿಟ್ಟಿದ್ದೀನಿ ಅಂಥಾ. ಯಡಿಯೂರಪ್ಪ ಏನು ಹೇಳಿದ್ದಾರೆ, ಕುಮಾರಣ್ಣ ಥ್ಯಾಂಕ್ಸ್ ಅಂಥ ಹೇಳಿದ್ದಾರೆ. ಸುಮ್ ಸುಮ್ನೆ ಥ್ಯಾಂಕ್ಸ್ ಹೇಳ್ತಾರಾ, ಒಳ ಒಪ್ಪಂದ ಆಗಿರುವುದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ ನೂರಕ್ಕೆ ನೂರು ಗೆಲ್ತಾರೆ. ಕಳೆದ ಬಾರಿ ನಮ್ಮ ಅಭ್ಯರ್ಥಿ ಗೋಪಾಲಸ್ವಾಮಿ ಗೆಲ್ತಾರೆ ಅಂತ ಒಬ್ಬರು ಹೇಳ್ತಿರ್ತಿಲಾ ಆದರೆ ಗೆದ್ರು ಎಂದರು.

ಒಂದೇ ಕುಟುಂಬದವರು ನಿಂತಿದ್ದಾರೆ

ನಾವಂತು ಜೆಡಿಎಸ್​​ನ ಓಟು ಕೇಳಿಲ್ಲ, ಕೋಮುವಾದಿಗಳ‌ ಜೊತೆ ನಾವು ರಾಜಕಾರಣ ಮಾಡಲ್ಲ. ಅವರ ಜೊತೆ ಇರುವವರ ಜೊತೆನೂ ಮಾಡಲ್ಲ. ಜನರಿಗೆ ಬಿಜೆಪಿ, ಜೆಡಿಎಸ್ ಬಗ್ಗೆ ವಾಕರಿಕೆ ಇದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಂಥಾ ಜನರು ಮಾತನಾಡುತ್ತಿದ್ದಾರೆ ಎಂದರು. ಇನ್ನು ಸೂರಜ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಕುಟುಂಬ ರಾಜಕಾರಣ ತಪ್ಪು ಅಂಥಾ ಹೇಳ್ಲಿಲ್ಲ. ಜನ ಬಯಸಿದರೆ ನಿಲ್ಲಬೇಕು, ಆದರೆ ಒಂದೇ ಕುಟುಂಬದವರು ನಿಂತಿದ್ದಾರೆ ಅಂಥಾ ಹೇಳಿದ್ದು. ಭವಾನಿ ಜಿ.ಪಂ. ಸದಸ್ಯರಾಗಿದ್ರು, ಒಬ್ಬ ಮಗ ಎಂಪಿ ಆಗಿದ್ದಾನೆ, ರೇವಣ್ಣ ಶಾಸಕರಾಗಿದ್ದಾರೆ. ಬೇರೆಯವರಿಗೆ ಕೊಡಬಹುದಿತ್ತು , ಅಲ್ಪಸಂಖ್ಯಾತರಿಗೆ ಕೊಡ್ಲಿ ಎಂದು ಒತ್ತಾಯಿಸಿದರು. ಒಂದು ಕುಟುಂಬದಲ್ಲಿ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ ಎಂಬ ರೇವಣ್ಣ ಹೇಳಿಕೆಗೆ, ರೇವಣ್ಣನಿಗೆ ಕಾನೂನು ಗೊತ್ತಿಲ್ಲ. ಯಾವುದಕ್ಕೆ ಕಾಯ್ದೆ ತರಬೇಕು, ಯಾವುದಕ್ಕೆ ತರಬಾರದು ಅನ್ನೋದು ರೇವಣ್ಣಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ: HDK ವಾಗ್ದಾಳಿ

ಸಿಎಂ ಬದಲಾವಣೆ ಬಗ್ಗೆ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ನಿರಾಣಿ ಮುಖ್ಯಮಂತ್ರಿ ಆಗ್ತಾರೆ ಅಂಥಾ ಈಶ್ವರಪ್ಪ ಹೇಳಿದ್ದಾರೆ. ಈಶ್ವರಪ್ಪನನ್ನು ಯಾರೂ ಅಪಾಯಿಂಟ್ ಮಾಡಿದ್ದಾರೋ ಅವರ ಮೇಲೆ‌ ಇವರಿಗೆ ನಂಬಿಕೆ ಇಲ್ಲ. ಸಿಎಂ ರಾಜ್ಯಪಾಲರಿಗೆ ರೆಕ್ಮೆಂಡ್ ಮಾಡಿದ್ಮೇಲೆ ಈಶ್ವರಪ್ಪ ಸಚಿವರಾಗದು, ಅವರ ಮೇಲೆನೆ ಈಶ್ವರಪ್ಪಂಗೆ ನಂಬಿಕೆ ಇಲ್ಲ ಎಂದರು.
Published by:Kavya V
First published: