ವಿಜಯನಗರ: ರಾಜ್ಯ ವಿಧಾನಸಭಾ ಚುನಾವಣೆ (Karnataka Politics 2023) ಹತ್ತಿರವಾಗುತ್ತಿದ್ದಂತೆ ನಾಯಕರ ನಡುವಿನ ವಾಗ್ದಾಳಿ ಜೋರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟು ತಿರುಗೇಟು ನೀಡಿದ್ದಾರೆ. ವಿಜಯನಗರ ಜಿಲ್ಲೆ (Vijayapura) ಹೂವಿನಹಡಗಲಿ (Huvinahadagali) ತಾಲೂಕಿನ ಮೈಲಾರದಲ್ಲಿ ಮಾತನಾಡಿದ ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು, ಅಧಿಕಾರ ಬರುತ್ತೆ ಹೋಗುತ್ತದೆ. ನನ್ನ ರಾಜಕೀಯ ಜೀವನದಲ್ಲಿ 13 ಚುನಾವಣೆ ಎದುರಿಸಿದ್ದೇನೆ, 5 ಚುನಾವಣೆ ಸೋತಿದ್ದೇನೆ. ಆದರೆ ಸೋತು ಮನೆಯಲ್ಲಿ ಕುಳಿತಿರಲಿಲ್ಲ, ಸಾಮಾಜಿಕ ನ್ಯಾಯಕ್ಕಾಗಿ (Social Justice) ಹೋರಾಡಿದ್ದೀನಿ. ಯಾರಿಗೂ ಹೆದರುವ ಗಿರಾಕಿ ನಾನು ಅಲ್ಲ. ಸುಮ್ಮ ಸುಮ್ಮನೆ ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾತ್ರಿ ನಿವಾಸ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾವೇರಿ ಮೀಸಲು ಕ್ಷೇತ್ರದ ಟಿಕೆಟ್ ಈರಪ್ಪ ಲಮಾಣಿ ಅವರಿಗೆ ಟಿಕೆಟ್ ಕೊಡುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದೆ ಇಲ್ಲಿ ನಾನು ಟಿಕೆಟ್ ಕೊಡಲು ಬಂದಿದ್ದಾನಾ? ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ರದ್ದು ಮಾಡಿ ಮಠದ ಕಾರ್ಯಕ್ರಮಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಕಾರ್ಯಕರ್ತರನ್ನು ಗದರಿದರು.
1989ರಲ್ಲಿ ಸಾರಿಗೆ ಮಂತ್ರಿಯಾಗಿದ್ದೆ, 500ನೇ ಜಯಂತಿ ಕನಕದಾಸರ ಜಯಂತಿ ಆಚರಣೆ ಮಾಡಬೇಕು ಅನ್ನುಕೊಂಡಿದ್ದೇವೆ. ಆಗ ಎಸ್.ಆರ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರು. ಈಗಿನ ಬೊಮ್ಮಾಯಿ ಸರ್ಕಾರ ಅಲ್ಲ. ಈಡೀ ರಾಜ್ಯವನ್ನು ಸುತ್ತಿ ನಾನು 500ನೇ ಕನಕದಾಸರ ಜಯಂತಿ ಮಾಡಿದ್ದೆ. ಕನಕದಾಸರ ಮೋಹನತರಂಗಿಣಿ ಸೇರಿದಂತೆ ಅವರ ಸಾಹಿತ್ಯವನ್ನ ಕಡಿಮೆ ದರದಲ್ಲಿ ಸಿಗಬೇಕು ಅನ್ನೋ ಉದ್ದೇಶ ಹೊಂದಿದ್ದೇವೆ ಎಂದರು.
ದುಡ್ಡು ಕೊಡ್ತೀನಿ ಅಂತ ಈಶ್ವರಪ್ಪ ಗೈರು ಹಾಕಿದ್ದ!
ಒಂದು ವರ್ಷದ ನಿರಂತರ ಕಾರ್ಯಕ್ರಮ ಮಾಡಿದ್ದೆವು, ಆದರೆ ಸಮಾರೋಪ ಸಮಾರಂಭ ಮಾಡಲು ಆಗಲಿಲ್ಲ, ಏಕೆಂದರೆ ನಮ್ಮ ಸರ್ಕಾರ ಆಗ ಹೋಗಿತು. ಆಗ ಗುರುಪೀಠ ಮಾಡಬೇಕು ಅನ್ನೋ ವಿಚಾರ ಮಾಡಿದ್ದೆವು. ಎಲ್ಲಾ ಜಿಲ್ಲೆ ಸುತ್ತಿ ಕನಕ ಗುರು ಪೀಠದ ಬಗ್ಗೆ ಚರ್ಚೆ ಮಾಡಿದ್ವಿ. ನಮ್ಮ ಈಶ್ವರಪ್ಪ ಬಂದಿದ್ದ. ಇಂತಹ ದಿನ ದುಡ್ಡು ಕೊಡುತ್ತೇನೆ ಅಂತಾ ಹೇಳಿದ್ದ ಗೈರು ಹಾಕಿದ್ದ.
ಸ್ವಾಮೀಜಿ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಇದು ಸತ್ಯ ಯಾರನ್ನ ಬೇಕಾದರು ಕೇಳಿ ಎಂದು ಸವಾಲು ಹಾಕಿದರು. ಅಲ್ಲದೆ, ಗಿರಾಕಿ ದುಡ್ಡು ಕೊಡುವುದು ಬೇಡ, ಉದ್ಘಾಟನೆಗೆ ಬರಲಿಲ್ಲ. ಶರತ್ ಪವಾರ್ ಉದ್ಘಾಟನೆ ಮಾಡಿದರು. ಎಸ್.ಆರ್ ಬೊಮ್ಮಾಯಿ ಮುಖ್ಯಮಂತ್ರಿ ಇದ್ದ ಕಾರಣ ಅದಕ್ಕೆ ಜಾಗ ಕೊಡಿಸಿದ್ದರು. ಕರ್ಮಭೂಮಿ ಇದ್ದ ಜಾಗದಲ್ಲಿ ಕನಕ ಗುರು ಪೀಠ ಮಾಡಿದ್ದೇವೆ ಎಂದರು.
ಟೀಕೆ ಮಾಡುವವರಿಗೆ ನಾನು ಹೆದರುವುದಿಲ್ಲ
ಕೆಲವರು ಸಿದ್ದರಾಮಯ್ಯ ಏನು ಮಾಡಿದರೂ ಅಂತ ಕೇಳ್ತಾರೆ, ಟೀಕೆ ಮಾಡುವವರಿಗೆ ನಾನು ಹೆದರುವುದಿಲ್ಲ. ನಾನು ಮಾಡುವ ಕೆಲಸ ನ್ಯಾಯಯುತವಾಗಿದ್ದರೆ ಯಾರು ಹೇಳಿದರು ನಿಲ್ಲಸಲ್ಲ. ಅಧಿಕಾರ ಬರುತ್ತೆ ಹೋಗುತ್ತೆ. 13 ಚುನಾವಣೆ ಎದುರಿಸಿದ್ದೇನೆ, 5 ಚುನಾವಣೆ ಸೋತಿದ್ದೇನೆ. ಸೋತು ಮನೆಯಲ್ಲಿ ಕುಳಿತಿರಲಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದೇನೆ. ಯಾರಿಗೂ ಹೆದರುವ ಗಿರಾಕಿ ಅಲ್ಲ ನಾನು. ಸುಮ್ಮ ಸುಮ್ಮನೆ ಹೆದರಿಸೋಕೆ ಬಂದರ ತೊಡೆ ತಟ್ಟೋದು ನನಗೆ ಗೊತ್ತಿದೆ ಎಂದು ವಾರ್ನ್ ಮಾಡಿದರು.
ನಿಮ್ಮಿಂದ ಆದರೆ ಎಸ್ಟಿ ಮಾಡ್ರಪ್ಪ!
ನಿನ್ನೆ ಬಸವರಾಜ ಬೊಮ್ಮಾಯಿ ಕುರುಬರನ್ನು ಎಸ್ಟಿ ಗೆ ಸೇರಿಸ್ತೇನೆ ಎಂದು ಹೇಳಿದ್ದಾರೆ. ಇದನ್ನು ಮಾಡೋರು ಇವರಲ್ಲ, ಕೇಂದ್ರ ಸರ್ಕಾರದವರು. ಡಬಲ್ ಇಂಜಿನ್ ಸರ್ಕಾರ ಅಂತಾರೆ ನಿಮ್ಮಿಂದ ಆದರೆ ಎಸ್ಟಿಗೆ ಮಾಡ್ರಪ್ಪ! ಇವರು ಮೂಗಿಗೆ ತುಪ್ಪ ಹಚ್ಚೋರಲ್ಲ, ಹಣೆಗೆ ತುಪ್ಪ ಹಚ್ಚೋರು. ನೀವೆಲ್ಲಾ ದನಿ ಎತ್ತಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ, ಮೇಲ್ಜಾತಿಯವರಿಗೆ ಮೀಸಲಾತಿ ಕೊಡಬೇಕು ಅಂತ ಸಂವಿಧಾನದಲ್ಲಿ ಎಲ್ಲಿದೆ ತೋರಿಸಿ? ಇದ್ದರೆ ಹೇಳಿ ಬಿಡಿ ನೋಡೋಣಾ ನಾನು ರಾಜಕೀಯಕ್ಕೆ ರಾಜೀನಾಮೆ ಕೊಟ್ಟು ಬಿಡ್ತೀನಿ ಎಂದು ರಾಜ್ಯ ಸರ್ಕಾರ ಹಾಗೂ ಬಿಜೆಪಿಯ ಮುಖಂಡರಿಗೆ ಬಹಿರಂಗವಾಗಿ ಸವಾಲು ಎಸೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ