Siddaramotsava: ಸಿದ್ದರಾಮೋತ್ಸವ ಹೊರಗೆ ಸಿಹಿ ಒಳಗೆ ಕಹಿ; ಕಾಂಗ್ರೆಸ್​ನಲ್ಲಿ ಬೇಗುದಿ  

ಕಮಲ ಪಾಳಯಕ್ಕೆ ಸಿದ್ದರಾಮೋತ್ಸವ ಒಳಗೊಳಗೆ ಸಂಕಟ ತಂದೊಡ್ಡಿದ್ರೆ ಕಾಂಗ್ರೆಸ್ ನಾಯಕರ ಪಾಲಿಗೆ ಬೇಗುದಿಯ ಮನೆಯಾಗಿದೆ. ಈಗ ಮಲ್ಲಿಕಾರ್ಜುನ ಖರ್ಗೆ ಸರದಿ. ಸಿದ್ದರಾಮೋತ್ಸವದಿಂದ ಖರ್ಗೆ ದೂರು ಉಳಿದಿದ್ದಾರೆ.

ಸಿದ್ದರಾಮೋತ್ಸವ

ಸಿದ್ದರಾಮೋತ್ಸವ

  • Share this:
ದಾವಣಗೆರೆ (ಆಗಸ್ಟ್​ 03): ರಾಜ್ಯ ರಾಜಕೀಯದಲ್ಲೀಗ ಸಿದ್ದರಾಮೋತ್ಸವದ್ದೇ (Siddaramosthava) ಚರ್ಚೆ. ಕಮಲ ಪಾಳಯ (BJP Leaders) ಕ್ಕೆ ಸಿದ್ದರಾಮೋತ್ಸವ ಒಳಗೊಳಗೆ ಸಂಕಟ ತಂದೊಡ್ಡಿದ್ರೆ ಕಾಂಗ್ರೆಸ್​​ (Congress) ನಾಯಕರ ಪಾಲಿಗೆ ಬೇಗುದಿಯ ಮನೆಯಾಗಿದೆ. ಸದ್ಯ ಕರುನಾಡಲ್ಲಿ ಭಾರೀ ಕುತೂಹಲ ಸೃಷ್ಟಿಸಿರುವ ಸಿದ್ದರಾಮಯ್ಯರ 75ನೇ ವರ್ಷದ ಬರ್ತ್​ಡೇ ಸೆಲಬ್ರೇಷನ್ (Birtday celebration) ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ದಾವಣಗೆರೆ (Davanagere) ಯಲ್ಲಿ ಈಗಾಗಲೇ ಲಕ್ಷ ಲಕ್ಷ ಜನರ ಸಮ್ಮುಖದಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್​​ನ ಪ್ರಮುಖ ನಾಯಕರಿಗೆ ಅಸಮಾಧಾನ ಸೃಷ್ಟಿಯಾಗಿದೆ. ಡಿಕೆಶಿ (Dkshi)  ಪರಮೇಶ್ವರ್ (Parameshwar) ಸೇರಿ ಹಲವು ನಾಯಕರು ಈಗಾಗಲೇ ಬೇಸರ ಹೊರಹಾಕಿದ್ರು. ಈಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸರದಿ. ಸಿದ್ದರಾಮೋತ್ಸವದಿಂದ ಖರ್ಗೆ ದೂರು ಉಳಿದಿದ್ದಾರೆ.

ಸಿದ್ದರಾಮೋತ್ಸವಕ್ಕೆ ಖರ್ಗೆ ಗೈರು

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಾಯಕ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದಾರೆ. ರಾಜ್ಯಸಭೆ ಪ್ರತಿಪಕ್ಷದ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮೋತ್ಸವದಿಂದ ಅಂತರ ಕಾಯ್ದುಕೊಂಡಿದ್ದಾರೆ.

ನ್ಯಾಷನಲ್ ಹೆರಾಲ್ಡ್​ ಕೇಸ್​ ಟೆನ್ಶನ್

ಈಗಾಗಲೇ ಕಾಂಗ್ರೆಸ್​​ನ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್​ ಕೇಸ್​ನ ಸುಳಿಯಲ್ಲಿ ಸಿಲುಕಿದ್ದಾರೆ. ಮಾತ್ರವಲ್ಲದೇ ದೊಡ್ಡ ನಾಯಕರಿಗೂ ಇಡಿ ಭಯ ಶುರುವಾಗಿದೆ. ಜೊತೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೇಶದ 12 ಕಡೆಗಳಲ್ಲಿ ದಾಳಿ ನಡೆಸಿದೆ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮೋತ್ಸವದಲ್ಲಿ ಭಾಗಿಯಾಗ್ತಿಲ್ಲ ಎನ್ನಲಾಗಿದೆ.

ಇಂದು ಭಾಷಣ ಮಾಡಬೇಕಿದ್ದ ಖರ್ಗೆ

ಈಗಾಗಲೇ ದಾವಣಗೆರೆಯಲ್ಲಿ ನಡೆಯುತ್ತಿರೋ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಬೇಕಿತ್ತು.  ಆದರೆ ನ್ಯಾಷನಲ್ ಹೆರಾಲ್ಡ್​ ಕಚೇರಿಗಳ ಮೇಲೆ ಇಡಿ ದಾಳಿ, ಅಗ್ರನಾಯಕರ ವಿಚಾರಣೆ ಹಿನ್ನೆಲೆ ಸಿದ್ದರಾಮೋತ್ಸವ ಸಂಭ್ರಮದಲ್ಲಿ ಖರ್ಗೆ ಭಾಗಿಯಾಗುತ್ತಿಲ್ಲ.

ಇದನ್ನೂ ಓದಿ:  Amit Shah: ಸಿದ್ದರಾಮೋತ್ಸವ ಬೆನ್ನಲ್ಲೇ ರಾಜ್ಯಕ್ಕೆ ಅಮಿತ್ ಶಾ ಆಗಮನ; ಇದರ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?

ಡಿಕೆಶಿಗೂ ಇತ್ತು ಅಸಮಾಧಾನ

ಸಿದ್ದರಾಮೋತ್ಸವ ಬಗ್ಗೆ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದವರೆಂದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ. ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿರುವ ಡಿಕೆಶಿಗೆ ಸಿದ್ದರಾಮಯ್ಯರೇ ತೊಡಕಾಗಿದ್ದಾರೆ. ಇಬ್ಬರ ನಡುವೆಯೂ ಒಂದು ಅಸಮಾಧಾನದ ಗೆರೆ ಇದೆ. ಹೈಕಮಾಂಡೇ ಎಂಟ್ರಿಯಾಗಿ ಎಲ್ಲಾ ಸರಿ ಮಾಡಿದರೂ ಇನ್ನು ಒಳಬೇಗುದಿ ಸರಿಹೋಗಿಲ್ಲ. ಹಾಗಾಗಿ ಡಿಕೆಶಿ ಈ ಮೊದಲು ಸಿದ್ದರಾಮೋತ್ಸವ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಈಗ ಮತ್ತೆ ಒಳಗೆ ಬೆಂಕಿಯುಂಡೆ ಇಟ್ಟುಕೊಂಡೇ ಡಿಕೆಶಿ ಸಿದ್ದರಾಮೋತ್ಸವದಲ್ಲೇ ಭಾಗಿಯಾಗಿದ್ದಾರೆ.

Prepared 3000 meter siddaramaiah photo reel csb mrq
ಸಿದ್ದರಾಮೋತ್ಸವ


ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಸಂಭ್ರಮ

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಸಂಭ್ರಮ ಮುಗಿಲುಮುಟ್ಟಿದೆ. ಲಕ್ಷ ಲಕ್ಷ ಸಿದ್ದರಾಮಯ್ಯ ಅಭಿಮಾನಿಗಳು ದಾವಣಗೆರೆಗೆ ಆಗಮಿಸಿದ್ದಾರೆ. ಮೈದಾನದಲ್ಲಿ ಕಾಲಿಡೋಕು ಜಾಗವಿಲ್ಲದಷ್ಟು ಕಾರ್ಯಕರ್ತರು ಜಮಾಯಿಸಿದ್ದಾರೆ. ಕೈಯಲ್ಲಿ ಬಾವುಟ ಹಿಡಿದುಕೊಂಡು ಸಿದ್ದರಾಮಯ್ಯ ಪರ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಎತ್ತ ನೋಡಿದರೂ ಸಿದ್ದರಾಮಯ್ಯರ ಕಟೌಟ್​​​​ಗಳೇ ರಾರಾಜಿಸ್ತಿದೆ. ಕ್ಷಣಕ್ಷಣಕ್ಕೂ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಯಕರ್ತರು ಹುಲಿ ಕುಣಿತ, ತಮಟೆ ವಾದ್ಯಕ್ಕೆ ಸ್ಟೆಪ್ ಹಾಕ್ತಿದ್ದಾರೆ. ಡೋಲು ಕುಣಿತ ಕೂಡ ಕಾರ್ಯಕ್ರಮಕ್ಕೆ ಮೆರುಗು ನೀಡಿದೆ.

ಸಿದ್ದರಾಮೋತ್ಸವ ಸಾಂಗ್ ಹೈಲೆಟ್

ಸಿದ್ದರಾಮೋತ್ಸವದಲ್ಲಿ ಜನರ ಹರ್ಷೋದ್ಘಾರ ಮುಗಿಲುಮುಟ್ಟಿದೆ. ಸಿದ್ದರಾಮಯ್ಯ ಸಾಂಗ್ ಬರ್ತಿದ್ದಂತೆ ಕಾರ್ಯಕರ್ತರ ಶಿಳ್ಳೆ, ಕೇಕೆ ಇನ್ನೂ ಜೋರಾಗ್ತಿದೆ. ಅಭಿಮಾನಿಗಳು ಡ್ಯಾನ್ಸ್ ಮಾಡ್ತಿದ್ದಾರೆ. ಹೌದು ಹುಲಿಯಾ ಹಾಡು ಕೂಡ ಹೈಲೆಟ್​ ಆಗಿದೆ. ಲಕ್ಷಾಂತರ ಅಭಿಮಾನಿಗಳು ಹೌದಾ ಹುಲಿಯಾ ಹಾಡಿಗೆ ಸ್ಟೆಪ್ ಹಾಕ್ತಿದ್ದಾರೆ.

ಇದನ್ನೂ ಓದಿ:  Siddaramotsava: 8 ಲಕ್ಷ ವೆಚ್ಚದಲ್ಲಿ 3 ಕಿಲೋ ಮೀಟರ್ ಉದ್ದದ ಸಿದ್ದರಾಮಯ್ಯ ಫೋಟೋ

ಸಿದ್ದು ಭೇಟಿಯಾದ ಪುತ್ರ ಯತೀಂದ್ರ

ಸಿದ್ದರಾಮಯ್ಯ ಇಂದು ತಮ್ಮ 75 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಲ್ಲರೂ ಸಿದ್ದರಾಮಯ್ಯಗೆ ಶುಭಕೋರುತ್ತಿದ್ದಾರೆ. ಇಂದು ಬೆಳಗ್ಗೆ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭಕೋರಿದ್ರು.
Published by:Thara Kemmara
First published: