ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್​​ ಸಜ್ಜು: ನಾಳೆ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ

ಇತ್ತ ಆಡಳಿತರೂಢ ಬಿಜೆಪಿಯೂ ಕೇವಲ ಮೂರು ದಿನ ಮಾತ್ರ ಚಳಿಗಾಲ ಅಧಿವೇಶನ ನಡೆಸಲು ಮುಂದಾಗಿದೆ. ಅತ್ತ ಕಾಂಗ್ರೆಸ್​-ಜೆಡಿಎಸ್​​​ ನಾಯಕರು ಇನ್ನೂ ಒಂದು ವಾರಗಳ ಕಾಲ ಸದನ ನಡೆಸುವಂತೆ ಆಗ್ರಹಿಸಿದ್ದಾರೆ.

news18
Updated:October 10, 2019, 8:03 PM IST
news18
Updated: October 10, 2019, 8:03 PM IST
ಬೆಂಗಳೂರು(ಅ.10): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಸಲುವಾಗಿ ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಆದೇಶದ ಮೇರೆಗೆ ಪಕ್ಷದ​​ ಶಾಸಕಾಂಗ ಸಭೆಗೆ ಕಡ್ಡಾಯ ಹಾಜರಾಗಬೇಕೆಂದು ಶಾಸಕರಿಗೆ ಕಾಂಗ್ರೆಸ್​​ ಕಾರ್ಯದರ್ಶಿ ಲಿಖಿತ ಆದೇಶ ಹೊರಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಸಿದ್ದರಾಮಯ್ಯ ಕರೆಯುತ್ತಿರುವ ಮೂರನೇ ಶಾಸಕಾಂಗ ಸಭೆ ಇದಾಗಿದೆ. ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೇಗೆ ಹೋರಾಟ ರೂಪಿಸಬೇಕೆಂದು ಚರ್ಚಿಸಲು ಸಭೆ ನಡೆಸಲಾಗುತ್ತಿದೆ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಪ್ರವಾಹ ಪೀಡಿತ ಪ್ರದೇಶದ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದು ಸದನದಲ್ಲಿ ಹೋರಾಟ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುತ್ತಿವೆ ಮೂಲಗಳು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೂತನವಾಗಿ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಸದನ ಇದಾಗಿದೆ. ಮೂರು ದಿನಗಳು ಮಾತ್ರ ನಡೆಯಲಿರುವ ಈ ಚಳಿಗಾಲ ಅಧಿವೇಶನದಲ್ಲಿ ರಾಜ್ಯದಲ್ಲಿ ಬರಗಾಲ, ನೆರೆ ಒಟ್ಟೊಟ್ಟಿಗೆ ಬಂದಿರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ

ಭೀಕರ ಪ್ರವಾಹದಿಂದ ಏಳು ಲಕ್ಷ ಜನ ಸಂತ್ರಸ್ತರಾಗಿದ್ದಾರೆ. 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಜನ ನಾಪತ್ತೆಯಾಗಿದ್ದಾರೆ. ಇಂತಹ ಸಂದರ್ಭದಲ್ಲೂ ನೀವು ಕೇವಲ ಮೂರು ದಿನ ಮಾತ್ರ ಕಲಾಪ ಕರೆದಿದ್ದೀರಿ ಎಂದು ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಸಿ.ಟಿ ರವಿ ಟೂರಿಸ್ಟ್​​​ ಮಿನಿಸ್ಟರ್​​​ ಎಂದು ಕಾಲೆಳೆದ ಮಾಜಿ ಸಿಎಂ ಸಿದ್ದರಾಮಯ್ಯ

ಯಾವುದಾದರೂ ಪ್ರಮುಖ ವಿಷಯಗಳಿದ್ದರೆ ಚರ್ಚೆಗೆ ಅವಕಾಶ ನೀಡಬೇಕು. ನಿಯಮ 74ರ ಅಡಿಯಲ್ಲಿ ಚರ್ಚೆಗೆ ನಮಗೆ ಅವಕಾಶ ಕೊಡಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಸ್ಪೀಕರ್ ಅವರು ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಚರ್ಚೆ ಮಾಡದೇ ಹಣಕಾಸು ಮಸೂದೆ ಅಂಗೀಕಾರ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇತ್ತ ಆಡಳಿತರೂಢ ಬಿಜೆಪಿಯೂ ಕೇವಲ ಮೂರು ದಿನ ಮಾತ್ರ ಚಳಿಗಾಲ ಅಧಿವೇಶನ ನಡೆಸಲು ಮುಂದಾಗಿದೆ. ಅತ್ತ ಕಾಂಗ್ರೆಸ್​-ಜೆಡಿಎಸ್​​​ ನಾಯಕರು ಇನ್ನೂ ಒಂದು ವಾರಗಳ ಕಾಲ ಸದನ ನಡೆಸುವಂತೆ ಆಗ್ರಹಿಸಿದ್ದಾರೆ.
Loading...

-------
First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...