• Home
  • »
  • News
  • »
  • state
  • »
  • ಬಿಜೆಪಿ-ಕೆಜೆಪಿ ವಿಭಜನೆಯಿಂದ ಆಕಸ್ಮಿಕವಾಗಿ ಸಿಎಂ ಆದವರು ಸಿದ್ದರಾಮಯ್ಯ; ಸಚಿವ ಕೆ.ಎಸ್‌. ಈಶ್ವರಪ್ಪ ತಿರುಗೇಟು

ಬಿಜೆಪಿ-ಕೆಜೆಪಿ ವಿಭಜನೆಯಿಂದ ಆಕಸ್ಮಿಕವಾಗಿ ಸಿಎಂ ಆದವರು ಸಿದ್ದರಾಮಯ್ಯ; ಸಚಿವ ಕೆ.ಎಸ್‌. ಈಶ್ವರಪ್ಪ ತಿರುಗೇಟು

ಸಚಿವ ಕೆ.ಎಸ್‌. ಈಶ್ವರಪ್ಪ.

ಸಚಿವ ಕೆ.ಎಸ್‌. ಈಶ್ವರಪ್ಪ.

ಒಂದು ಬಾರಿ ಸಿಎಂ ಆದರೂ ಸಹ ಸಿದ್ದರಾಮಯ್ಯ ಅವರಿಗೆ ಸಿಎಂ ಕುರ್ಚಿ ಮೇಲಿನ ವ್ಯಾಮೋಹ ಮಾತ್ರ ಹೋಗಿಲ್ಲ. ಆದರೆ, ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೊಲ್ಲ. ಉಳಿದ ಮೂರು ವರ್ಷದ ಅವಧಿಗೂ ಬಿ.ಎಸ್‌. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಆಗಸ್ಟ್‌ 19); ರಾಜ್ಯದಲ್ಲಿ ಬಿಜೆಪಿ-ಕೆಜೆಪಿ ವಿಭಜನೆಯಿಂದಾಗಿ 2013ರ ವಿಧಾನಸಭೆ ಚುನಾವಣೆಯ ನಂತರ ಸಿದ್ದರಾಮಯ್ಯ ಸಿಎಂ ಪಟ್ಟಕ್ಕೆ ಏರಿದ್ದರು. ಆದರೂ ಅವರಿಗೆ ಇನ್ನೂ ಸಿಎಂ ಕುರ್ಚಿ ಮೇಲೆ ವ್ಯಾಮೋಹ ಹೋಗಿಲ್ಲ. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೊಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.


ಡಿಜೆ ಹಳ್ಳಿ ಗಲಭೆಯನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಮಂಗಳವಾರ ಟ್ವೀಟ್‌ ಮೂಲಕ ಕಿಡಿಕಾರಿದ್ದ ಸಿದ್ದರಾಮಯ್ಯ, "ಬಿಜೆಪಿಯಲ್ಲಿ ಈಗಾಗಲೇ ಎರಡು ಬಣಗಳಾಗಿದ್ದು, ಅದರಲ್ಲಿ ಒಂದು ಬಣ ಬಿ.ಎಸ್‌. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಸರತ್ತು ನಡೆಸುತ್ತಿದೆ" ಎಂದು ಟೀಕಿಸಿದ್ದರು.


ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಇಂದು ವಿಧಾನಸೌಧದಲ್ಲಿ ತಿರುಗೇಟು ನೀಡಿರುವ ಸಚಿವ ಕೆ.ಎಸ್‌. ಈಶ್ವರಪ್ಪ, "ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಾಲಿಶವಾದದ್ದು. 2013ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಕೆಜಿಪಿ ವಿಭಜನೆಯಿಂದಾಗಿ ಸಿದ್ದರಾಮಯ್ಯ ಅಕಸ್ಮಿಕವಾಗಿ ಸಿಎಂ ಪಟ್ಟಕ್ಕೆ ಏರಿದ್ದರು.


ಒಂದು ಬಾರಿ ಸಿಎಂ ಆದರೂ ಸಹ ಸಿದ್ದರಾಮಯ್ಯ ಅವರಿಗೆ ಸಿಎಂ ಕುರ್ಚಿ ಮೇಲಿನ ವ್ಯಾಮೋಹ ಮಾತ್ರ ಹೋಗಿಲ್ಲ. ಆದರೆ, ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೊಲ್ಲ. ಉಳಿದ ಮೂರು ವರ್ಷದ ಅವಧಿಗೂ ಬಿ.ಎಸ್‌. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುವುದು ಬೇಡ" ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ : ಡಿಜೆ ಹಳ್ಳಿ ಗಲಭೆ; ಸರ್ಕಾರದ ವೈಫಲ್ಯ ಮುಚ್ಚಲು ಕಾಂಗ್ರೆಸ್‌ ಮೇಲೇಕೆ ಗೂಬೆ ಕೂರಿಸುತ್ತೀರಿ?; ಸಿಎಂಗೆ ಸಿದ್ದರಾಮಯ್ಯ ಪತ್ರ


ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿನ ಗುಂಪುಗಾರಿಕೆ ಕುರಿತು ಮಾತನಾಡಿರುವ ಈಶ್ವರಪ್ಪ, "ಸಿದ್ದರಾಮಯ್ಯ ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಧರ್ಮಗಳ ಮಧ್ಯೆ ಗಲಭೆಗಳಾಗುತ್ತಿವೆ. ನಮ್ಮ ನಾಯಕರು ಯಾರು ನನ್ನ ಬೆಂಬಲಕ್ಕೆ ಬಂದಿಲ್ಲ ಎಂಬ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು. ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಟ್ವೀಟ್ ಮಾಡುತ್ತಿರುವ ಸಿದ್ದರಾಮಯ್ಯ ಇದೇ ರೀತಿ ಕಾಂಗ್ರೆಸ್‌ ಪಕ್ಷವನ್ನೇ ಮುಳುಗಿಸಿದರು.


ಈ ನಡುವೆ ಸಿದ್ದರಾಮಯ್ಯ ಡಿಜೆ ಹಳ್ಳಿ ಗಲಭೆಯನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ಇದು ಕೋಮುಗಲಭೆ ಅಲ್ಲ ಮತಾಂದರ ದೊಂಬಿ. ಈ ಘಟನೆಯನ್ನು ಕಾಂಗ್ರೆಸ್ ಖಂಡನೆ ಮಾಡಿಲ್ಲ. ಸರ್ಕಾರ ಬಿದ್ದು ಹೋಗಲಿ ಅಂತ ಕಾಂಗ್ರೆಸ್ ಈ ಕುತಂತ್ರ ಮಾಡುತ್ತಿದೆ. ಈಗ ಅನೇಕ ಉಗ್ರಗಾಮಿಗಳು ಹೊರಗೆ ಬರ್ತಿದ್ದಾರೆ. ಈ ಉಗ್ರಗಾಮಿಗಳನ್ನ ನಮ್ಮ ಸರ್ಕಾರ ಮಟ್ಟ ಹಾಕುತ್ತೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

Published by:MAshok Kumar
First published: