Chitradurga: ಸಿದ್ಧರಾಮಯ್ಯ ಜನ್ಮದಿನವನ್ನು ರಂಜಾನ್, ಬಕ್ರೀದ್​ನಂತೆ ಆಚರಿಸಿ ಎಂದ ಜಮೀರ್ ಅಹ್ಮದ್

ಹುಟ್ಟು ಹಬ್ಬ ಸಿದ್ಧರಾಮಯ್ಯ ಅವರದಲ್ಲ, ನಮ್ಮ‌ ಹುಟ್ಟುಹಬ್ಬ. ಅದನ್ನ ಎಲ್ಲರೂ ಹಬ್ಬದ ರೀತಿ ಸಿದ್ಧರಾಮಯ್ಯ ಜನ್ಮ ದಿನವನ್ನ ನಾಡಹಬ್ಬ, ರಮ್‌ಜಾನ್ ಬಕ್ರೀದ್, ಯುಗಾದಿ, ದೀಪಾವಳಿಯಂತೆ ಆಚರಣೆ ಮಾಡಬೇಕು ಎಂದು‌ ಚಿತ್ರದುರ್ಗದಲ್ಲಿ (Chitradurga)  ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.

ಶಾಸಕ ಜಮೀರ್​

ಶಾಸಕ ಜಮೀರ್​

  • Share this:
ಚಿತ್ರದುರ್ಗ(ಜು.27): ದಾವಣಗೆರೆಯಲ್ಲಿ (Davanagere) ನಡೆಯಲಿರುವ ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಜನ್ಮದಿನಕ್ಕೆ (Birthday) ಹೆಚ್ಚಿನ‌ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು (Minority) ಬಂದರೆ ಗೌರವ. ಆದರಿಂದ ಬೇರೆಯವರಿಗೆ ಮೆಟ್ಟು ತಗೊಂಡು ಹೊಡೆದಂಗೆ ಆಗುತ್ತದೆ. ಉತ್ತಮ ಯೋಜನೆ ನೀಡಿದ ಅವರಿಗೆ ಮುಸ್ಲಿಂ ಸಮುದಾಯ (Muslim Community) ಎಷ್ಟು ನಿಯತ್ತಾಗಿದೆ ಎಂಬುದು ಗೊತ್ತಾಗುತ್ತದೆ. ಹುಟ್ಟು ಹಬ್ಬ ಸಿದ್ಧರಾಮಯ್ಯ ಅವರದಲ್ಲ, ನಮ್ಮ‌ ಹುಟ್ಟುಹಬ್ಬ. ಅದನ್ನ ಎಲ್ಲರೂ ಹಬ್ಬದ ರೀತಿ ಸಿದ್ಧರಾಮಯ್ಯ ಜನ್ಮ ದಿನವನ್ನ ನಾಡಹಬ್ಬ, ರಮ್‌ಜಾನ್ ಬಕ್ರೀದ್, ಯುಗಾದಿ, ದೀಪಾವಳಿಯಂತೆ ಆಚರಣೆ ಮಾಡಬೇಕು ಎಂದು‌ ಚಿತ್ರದುರ್ಗದಲ್ಲಿ (Chitradurga)  ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗ ನಗರದ ಗಾಯತ್ರಿ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿಸಿದ್ಧರಾಮಯ್ಯ ಅಮೃತ ಮಹೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ಮಾಜಿ ಸಚಿವ ಜಮೀರ್, ನಮ್ಮ ನಾಯಕರಾದ ಮಾಜಿ ಸಿಎಂ ಸಿದ್ಧರಾಮಯ್ಯ ಯಾವತ್ತೂ ಬರ್ತಡೇ‌ ಆಚರಿಸಿಕೊಂಡಿಲ್ಲ, ಕೇಕ್ ಸಹ ಕತ್ತರಿಸಲು ಸಿದ್ಧರಿರುತ್ತಿರಲಿಲ್ಲ, ಅದೂ ಜನತಾ ದಳದಲ್ಲಿದ್ದಾಗಿನಿಂದ ನಾನಜ ಸಿದ್ಧರಾಮಯ್ಯ ಅವರನ್ನು ಹತ್ತಿರದಿಂದ ನೋಡಿದ್ದೇನೆ, ಕಳೆದ ಸಲ ದೆಹಲಿಯಲ್ಲಿದ್ದಾಗ 200ಕ್ಕೂ ಹೆಚ್ಚು ಕರೆ ಬಂದವು, ಸಿದ್ಧರಾಮಯ್ಯ ಬರ್ತಡೇ ಆಚರಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದರು ಎಂದಿದ್ದಾರೆ.

ಇದನ್ನೂ ಓದಿ: Yadagiri: ನೀರಾವರಿ ಜಮೀನಿಗೆ ಖುಷ್ಕಿ ಭೂಮಿಯೆಂದು ನಮೂದು; ಪರಿಹಾರ ಕಡಿಮೆ ವಿತರಣೆಗೆ ರೈತರಿಗೆ ಮೋಸದಾಟ

ಆದರೆ ಆಗ ಅದನ್ನ ಒಪ್ಪಿರಲಿಲ್ಲ. ಅಲ್ಲದೇ ಕೇವಲ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಜನ ಸಿದ್ಧರಾಮಯ್ಯಗೆ ಇಷ್ಟಪಡುವವರಿದ್ದಾರೆ, ಅವನ್ನಕುರುಬ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜದವರು ಕೂಡಾ ಇಷ್ಟ ಪಡುತ್ತಾರೆ ಎಂದು ಹೇಳಿದ್ದಾರೆ. ಇನ್ನೂ ನಮ್ಮ ಅಲ್ಪಸಂಖ್ಯಾತ ಸಮುದಾಯ ಸೇರಿ‌ ಎಲ್ಲರೂ ಇಷ್ಟ ಪಡುತ್ತಾರೆ, ಅಲ್ಪಸಂಖ್ಯಾತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು, ಯಾಕಂದ್ರೆಸಿದ್ಧರಾಮಯ್ಯ ಸಿಎಂ ಆಗಿದ್ದಾಗ ನಮ್ಮ ಸಮುದಾಯದ ಅಭಿವೃದ್ದಿಗೆ  3150ಕೋಟಿ ಅನುದಾನ ನೀಡಿದ್ದಾರೆ.

Former CM Siddaramaiah Reacts on GST rate hike mrq
ಸಿದ್ದರಾಮಯ್ಯ


ಮುಸ್ಲಿಂ ಸಮುದಾಯ ನಮ್ಮ ನಾಯಕರಾದ ಸಿದ್ದರಾಮಯ್ಯಗೆ ಸಪೋರ್ಟ್ ಮಾಡಬೇಕು ಎಂದು ಮನವಿ

ಸಾಲದೇ ನಾನು ಈಗ ಸಿಎಂ ಆಗಿದ್ದರೆ 10ಸಾವಿರ ಕೋಟಿ ಕೊಡುತ್ತಿದ್ದೆನು ಎಂದು ಹೇಳಿದ್ದಾರೆ. ಆದ್ದರಿಂದ ಮುಸ್ಲಿಂ ಸಮುದಾಯ ನಮ್ಮ ನಾಯಕರಾದ ಸಿದ್ದರಾಮಯ್ಯಗೆ ಸಪೋರ್ಟ್ ಮಾಡಬೇಕು ಎಂದು ಜನರಲ್ಲಿ‌ಮನವಿ ಮಾಡಿದ್ದಾರೆ. ಇನ್ನೂ ಸಿದ್ಧರಾಮಯ್ಯ ಜನ್ಮದಿನಕ್ಕೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಗೌರವ, ಅದರಿಂದ  ಬೇರೆಯವರಿಗೆ ಮೆಟ್ಟು ತಗೊಂಡು ಹೊಡೆದಂಗೆ ಆಗುತ್ತದೆ. ಅದರಿಂದ ಉತ್ತಮ ಯೋಜನೆ ನೀಡಿದ ಅವರಿಗೆ ಮುಸ್ಲಿಂ ಸಮುದಾಯ ಎಷ್ಟು ನಿಯತ್ತಾಗಿದೆ ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿ: ಸೋನಿಯಾ ಗಾಂಧಿ ವಿಚಾರಣೆ, ಪ್ರವೀಣ್ ಹತ್ಯೆ-ಕರಾವಳಿಯಲ್ಲಿ ಹೈ ಅಲರ್ಟ್; ಬೆಳಗಿನ ಟಾಪ್ ನ್ಯೂಸ್

ದಾವಣಗೆರೆಯಲ್ಲಿ ನಡೆಯುವ ಹುಟ್ಟು ಹಬ್ಬ ಸಿದ್ಧರಾಮಯ್ಯ ಅವರದಲ್ಲ, ಅದು ನಮ್ಮ‌ ಹುಟ್ಟು ಹಬ್ಬ ಎಂದು ತಿಳಿದು, ನಾಡಹಬ್ಬ, ರಮ್‌ಜಾನ್ ಬಕ್ರೀದ್, ಯುಗಾದಿ, ದೀಪಾವಳಿಯಂತೆ ಎಲ್ಲರೂ ಹಬ್ಬದ ರೀತಿ ಸಿದ್ಧರಾಮಯ್ಯ ಜನ್ಮ ದಿನ ಆಚರಣೆ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ. ಇನ್ನೂ ರಾಜ್ಯದಲ್ಲಿ ಎಲ್ಲಾ ಸಿದ್ಧರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಅಭಿಮಾನಿಗಳು, ಚಿತ್ರದುರ್ಗ‌ ಜಿಲ್ಲೆಯಲ್ಲಿ ಎರಡೂವರೆ ಲಕ್ಷ ನಮ್ಮ ಜನಸಂಖ್ಯೆಯಿದೆ, ಕನಿಷ್ಟ ಐವತ್ತು ಸಾವಿರ ಜನ ಅಲ್ಪಸಂಖ್ಯಾತರು ಬರಬೇಕು, ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದ್ದಾರೆ.
Published by:Divya D
First published: