• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಯೋಗ ದಿನಾಚರಣೆ ಇನ್ವಿಟೇಷನ್‌ನಲ್ಲಿ ಹೆಸರು ಹಾಕಿದ್ದಕ್ಕೆ ಸಿದ್ದು ಸಿಡಿಮಿಡಿ! ಬಾಗಲಕೋಟೆ ಡಿಸಿಗೆ ಏಕವಚನದಲ್ಲೇ ತರಾಟೆ

Siddaramaiah: ಯೋಗ ದಿನಾಚರಣೆ ಇನ್ವಿಟೇಷನ್‌ನಲ್ಲಿ ಹೆಸರು ಹಾಕಿದ್ದಕ್ಕೆ ಸಿದ್ದು ಸಿಡಿಮಿಡಿ! ಬಾಗಲಕೋಟೆ ಡಿಸಿಗೆ ಏಕವಚನದಲ್ಲೇ ತರಾಟೆ

ಸಿದ್ದರಾಮಯ್ಯ ಸಂಗ್ರಹ ಚಿತ್ರ

ಸಿದ್ದರಾಮಯ್ಯ ಸಂಗ್ರಹ ಚಿತ್ರ

ಯೋಗ ದಿನಾಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಿಚಾರಕ್ಕೆ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ತಮ್ಮ ಹೆಸರು ಹಾಕಿದ ಬಾಗಲಕೋಟೆ ಡಿಸಿಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಸಿದ್ದು, ಕೇಂದ್ರ ಸಚಿವರ ವಿರುದ್ಧವೂ ಹರಿಹಾಯ್ದಿದ್ದಾರೆ.

  • Share this:

ಬಾಗಲಕೋಟೆ: ವಿಶ್ವ ಯೋಗ ದಿನಾಚರಣೆಗೆ (International Yoda Day) ಕ್ಷಣಗಣನೆ ಆರಂಭವಾಗಿದೆ. ಇದೇ 21, ಮಂಗಳವಾರದಂದು ವಿಶ್ವದಾದ್ಯಂತ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೈಸೂರು ಅರಮನೆ (Mysore Palace) ಆವರಣದಲ್ಲಿ ನಡೆಯಲಿರುವ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ (Bagalkot) ಯೋಗ ದಿನ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಯೋಗ ದಿನಾಚರಣೆ ವಿಚಾರಕ್ಕೆ ಬಾದಾಮಿ ಶಾಸಕರೂ (Badami MLA) ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸಿಡಿಮಿಡಿಗೊಂಡಿದ್ದಾರೆ. ಯೋಗ ದಿನಾಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ (Invitation) ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿಸಿ ಸುನೀಲ್ ಕುಮಾರ್ (DC Sunil Kumar) ಅವರಿಗೆ ಕಾಲ್ (Call) ಮಾಡಿ, ಸಿದ್ದು ಕ್ಲಾಸ್ (Class) ತೆಗೆದುಕೊಂಡಿದ್ದಾರೆ.  


ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿದ್ದಕ್ಕೆ ಸಿದ್ದು ಸಿಟ್ಟು


ಜೂನ್ 21ರಂದು ಬಾಗಲಕೋಟೆಯ ಪಟ್ಟದಕಲ್ಲಿನಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಿಚಾರಕ್ಕೆ ಸಿದ್ದರಾಮಯ್ಯ ಗರಂ ಆಗಿದ್ದಾರೆ. ತಮ್ಮನ್ನು ಕೇಳದೇ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲಾಗಿದೆ ಅಂತ ಸಿಡಿಮಿಡಿಗೊಂಡಿದ್ದಾರೆ.


ಜಿಲ್ಲಾಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ


ಬಾಗಲಕೋಟೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್‌ಗೆ ಕಾಲ್ ಮಾಡಿದ ಸಿದ್ದರಾಮಯ್ಯ, ದೂರವಾಣಿಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಏಕವಚನದಲ್ಲೇ ಡಿಸಿಗೆ ತರಾಟೆ ತೆಗೆದುಕೊಂಡಿದ್ದಾರೆ. ಯೂ ಡೋಂಟ್ ಡೋಂಟ್ ನೋ ಪ್ರೋಟೋ ಕಾಲ್? ವಾಟ್ ಗೀವ್ ಫೀಡ್ ಬ್ಯಾಕ್? ಯು ಮಸ್ಟ್ ಅಬ್ಜರ್ವ್ ಪ್ರೋಟೋ ಕಾಲ್. ಅವನ್ಯಾವನೋ ಮಿನುಸ್ಟ್ರು ಬರ್ತಾನೆ ಅಂತ ನೀನು ಇನ್ವಿಟೇಶನ್ ಮಾಡಿ ಕಳಿಸಿಬಿಟ್ರೆ. ಈ ಕ್ಷೇತ್ರದ ಶಾಸಕ ನಾನು, ನೀನು ಈ ಕ್ಷೇತ್ರದ ಪ್ರತಿನಿಧಿ. ನೀನು ಸೇವಕನಾಗಿ ಆಯ್ಕೆಯಾದವನು. ನೀನು ನಿನ್ನ ಜವಾಬ್ದಾರಿಯನ್ನು ತಿಳಿದುಕೊಳ್ಳಬೇಕು ಅಂತ ತರಾಟೆ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: Mysore Palace: ನಾಳೆ ಮೈಸೂರು ಅರಮನೆಗೆ ಹೋಗ್ತಿದ್ದೀರಾ? ಜೂನ್ 21ರವರೆಗೂ ಪ್ಯಾಲೇಸ್‌ಗೆ ನೋ ಎಂಟ್ರಿ!


“ನಿಮಗೆಲ್ಲ ಯಾರ್ ರೀ ಕೆಲಸ ಕೊಟ್ಟವರು?”


ಆಮತ್ರಂಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕುವ ಮುನ್ನ ನನ್ನ ಸಂಪರ್ಕಿಸಬೇಕು. ಹೀಗೆ ಹೇಳದೇ ಕೇಳದೆ ಹೆಸರು ಹಾಕಿದ್ರೆ ಕ್ಷೇತ್ರದ ಜನರಿಗೆ ಇದು ಯಾವ ಮೇಸೆಜ್ ಹೋಗುತ್ತೆ? ನಿಮಗೆಲ್ಲ ಯಾರ್ರಿ ಕೆಲಸ ಕೊಟ್ಟವನು ಅಂತ ಸಿಟ್ಟಾಗಿದ್ದಾರೆ.


“ಡಿಸಿ ಏನು ಆಕಾಶದಿಂದ ಬಂದವನಾ?”


ಇನ್ನು ಮಾತು ಮುಂದುವರೆಸಿದ ಸಿದ್ದರಾಮಯ್ಯ, ಡಿಸಿ ಅಂದ್ರೆ ಅವನೇನು ಆಕಾಶದವನಾ? ಅವನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಅಷ್ಟೇ. ಹುಡುಗಾಟ ಆಗಿ ಬಿಟ್ಟಿದೆ ಇವರಿಗೆ. ಬ್ರಿಟಿಷರ ಕಾಲಕ್ಕೆ ಹೊರಟೋಯ್ತು, ಕಲೆಕ್ಟರ್, ತಹಶೀಲ್ದಾರ್ ಕಾಲಕ್ಕೆ ಅವೆಲ್ಲ ಹೊರಟೋಯ್ತು ಅಂತ ಆಕ್ರೋಶ ಹೊರಹಾಕಿದ್ರು.


“ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ”


ಇನ್ನೊಂದ್ ಸಾರಿ ಹೀಗಾದ್ರೆ  ಸುಮ್ಮನೆ ಬಿಡೋದಿಲ್ಲ ಎಂದ ಸಿದ್ದರಾಮಯ್ಯ, ವಿಧಾನ ಸಭೆಯಲ್ಲಿ ಧ್ವನಿ ಎತ್ತುತ್ತೇನೆ ಎಂದ್ರು. ಅಸೆಂಬ್ಲಿಗಿಂತ ಮೊದಲು ನನ್ನ ಕಾಣಬೇಕು ನೀನು ಎಂದು ಡಿಸಿಗೆ ಎಚ್ಚರಿಕೆ ನೀಡಿ. ಫೋನ್ ಇಟ್ಟರು.


ಇದನ್ನೂ ಓದಿ: DK Shivakumar: ಕಾಲೇಜುಗಳಿಗೆ ಯಾಕೆ ರಜೆ? ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ? ಡಿಕೆ ಶಿವಕುಮಾರ್ ಪ್ರಶ್ನೆ


“ಯೋಗ ಡೇಗೆ ನಾನು ಹೋಗೋದಿಲ್ಲ”


ಫೋನ್ ಇಟ್ಟ ಬಳಿಕ ಆಪ್ತರ ಬಳಿಯೂ ಡಿಸಿ ಬಗ್ಗೆ ತರಾಟೆ ಮಾತನಾಡಿದ ಸಿದ್ದರಾಮಯ್ಯ, ಅಧಿಕಾರಿಗಳೆಲ್ಲ ಕೊಬ್ಬಿಹೋಗಿದ್ದಾರೆ. ಅವನ್ಯಾವನೋ ಕೇಂದ್ರ ಸಚಿವ ಚಂದ್ರಶೇಖರ ಅಂತ ಬರ್ತಾವ್ನೆ. ಅವನಿಗೂ, ಈ ಕ್ಷೇತ್ರಕ್ಕೂ ಸಂಬಂಧವೇ ಇಲ್ಲ. ಅವನು ಬಂದು ಯೋಗಾ ಡೇ ನಲ್ಲಿ ಭಾಗವಹಿಸ್ತಾನೆ. ನಾನು ಹೋಗಲ್ಲ, ಹೋದ್ರೆ ಜನ ಏನಂತ ತಿಳಿದುಕೊಳ್ತಾರೆ? ಈಗ ನಾನು ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡ್ತೇನೆ ಅಂತ ಆಕ್ರೋಶದಿಂದಲೇ ಹೇಳಿದ್ಗಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು