Bagalkote: ಏ ನಾಗರಾಜ್, ಇದನ್ನ ಇಮ್ಮಿಡಿಯೇಟ್ ಮಾಡಿಕೊಡು: ಸಚಿವ MTBಗೆ ಸಿದ್ದರಾಮಯ್ಯ ಕರೆ 

 "ಏ ನಾಗರಾಜ್, ನಾನು ಗುಳೇದಗುಡ್ಡದಲ್ಲಿದ್ದೇನೆ. ಈ ಗುಳೇದಗುಡ್ಡ ಪುರಸಭೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಆದನ್ನು ಈ ಕೂಡಲೇ  ಭರ್ತಿ ಮಾಡಬೇಕು. ಗುಳೇದಗುಡ್ಡ ಬ್ಯಾಕ್ ವರ್ಡ್ ಏರಿಯಾ.  ಹೀಗಾಗಿ ಅಭಿವೃದ್ಧಿ ಆಗಬೇಕು. ಜೆಇ, ಎಫ್.ಡಿ.ಸಿ, & ಎಸ್.ಡಿಸಿ ಹೀಗೆ ಎಲ್ಲವೂ ಖಾಲಿ ಇದೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬಾಗಲಕೋಟೆ: ಬಾದಾಮಿ (Badami) ಕ್ಷೇತ್ರದ ಎರಡು ಪುರಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಕ್ಷೇತ್ರದ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಏಕಾಏಕಿ ತಮ್ಮ ಹಳೆ ಶಿಷ್ಯ ನಗರಾಭಿವೃದ್ಧಿ ಸಚಿವ ಎಂ.ಟಿ. ಬಿ. ನಾಗರಾಜ್  (Minister MTB Nagaraj)ಗೆ ಫೋನ್ ಕರೆ ಮಾಡಿದ್ದಾರೆ. ಹೌದು, ಗುಳೇದಗುಡ್ಡ ಪುರಸಭೆಯಲ್ಲಿ ‌ಜೆಡಿಎಸ್ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆ ಮುಗಿಯುತ್ತಲೇ  ಜೆಡಿಎಸ್ ಸದಸ್ಯರು (JDS Members) ಪುರಸಭೆಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆಯಿಂದ ತೊಂದರೆ ಆಗುತ್ತಿದೆ. ಬಂದ ಅನುಧಾನ ಕೂಡ ವಾಪಸ್ ಹೋಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡರು.  ಕೂಡಲೇ ಸದಸ್ಯರಿಗೆ ಸ್ಪಂದಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಹಳೆ ಶಿಷ್ಯ, ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದು ನಗರಾಭಿವೃದ್ಧಿ ಸಚಿವರಾಗಿರುವ  ಎಂ.ಟಿ.ಬಿ. ನಾಗರಾಜ್ ಅವರಿಗೆ ಫೋನ್ ಕರೆ ಮಾಡಿದರು.

"ಏ ನಾಗರಾಜ್, ನಾನು ಗುಳೇದಗುಡ್ಡದಲ್ಲಿದ್ದೇನೆ. ಈ ಗುಳೇದಗುಡ್ಡ ಪುರಸಭೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಆದನ್ನು ಈ ಕೂಡಲೇ  ಭರ್ತಿ ಮಾಡಬೇಕು. ಗುಳೇದಗುಡ್ಡ ಬ್ಯಾಕ್ ವರ್ಡ್ ಏರಿಯಾ.  ಹೀಗಾಗಿ ಅಭಿವೃದ್ಧಿ ಆಗಬೇಕು. ಜೆಇ, ಎಫ್.ಡಿ.ಸಿ, & ಎಸ್.ಡಿಸಿ ಹೀಗೆ ಎಲ್ಲವೂ ಖಾಲಿ ಇದೆ.

ಬೇಗ ಡೆಪ್ಯೂಟ್ ಮಾಡಬೇಕು. ನಾನು ಲೆಟರ್ ಕಳಿಸ್ತೀನಿ ಇದನ್ನ ಬೇಗ ಮಾಡಿಕೊಡು ಎಂದರು. ಇನ್ನು ಸಚಿವ ನಾಗರಾಜ್ ಗೆ ಫೋನ್ ಮಾಡುವ ಮುನ್ನ  ಇಲಾಖೆ ಕಾರ್ಯದರ್ಶಿಗೆ ಫೋನ ಮಾಡಿದ ಸಿದ್ದರಾಮಯ್ಯ, ಸಮಸ್ಯೆ ಕುರಿತು ಚರ್ಚಿಸಿ, ಏನು ನೀವೇ ಮಾಡ್ತಿರಾ ಇಲ್ಲ ಎಂಟಿಬಿಗೆ ಹೇಳಬೇಕಾ ಎಂದು ಕೇಳಿದ್ರು.

ಇದನ್ನೂ ಓದಿ:  ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆ ಪರ್ವ:  ಸಿದ್ಧರಾಮಯ್ಯ ಮುನ್ಸೂಚನೆ

ಮತ್ತೇ ಬಾದಾಮಿಯಿಂದಲೇ  ಸಿದ್ದರಾಮಯ್ಯ ಸ್ಫರ್ಧೆ..! 

ಇನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು,  ನಾನೀಗ ಬಾದಾಮಿ ಶಾಸಕ, ಇನ್ನೂ ಒಂದುಕಾಲು ವರ್ಷ ಸಮಯ ಇದೆ. ಸುಮ್ನೆ ಚಚೆ೯ ಮಾಡ್ತಾರೆ. ನನಗೆ ಐದಾರು ಕ್ಷೇತ್ರಗಳ ಕಡೆಗೆ ಕರೀತಾ ಇದ್ದಾರೆ.

ನಾನು ಅಲ್ಟಿಮೇಟ್ ಲಿ ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಲ್ಲುತ್ತೇನೆ. ಈಗಾಗಲೇ ಬಾದಾಮಿ, ಕೊಪ್ಪಳ, ಚಾಮರಾಜಪೇಟೆ ಸೇರಿ ಬೇರೆ ಬೇರೆ ಕಡೆಗೆ ಕರೆಯುತ್ತಿದ್ದಾರೆ. ಯಾಕೆಂದ್ರೆ ನಾನು ರಾಜ್ಯದ ತುಂಬೆಲ್ಲಾ ಓಡಾಡಿ ಕ್ಯಾಂಪೇನ್ ಮಾಡಬೇಕಲ್ವಾ. ಆದ್ರೂ ಬಾದಾಮಿಯಿಂದ ನೀವು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡಿದ್ದೇನೆ ಎಂದರು.

ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪಾದಯಾತ್ರೆ ವಿಚಾರ..! 

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನೋಡೋಣ ನಾವಿನ್ನೂ ಅದರ ಬಗ್ಗೆ ಚರ್ಚೆ ಮಾಡಿಲ್ಲ. ಎಲ್ಲಾ ಭಾಗದಲ್ಲೂ ಪಾದಯಾತ್ರೆ ಮಾಡಬೇಕೆನ್ನುವ ಒತ್ತಡ ಇದೆ.

ಯುಕೆಪಿ 3ನೇ ಹಂತದ ಅಭಿವೃದ್ಧಿ ಆಗಬೇಕು. ಅವಾಡ್೯ ಆಗಬೇಕು, ನೋಟಿಫಿಕೇಶನ್ ಆಗಬೇಕು. ಬಾಗಲಕೋಟೆ , ವಿಜಯಪುರ ಜಿಲ್ಲೆಯಲ್ಲಿ ಯುಕೆಪಿ ಕೆಲಸ ಆಗಬೇಕಿದೆ. ನೋಡೋಣ ಈ ಸಂಭಂದ ಪಕ್ಷದಲ್ಲಿ ಚಚೆ೯ ಮಾಡಿ ಮುಂದಿನ ನಿಧಾ೯ರ ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ:  V Somanna: ಅರ್ಧ ಆಯ್ತು, ಸ್ವಲ್ಪ ಆಯ್ತು ಅಂದರೆ ಹೆಣ ಎತ್ತಿಬಿಡ್ತೀನಿ - ಸಚಿವ ವಿ ಸೋಮಣ್ಣ ಆವಾಜ್

ಮೇಕೆದಾಟು ಪಾದಯಾತ್ರೆ ತಡೆಗೆ ವೀಕೆಂಡ್​ ಕರ್ಫ್ಯೂ
ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯನ್ನ ಹತ್ತಿಕ್ಕಲೆಂದೇ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ತಂದಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.  ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಹರಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್​​, ಸೋಮಶೇಖರ್‌ಗೆ ಕೋವಿಡ್ ದೃಢಪಟ್ಟಿದ್ದು ನಮ್ಮ ಪಾದಯಾತ್ರೆಯಿಂದನಾ..? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಉತ್ತರ ಕರ್ನಾಟಕಕ್ಕೆ ಬಿಜೆಪಿ ನೀರು ತಂದ್ರಾ?

ನಮ್ಮ ಅಧಿಕಾರದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಹೋರಾಟ ಮಾಡಿದ್ದರು. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಮಹದಾಯಿ ಕಾಮಗಾರಿ ಜಾರಿಗೆ ತರುತ್ತೇವೆ. ರಕ್ತದಲ್ಲಿ ಬರೆದು ಕೊಡುತ್ತೆನೆಂದು ಯಡಿಯೂರಪ್ಪನವರು ಮಾತು ಕೊಟ್ಟಿದ್ದರು. ಅಲ್ಲದೆ ಅಂದಿನ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಂದ ಪತ್ರವನ್ನೂ ಬರೆಯಿಸಿದ್ದರು. ಪತ್ರವನ್ನು ಡಿಸ್ಪ್ಲೇ ಮಾಡಿ ತೋರಿಸಿದ್ದರು.

ಆದರೆ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆದರು. ನಂತರದಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗೆ ನೀರು ಬಂತಾ...? ಎಂದು ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವರದಿ: ಮಂಜುನಾಥ್ ತಳವಾರ
Published by:Mahmadrafik K
First published: