ಧಮ್ ಬೇಕಿರೋದು ಕುಸ್ತಿಯಾಡೋಕಲ್ಲ, ಕೇಂದ್ರದಿಂದ ಹಣ ತರೋಕೆ; ಸಿದ್ದರಾಮಯ್ಯ ಟೀಕೆ

ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರೂ ಪ್ರಯೋಜನವಿಲ್ಲ. ಅಶ್ವಥ್ ನಾರಾಯಣ್ ಅವರಿಗೆ ಹತ್ತು ಪಟ್ಟು ಧಮ್ ಇದ್ದರೆ ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಬರಬೇಕಾದ ಪರಿಹಾರ ತಗೆದುಕೊಂಡು ಬರಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

news18-kannada
Updated:October 25, 2020, 2:26 PM IST
ಧಮ್ ಬೇಕಿರೋದು ಕುಸ್ತಿಯಾಡೋಕಲ್ಲ, ಕೇಂದ್ರದಿಂದ ಹಣ ತರೋಕೆ; ಸಿದ್ದರಾಮಯ್ಯ ಟೀಕೆ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
  • Share this:
ಕಲಬುರ್ಗಿ (ಅ. 25): ಸಿದ್ಧರಾಮಯ್ಯನವರಿಗಿಂತ ನಮಗೆ ಹೆಚ್ಚು ಧಮ್ ಇದೆ ಎಂಬ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆಗೆ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಧಮ್ ಅಂದ್ರೆ ಕುಸ್ತಿ ಮಾಡೋದು ಅಂತಲ್ಲ. ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ಪರಿಹಾರ ತಗೆದುಕೊಂಡು ಬರಲಿ. ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರೂ ಪ್ರಯೋಜನವಿಲ್ಲ. ಅಶ್ವಥ್ ನಾರಾಯಣ್ ಅವರಿಗೆ ಹತ್ತು ಪಟ್ಟು ಧಮ್ ಇರಲಿ. ಆದರೆ ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಬರಬೇಕಾದ ಪರಿಹಾರ ತಗೆದುಕೊಂಡು ಬರಲಿ. ನಾನು ಆ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು ಕುಸ್ತಿ ಮಾಡೋದು ಅಂತಲ್ಲ. ನೆರೆ ಸಂತ್ರಸ್ಥರಿಗೆ ಇನ್ನು ನಯಾ ಪೈಸೆ ಹಣ ನೀಡಿಲ್ಲ. ರಾಜ್ಯದಲ್ಲಿ ಇಷ್ಟೆಲ್ಲ ತೊಂದರೆಗಳಾದರೂ ಪ್ರಧಾನಿ ಬಳಿಗೆ ಹೋಗೋ ಧೈರ್ಯ ಮಾಡುತ್ತಿಲ್ಲ. ಸರ್ವ ಪಕ್ಷಗಳ ನಿಯೋಗ ಕೊಂಡೊಯ್ದರೆ ಸಾಕು ನಾವೇ ಕೇಳುತ್ತೇವೆ. ಇವರಿಗೆ ಪ್ರಧಾನಿ ಬಳಿ ಹೋಗಿ ಹೆಚ್ಚಿನ ಪರಿಹಾರ ಕೇಳೋ ಧೈರ್ಯವಿಲ್ಲ ಎಂದು ಸಿದ್ಧರಾಮಯ್ಯ ಹರಿಹಾಯ್ದಿದ್ದಾರೆ.

ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು. ಅವರ ಮಗ ಆರ್.ಟಿ.ಜಿ.ಎಸ್. ಮೂಲಕವೇ ಹಣ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಹಳೆಯ ಕಾಲದ ಪದ್ಧತಿಯಲ್ಲಿ ಚೆಕ್ ಮೂಲಕ ಲಂಚ ಪಡೆದಿದ್ದರು. ಅವರ ಪುತ್ರ ಮಾತ್ರ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಲಂಚ ಪಡೀತಿದಾರೆ. ನೇರವಾಗಿ ತಮ್ಮ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ 7.40 ಕೋಟಿ ರೂಪಾಯಿ ಲಂಚದ ಹಣ ಹಾಕಿಸಿಕೊಂಡಿದ್ದಾರೆ. ಇದೊಂದು ಬ್ರಹ್ಮಾಂಡ ಭ್ರಷ್ಟಾಚಾರದ ಸರ್ಕಾರ. ಲೂಟಿಕೋರ, ಹಗಲು ದರೋಡೆ ಸರ್ಕಾರ. ಇವರಿಗೆ ಸಂತ್ರಸ್ತರ ಗೋಳು ಕೇಳೋದು ಬೇಕಿಲ್ಲ. ಬರೀ ದುಡ್ಡು ಹೊಡೆಯೋದೆಂದೇ ಕಾಯಕ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಮಾತನ್ನು ಸಿದ್ದರಾಮಯ್ಯನೇ ಕೇಳಲ್ಲ; ಸಚಿವ ಎಸ್​ಟಿ ಸೋಮಶೇಖರ್ ಲೇವಡಿ

ನೆರೆ ಪೀಡಿತ ಪ್ರದೇಶಗಳ ಭೇಟಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಅಭಿಮಾನಿಗಳು, ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರೋ ಸಿದ್ಧರಾಮಯ್ಯ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಜನರು ಅಭಿಮಾನದಿಂದ ಸಿಎಂ ಆಗಲಿ ಅಂತ ಹೇಳ್ತಾರೆ. ಸದ್ಯ ಸಿಎಂ ಹುದ್ದೆಯೂ ಖಾಲಿ ಇಲ್ಲ, ಚುನಾವಣೆಯೂ ಬಂದಿಲ್ಲ ಎಂದರು.ಐವರು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ತಾರೆ ಎಂಬ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ಸಿದ್ಧರಾಮಯ್ಯ ಕಿಡಿಕಾರಿದರು. ಬಿಜೆಪಿಯ 15 ಶಾಸಕರು ಕಾಂಗ್ರೆಸ್ ಗೆ ಬರ್ತಾರೆ ಅಂತ ಹೇಳಬಹುದು. ಆದರೆ ನಾನು ಬಾಯಿಗೆ ಬಂದಂತೆ ಹೇಳಲ್ಲ ಎಂದರು. ಪ್ರವಾಹ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೆರೆ ಪೀಡಿತ ಪ್ರದೇಶಕ್ಕೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಸಿಎಂ ವೈಮಾನಿಕ ಸಮೀಕ್ಷೆ ಮಾಡಿದರು. ಅವರಿಗೆ ಸಂತ್ರಸ್ತರ ಬವಣೆ ಏನಾದರೂ ಗೊತ್ತಾಯಿತಾ? ಕಲಬುರ್ಗಿಯಲ್ಲಿ ಜನಪ್ರತಿನಿಧಿಗಳನ್ನು ದೂರವಿಟ್ಟು ಸಭೆ ಮಾಡಿದರು. ಅಧಿಕಾರಿಗಳ ಹೇಳಿದ್ದನ್ನೇ ಕೇಳಿಕೊಂಡು ವಾಪಸ್ಸಾದರು. ಅದಕ್ಕಾಗಿಯೆ ಸಂತ್ರಸ್ತರ ಸಮಸ್ಯೆ ಕೇಳಲು ನಾನು ಖುದ್ದಾಗಿ ಬಂದಿದ್ದೇನೆ. ಕಲ್ಯಾಣ ಕರ್ನಾಟಕದಲ್ಲಿ ಮಳೆ ಮತ್ತು ಪ್ರವಾಹದಿಂದ ಭಾರಿ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ಪರಿಹಾರ ನೀಡಬೇಕೆಂದು ಸಿದ್ಧರಾಮಯ್ಯ ಆಗ್ರಹಿಸಿದರು.
Published by: Sushma Chakre
First published: October 25, 2020, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading