Chaddi War: ಚಡ್ಡಿಗಳು ಚಡ್ಡಿ ಕೆಲಸ ಮಾಡದೇ ಮತ್ತೇನು ಮಾಡ್ತಾರೆ? ಸಿದ್ದರಾಮಯ್ಯ ಪ್ರಶ್ನೆ

ಚಡ್ಡಿ ವಿಚಾರವನ್ನು ನಾನು ಬಹಳ ವರ್ಷದಿಂದ ಹೇಳುತ್ತಲೇ ಇದ್ದೇನೆ. ಆದ್ರೆ ನಾನು ಇನ್ನೂ ಸುಟ್ಟು ಹೋಗಿಲ್ಲ, ಅವರೇ ಸುಟ್ಟು ಹೋಗ್ತಾ ಇದ್ದಾರೆ. ಹಿಂದೆ RSS ಅನ್ನು ನಿಷೇಧಿಸಿದ್ದು ನೆಹರೂ ಅಥವಾ ಇಂದಿರಾ ಗಾಂಧಿ ಅಲ್ಲ. ನೆಹರೂ ಪ್ರಧಾನಿಯಾಗಿದ್ದಾಗ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ನಿಷೇಧಿಸಿದ್ದರು. ಅದರ ನಂತರ ನಿಷೇಧ ಹಿಂಪಡೆಯಲಾಗಿತ್ತು.

ಮಾಜಿ  ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಹುಬ್ಬಳ್ಳಿ - ಕರ್ನಾಟಕದಲ್ಲಿ ಚಡ್ಡಿ ಜಟಾಪಟಿ ಜೋರಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ (BJP Congress Leaders) ವಕ್ಸಮರ ತೀವ್ರಗೊಂಡಿದೆ. ಚಡ್ಡಿ ವಿಷಯವನ್ನು ನಾನು ಬಹಳ ವರ್ಷದಿಂದಲೂ ಮಾತನಾಡುತ್ತಿದ್ದು ನಾನು ಇದುವರೆಗೂ ಸುಟ್ಟಿಲ್ಲ, ಅವರೇ ಸುಟ್ಟು ಹೋಗ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ತಿಳಿಸಿದ್ದಾರೆ. ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Karnataka BJP President Nalin Kumar Kateel) ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಚಡ್ಡಿಗಳು ಚಡ್ಡಿ ಕೆಲ್ಸ ಮಾಡ್ದೆ ಮತ್ತೇನ್ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಆರ್.ಎಸ್.ಎಸ್. ಬಗ್ಗೆ ನಾನು ಮಾತನಾಡ್ತಿರೋದು ಇದೇ ಮೊದಲಲ್ಲ. ಈ ಮೊದಲೂ ಸಹ ಟೀಕಿಸಿದ್ದೇನೆ. ಮೊದಲಿಂದಲೂ ಕೋಮುವಾದಿ ಸಂಘಟನೆ ಅಂತ ಹೇಳುತ್ತಲೇ ಬಂದಿದ್ದೇನೆ. ನನ್ನ ಆರೋಪಕ್ಕೆ ಯಾವೊಬ್ಬ ಆರ್.ಎಸ್.ಎಸ್ ನಾಯಕರು (RSS Leaders) ಪ್ರತಿಕ್ರಿಯಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ ಆರೋಪವನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲು ಆಗಲ್ಲ. 97 ವರ್ಷದಿಂದಲೂ ಆರ್ ಎಸ್ ಎಸ್ ನ ಸರಸಂಘ ಚಾಲಕರು ಒಂದೇ ಜಾತಿಯವರಾಗಿದ್ದಾರೆ. ಇದರ ಅರ್ಥವೇನು ಎಂದ ಸಿದ್ದರಾಮಯ್ಯ, ದಲಿತ ಅಥವಾ ಹಿಂದುಳಿದವರನ್ನು ಏಕೆ ಮಾಡಿಲ್ಲ. ಅಲ್ಪಸಂಖ್ಯಾತರನ್ನು ಆರ್.ಎಸ್.ಎಸ್ ಸರ ಸಂಗ ಸಂಚಾಲಕರನ್ನಾಗಿ ಮಾಡಿಲ್ಲ ಎಂದು ಪ್ರಶ್ನಿಸಿದರು.ಅವರೊಬ್ಬರೇನಾ ಸ್ವಯಂ ಸೇವಕರು ಎಂದು ಕಿಡಿಕಾರಿದರು.

ಅವರೇ ಸುಟ್ಟು ಹೋಗ್ತಾರೆ

ಚಡ್ಡಿ ವಿಚಾರವನ್ನು ನಾನು ಬಹಳ ವರ್ಷದಿಂದ ಹೇಳುತ್ತಲೇ ಇದ್ದೇನೆ. ಆದ್ರೆ ನಾನು ಇನ್ನೂ ಸುಟ್ಟು ಹೋಗಿಲ್ಲ, ಅವರೇ ಸುಟ್ಟು ಹೋಗ್ತಾ ಇದ್ದಾರೆ. ಹಿಂದೆ RSS ಅನ್ನು ನಿಷೇಧಿಸಿದ್ದು ನೆಹರೂ ಅಥವಾ ಇಂದಿರಾ ಗಾಂಧಿ ಅಲ್ಲ. ನೆಹರೂ ಪ್ರಧಾನಿಯಾಗಿದ್ದಾಗ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ನಿಷೇಧಿಸಿದ್ದರು. ಅದರ ನಂತರ ನಿಷೇಧ ಹಿಂಪಡೆಯಲಾಗಿತ್ತು.

ಇದನ್ನೂ ಓದಿ:  Jamia Mosque Controversy: ಹನುಮನ ಅರ್ಚಕನ ಕೈ ಕತ್ತರಿಸಿದ್ನಾ ಟಿಪ್ಪು? ಮಂದಿರದ ಕೊಪ್ಪರಿಕೆಯಲ್ಲಿದ್ದ ರತ್ನಾಭರಣ ಏನಾಯ್ತು ಗೊತ್ತಾ?

ಸಿದ್ದರಾಮಯ್ಯಗೆ ಚಡ್ದಿ ಕಳಿಸಿಕೊಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸಿ, ಬಿಜೆಪಿಯವರು ಜನರ ಕೆಲಸವನ್ನಂತೂ ಮಾಡೋದಿಲ್ಲ. ಈ ಕೆಲಸವನ್ನು ಏನಾದ್ರೂ ಮಾಡ್ಲಿ ಬಿಡಿ. ಚಡ್ಡಿ ಹಾಕೋರು ಚಡ್ಡಿ ಕೆಲ್ಸ ಮಾಡ್ಲಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಯಡಿಯೂರಪ್ಪ ಭೇಟಿಯಲ್ಲಿ ವಿಶೇಷತೆಯಿಲ್ಲ

ಯಡಿಯೂರಪ್ಪ ಅವರ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ. ರಾಜ್ಯಸಭೆ ಚುನಾವಣೆ ಕುರಿತು ಚರ್ಚೆ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಮತ್ತು ನನ್ನ ಭೇಟಿ ಅಕಸ್ಮಿಕ. ಈ ವೇಳೆ ಯಾವದೇ ರಾಜಕೀಯ ಚರ್ಚೆ ಮಾಡಿಲ್ಲ. ಉಭಯ ಕುಶಲೋಪರಿ ಮಾಡಿದ್ದೇವೆ ಅಷ್ಟೇ ಎಂದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಅಭ್ಯರ್ಥಿ ರಾಜ್ಯಸಭೆಗೆ ಹಾಕಿದೆ. ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ಆದರೆ ಜೆಡಿಎಸ್ ಕೂಡಾ ಅಭ್ಯರ್ಥಿ ಹಾಕಿ ಚುನಾವಣೆ ಜಟಿಲಗೊಳಿಸಿದೆ. ಕೋಮುವಾದಿ ಅಭ್ಯರ್ಥಿ ಸೋಲಿಸುವ ಉದ್ದೇಶ ಇದ್ದಿದ್ದರೆ ಅಭ್ಯರ್ಥಿ ಹಾಕುತ್ತಿರಲಿಲ್ಲ. ದೇವೇಗೌಡರು ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕಿರಲಿಲ್ಲ.

ಜೆಡಿಎಸ್ ನಮಗೆ ಬೆಂಬಲ ಕೊಡಲಿ

ದೇವೆಗೌಡರು ಗೆಲ್ಲಬೇಕು ಎನ್ನುವ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್ ನವರು ನಮಗೆ ಬೆಂಬಲ ಕೊಡಬಹುದಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿ ಬಿಜೆಪಿ ಗೆಲುವಿಗೆ ಸಹಕಾರಿಯಾಗೋಕೆ ಹೊರಟಿದ್ದಾರೆ. ನಮಗೆ ಬಿಜೆಪಿ ಹಾಗೂ ಜೆಡಿಎಸ್ ಆತ್ಮ ಸಾಕ್ಷಿಯ ಮತಗಳು ಬರುತ್ತೆ ಅನ್ನೋ ವಿಶ್ವಾಸವಿದೆ.

ಇದನ್ನೂ ಓದಿ:  Corona Alert: ಮತ್ತೊಮ್ಮೆ ಜಾರಿಯಾಗುತ್ತಾ ಟಫ್ ರೂಲ್ಸ್? ಸಂಜೆ ತಜ್ಞರೊಂದಿಗೆ ಮಹತ್ವದ ಸಭೆ

ಆತ್ಮಸಾಕ್ಷಿಯ ಮತ ಗಳಿಂದ ನಮ್ಮ ಎರಡನೇ ಅಭ್ಯರ್ಥಿ ಗೆಲ್ಲುವ ಭರವಸೆ ಇದೆ. ನಾನು ಒಂದು ಕಲ್ಲಲ್ಲಿ ಎರಡೂ ಹಕ್ಕಿನೂ ಹೊಡೆದಿಲ್ಲ, ಒಂದು ಹಕ್ಕಿನೂ ಹೊಡೆದಿಲ್ಲ ಎಂದು ಹೆಚ್ ಡಿಕೆ ಮಾತಿಗೆ ಸಿದ್ದರಾಮಯ್ಯ ತೀರುಗೇಟು ನೀಡಿದರು. ನಾವೇ ಮೊದಲು ಅಭ್ಯರ್ಥಿಯನ್ನ ಹಾಕಿದ್ದೇವು. ನಮ್ಮನ್ನ ನೋಡಿ ಜೆಡಿಎಸ್ ಅಭ್ಯರ್ಥಿ ಹಾಕಬಾರದಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
Published by:Mahmadrafik K
First published: