ಸಿಎಂ ಬೊಮ್ಮಾಯಿ ಅವ್ರೇ, ನಿಮಗೆ ಧಮ್ ಇದ್ರೆ ಒಂದೇ ವೇದಿಕೆ ಬನ್ನಿ ಚರ್ಚೆ ಮಾಡೋಣ: Siddaramaiah ಸವಾಲು

ಸಿಎಂ ಬೊಮ್ಮಾಯಿ ಅವ್ರೇ ಸುಳ್ಳು ಹೇಳೋಕೆ‌ ಹೋಗಬೇಡಿ. ನಿಮಗೆ ಧಮ್ ಇದ್ರೆ ಒಂದೇ ವೇದಿಕೆ‌ ಬನ್ನಿ ಚರ್ಚೆ ಮಾಡೋಣ. ಯಾರು ಸುಳ್ಳು, ಸತ್ಯ ಹೇಳ್ತಾರೆ ಎಂಬುದು ಗೊತ್ತಾಗುತ್ತೆ ಎಂದು ಸವಾಲೆಸೆದರು. ಸುಳ್ಳು ಹೇಳೋಕೆ ನಿಮಗೆ, ನಾಚಿಕೆ ಆಗೋಲ್ವಾ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

  • Share this:
ವಿಜಯಪುರ: ಉಪ ಚುನಾವಣೆ (By Election) ಹಿನ್ನೆಲೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್​​ ನಾಯಕರು ಮಾದಿಗರ ಸಮಾಜದ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(dk shivakumar) ಹಾಗೂ ಶಾಸಕ ಎಂಬಿ ಪಾಟೀಲ್ (mb patil) ತಮಟೆ ಬಾರಿಸಿದರು. ನಂತರ ಸಿದ್ದರಾಮಯ್ಯ ಭಾಷಣಕ್ಕೆ ಮುಂದಾಗುತ್ತಿದ್ದಂತೆ ಟಗರಿಗೆ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗಿದದರು. ಕಾರ್ಯಕರ್ತರ ಕೂಗು ನೋಡಿ ಸುಮ್ಮನೆ ಇರೀ ಎಂದ ಸಿದ್ದರಾಮಯ್ಯ.ಗದರಿದರು. ಭಾಷಣ ಮುಂದುವರೆಸಿ RSS ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ದೊರೆದಾಗಿನಿಂದ ದಲಿತರು ಕಾಂಗ್ರೆಸ್ ಬೆಂಬಲಿಸಿಕೊಂಡು‌ ಬರ್ತಿದ್ದಾರೆ. 1980ರಲ್ಲಿ ಭಾರತೀಯ ಜನತಾ ಪಕ್ಷ ಹುಟ್ಟಿತು, ಯಾರಾದರೂ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಇದ್ರಾ..? ದೇಶಕ್ಕಾಗಿ ಯಾರಾದರೂ ಪ್ರಾಣ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.

ಬಿಜೆಪಿಯ ಕೊಡುಗೆ ಏನು ಇಲ್ಲ

ಈಗ ಸ್ವಾತಂತ್ರ್ಯ ಬಂದ ಮೇಲೆ ದೇಶ ಉದ್ಧಾರ ಮಾಡಲು ಹೊರಟಿದ್ದಾರೆ. ಈ ದೇಶದ ಅಭಿವೃದ್ಧಿಗೆ ಬಿಜೆಪಿಯ ಕೊಡುಗೆ ಏನು ಇಲ್ಲ. ಯಾರೋ ಕೆಲವರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ. ರಮೇಶ್ ಜಿಗಜಣಗಿ, ಕಾರಜೋಳ ಆಗಿರಬಹುದು. ಅವರು ಯಾರಿಂದಲೂ ನಿಮಗೆ ನ್ಯಾಯ ಕೊಡಲು ಆಗುವುದಿಲ್ಲ. ಬಿಜೆಪಿಯ ದಾರಿ ತಪ್ಪಿಸುವ ಮಾತುಗಳಿಗೆ ಮಣಿಯದೇ, ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಯಾರು ಸುಳ್ಳು, ಯಾರು ಸತ್ಯ ಹೇಳ್ತಾರೆ ನೋಡೋಣ ಬನ್ನಿ

ಸಿಎಂ ಬೊಮ್ಮಾಯಿ ಅವ್ರೇ ಸುಳ್ಳು ಹೇಳೋಕೆ‌ ಹೋಗಬೇಡಿ. ನಿಮಗೆ ಧಮ್ ಇದ್ರೆ ಒಂದೇ ವೇದಿಕೆ‌ ಬನ್ನಿ ಚರ್ಚೆ ಮಾಡೋಣ. ಯಾರು ಸುಳ್ಳು, ಸತ್ಯ ಹೇಳ್ತಾರೆ ಎಂಬುದು ಗೊತ್ತಾಗುತ್ತೆ ಎಂದು ಸವಾಲೆಸೆದರು. ಸುಳ್ಳು ಹೇಳೋಕೆ ನಿಮಗೆ, ನಾಚಿಕೆ ಆಗೋಲ್ವಾ ಎಂದು ಕಿಡಿಕಾರಿದರು. ನಾನು ಚರ್ಚೆಗೆ ತಯಾರು ಇದ್ದೇನೆ, ಧಮ್ ಇದ್ರೆ ಬನ್ನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಮತ್ತೆ ಸವಾಲು ಹಾಕಿದರು.

ಬಿಜೆಪಿಯವರು ಲೂಟಿ ಗಿರಾಕಿಗಳು

ಆಂಜನೇಯ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಅವನಿಗೆ ಹೇಳಿದ್ದೆ. ಅಂಬೇಡ್ಕರ್ ಯಾವಾಗಲೂ ಸೂಟ್ ಹಾಕೊಂಡು ಇದ್ರು. ಅದೇ ರೀತಿ ನೀನು ಸೂಟ್ ಹಾಕೊಂಡು, ಹಣ ಕಾನೂನು ಮಾಡು ಎಂದು. ಬಿಜೆಪಿಗೆ ಕನಸ್ಸು - ಮನಸ್ಸಿನಲ್ಲಿಯೂ, ಅಪ್ಪಿತಪ್ಪಿಯೂ ಒಂದು ವೋಟ್ ಹಾಕಬಾರದು. ಸೋಗಲಾಡಿಗಳಾದ ಯಡಿಯೂರಪ್ಪ, ಬೊಮ್ಮಾಯಿ, ಕಾರಜೋಳ, ಜಿಗಜಣಗಿ ಮಾತನ್ನು ಯಾವುದೇ ಕಾರಣಕ್ಕೂ ನೀವು ಕೇಳಬಾರದು. ನಿಮ್ಮ ನಾಯಕರು ಆರ್ ಬಿ ತಿಮ್ಮಾಪುರ್ ಹಾಗೂ ಆಂಜನೇಯ ಎಂದರು. ಭಾಷಣದುದ್ದಕ್ಕೂ ಮಿಸ್ಟರ್ ಯಡಿಯೂರಪ್ಪ, ಮಿಸ್ಟರ್ ಬೊಮ್ಮಾಯಿ, ಮಿಸ್ಟರ್ ಜಿಗಜಣಗಿ ಎಂದು ಟಾಂಗ್ ಕೊಟ್ಟ ಸಿದ್ದರಾಮಯ್ಯ, ಬಿಜೆಪಿ ಯವರಿಗೆ ಹೇಳೋಕೆ, ಈಗ ಏನು ಇಲ್ಲ. ಬಿಜೆಪಿಯವರು ಲೂಟಿ ಗಿರಾಕಿಗಳು, ದುಡ್ಡು ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: HD Kumaraswamy ಅಂದು ತೆಗೆದುಕೊಂಡ ನಿರ್ಧಾರದಿಂದ ಮನೆಯಲ್ಲಿ ಕುಳಿತು ಕಣ್ಣೀರು ಹಾಕಿದ್ದೇನೆ: Zameer Ahmed Khan

ಈ ಚುನಾವಣೆ ಸುಳ್ಳಿಗೂ ಸತ್ಯಕ್ಕೂ ನಡೆಯುತ್ತಿರುವ ಧರ್ಮ ಯುದ್ದ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಈ ಚುನಾವಣೆ ಸುಳ್ಳಿಗೂ ಸತ್ಯಕ್ಕೂ ನಡೆಯುತ್ತಿರುವ ಧರ್ಮ ಯುದ್ದ ಎಂದು ವ್ಯಾಖ್ಯಾನಿಸಿದರು. ಯಾವ ಕಾರಣಕ್ಕೂ ನಿಮ್ಮ ಸ್ವಾಭಿಮಾನದ‌ ಮತವನ್ನು ಬಿಜೆಪಿಗೆ ಮಾರಿಕೊಳ್ಳಬಾರದು. ಬಿಜೆಪಿಗೆ ಯಾವುದೇ ಶಕ್ತಿ ಇಲ್ಲ, ಅವರಿಗೆ ಇರೋದು ಬರೀ ದುಡ್ಡಿನ ಶಕ್ತಿ ಅಷ್ಟೇ. ಅಶೋಕ್ ಮನಗೂಳಿ ಒಬ್ರೆ ನಿಮ್ಮ ಅಭ್ಯರ್ಥಿಯಲ್ಲ. ನಾವೆಲ್ಲರೂ ನಿಮ್ಮ ಅಭ್ಯರ್ಥಿಗಳು ಇದ್ದೇವೆ. ಕಾಂಗ್ರೆಸ್ ಇತಿಹಾಸನೇ, ದೇಶದ ಇತಿಹಾಸ.  ನೀವೆಲ್ಲರೂ ಕಾಂಗ್ರೆಸ್ ಗೆ ಅಧಿಕಾರ ಕೊಡಬೇಕು. ನಾವು ಏನು ಜಾತಿ ಮೇಲೆ ಸಭೆ ಮಾಡ್ತಿಲ್ಲ, ನೀತಿ ಮೇಲಿನ ಸಭೆ ಇದು. ಯಾವುದೇ ಜಾತಿಯನ್ನು ವಿಭಜನೆ ಮಾಡ್ತಿಲ್ಲ, ಬದಲಾಗಿ ಒಟ್ಟಾಗಿ ತೆಗೆದುಕೊಂಡು ಹೋಗ್ತಿದ್ದೇವೆ ಎಂದು ತಮ್ಮ ಸಭೆಯ ಉದ್ದೇಶವನ್ನು ಸಮರ್ಥಿಸಿಕೊಂಡರು.
Published by:Kavya V
First published: