ಬೆಂಗಳೂರು: ಇಂದು ಕೇವಲ ಎಂಟು ಜನರು ಮಾತ್ರ ಸಚಿವರಾಗಿ (Ministers) ಪ್ರಮಾಣ ವಚನ ಸ್ವೀಕರಿಸಿಲಿರುವ ಕಾರಣ ನಿಯೋಜಿತ ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ಶಾಸಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇಂದು ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುರುವಾರ ದೆಹಲಿಯ ಹೈಕಮಾಡ್ (Congress High Command) ನಾಯಕರ ಸಮ್ಮುಖದಲ್ಲಿ ಸಭೆ ನಡೆದಿತ್ತು. ಸಭೆ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಯಾರನ್ನು ಕ್ಯಾಬಿನೆಟ್ಗೆ ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿತ್ತು. ಕೊನೆಗೆ ಅಂತಿಮವಾಗಿ ಆರು ಸಮುದಾಯದ ಎಂಟು ಜನರಿಗೆ ಸಚಿವ ಸ್ಥಾನ ಸಿಕ್ಕಿದೆ.
ಕಾಂಗ್ರೆಸ್ ಬಹುಮತ ಪಡೆದುಕೊಳ್ಳುತ್ತಿದ್ದಂತೆ ಹಲವು ಶಾಸಕರು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಿದ್ದರು. ಮೊದಲ ಹಂತದಲ್ಲಿ ಕೇವಲ ಎಂಟು ಜನರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಆಪ್ತರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮುನಿಸಿಕೊಂಡವರು ಯಾರು?
ಹೆಚ್.ಸಿ.ಮಹಾದೇವಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಭೈರತಿ ಸುರೇಶ್, ಬಸವರಾಜ್ ರಾಯರೆಡ್ಡಿ, ಶಿವರಾಜ್ ತಂಗಡಿ, ಇ ತುಕರಾಮ್, ಸಂತೋಷ್ ಲಾಡ್, ರಾಘವೇಂದ್ರ ಹಿಟ್ನಾಳ್, ರಿಜ್ವಾನ್ ಅರ್ಷದ್, ನಾರಾಯಣಸ್ವಾಮಿ, ಅಶೋಕ್ ಪಟ್ಟಣ್, ಯು ಟಿ ಖಾದರ್, ಪ್ರಕಾಶ್ ರಾಥೋಡ್, ಕೆ ಎನ್ ರಾಜಣ್ಣ
ಕಂಠೀರವ ಸ್ಟೇಡಿಯಂನಲ್ಲಿ ನೂಕುನುಗ್ಗಲು
ಪ್ರಮಾಣ ವಚನ ಕಾರ್ಯಕ್ರಮ 12.30ಕ್ಕೆ ನಿಗದಿಯಾಗಿದ್ರೂ ಬೆಳಗ್ಗೆ 8 ಗಂಟೆಯಿಂದಲೇ ಸ್ಟೇಡಿಯಂನತ್ತ ಆಗಮಿಸುತ್ತಿದ್ದಾರೆ. ದಿಢೀರ್ ಅಂತ ಜನರು ಆಗಮಿಸಿದ ಕಾರಣ ಪೊಲೀಸರು ಎಲ್ಲರನ್ನು ತಡೆಯಲು ಹೈರಾಣು ಆದರು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡುವ ಅನಿವಾರ್ಯ ಎದುರಾಯ್ತು.
ಗೇಟ್ ನಂಬರ್ ಮೂರರಲ್ಲಿ ನೂಕು ನುಗ್ಗಲಿನಿಂದಾಗಿ ಪೊಲೀಸ್ ಪೇದೆಯ ಶರ್ಟ್ ಹರಿದು ಹೋಗಿದೆ. ಕೊನೆಗೆ ಪೊಲೀಸ್ ಪೇದೆಯನ್ನು ಆಟೋದಲ್ಲಿ ಕಳುಹಿಸಲಾಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ