Siddaramaiah: ಡಬಲ್ ಇಂಜಿನ್ ಸರ್ಕಾರ ಅಲ್ಲ ಡಬ್ಬಾ ಸರ್ಕಾರ ಎಂದ್ರು ಸಿದ್ದು; ಕಲಾಪದಲ್ಲಿ ಅನುದಾನದ ಬಗ್ಗೆ ವಾಕ್ಸಮರ

ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ. ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ಎಲ್ಲ ಜನರು ಸಂಪೃತ್ತರಾಗಿರುತ್ತಾರೆ ಎಂದು ಭಾಷಣ ಮಾಡುತ್ತಿದ್ದರು ಆದ್ರೆ ಇದು ಡಬ್ಬ ಸರ್ಕಾರ

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಬೆಂಗಳೂರು (ಮಾ.7): ​ 2022-23ನೇ ಸಾಲಿನ ರಾಜ್ಯ ಬಜೆಟ್​ (State Budget) ಮೇಲಿನ ಚರ್ಚೆ ವೇಳೆ ಬಿಜೆಪಿ ವಿರುದ್ಧ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. ಇದು ಡಬಲ್‌ ಇಂಜಿನ್‌ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್‌ (Speaker) ಪ್ರಶ್ನೋತ್ತರಕ್ಕೆ (Questionnaire) ಅವಕಾಶ ನೀಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಇದು ಡಬಲ್ ಎಂಜಿನ್ ಸರ್ಕಾರ ಎಂದು ಬಿಜೆಪಿಯವರು ಹೇಳುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗವೇ ನಿರ್ಮಾಣ ಆಗುತ್ತದೆ ಎಂದು ಇವರು ಹೇಳುತ್ತಿದ್ದರು. ಆದರೆ ಎಂಜಿನ್ ಕೆಟ್ಟಿರುವುದರಿಂದ ಇದು ಡಬ್ಬಾ ಸರ್ಕಾರ ಆಗಿದೆ ಎಂದು ಟೀಕಿಸಿದರು.

ಬಜೆಟ್​ ನಿರೀಕ್ಷೆಯೆಲ್ಲಾ ಹುಸಿಯಾಗಿದೆ

ಬಜೆಟ್‌ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಏನೇನು ಮಾಡಿದೆ ಎಂಬುದನ್ನು ಎಲ್ಲೂ ಹೇಳಿಲ್ಲ. ಇದು ಪ್ರತಿ ಕುಟುಂಬಸ್ಥರ ಬಜೆಟ್‌. ಇದನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್‌ ಮಂಡಿಸಬೇಕು. ನಾನು ಮಂಡಿಸದ ಬಜೆಟ್‌ನಲ್ಲೂ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಪ್ರಾಮಾಣಿಕವಾದ ಪ್ರಯತ್ನ, ಪಾರದರ್ಶಕವಾದ ಬಜೆಟ್‌ ಪ್ರಯತ್ನಿಸಿದ್ದೇನೆ ಎಂದು ಹೇಳಿದರು.

ಡಬಲ್‌ ಇಂಜಿನ್‌ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ

ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ವಲಯವಾರು ಮಾಹಿತಿಯೇ ಸಿಗುತ್ತಿಲ್ಲ. ಕೃಷಿಗೆ ಎಷ್ಟು, ನೀರಾವರಿಗೆ ಎಷ್ಟು, ಕಳೆದ ವರ್ಷ ಎಷ್ಟು ಘೋಷಿಸಲಾಗಿತ್ತು ಎಂಬುದು ಸೇರಿದಂತೆ ಇದ್ಯಾವುದರ ಮಾಹಿತಿಯೇ ಇಲ್ಲ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ. ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ಎಲ್ಲ ಜನರು ಸಂಪೃತ್ತರಾಗಿರುತ್ತಾರೆ ಎಂದು ಭಾಷಣ ಮಾಡುತ್ತಿದ್ದರು. ಬಜೆಟ್‌ ಮಂಡನೆ ಬಳಿಕ ನನಗೆ ಅನಿಸುತ್ತೆ ಇದು ಡಬಲ್‌ ಇಂಜಿನ್‌ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ, ಜನ ವಿರೋಧಿ, ಜನದ್ರೋಹದ ಬಜೆಟ್ ಇದು. ಗೊತ್ತು ಗುರಿ ಇಲ್ಲ, ಮುನ್ನೋಟ ಇಲ್ಲದ ಬಜೆಟ್‌ ಆಗಿದೆ  ಎಂದು ತಿಳಿಸಿದರು

ಇದನ್ನೂ ಓದಿ: ಹೌದು, ನೀವು ಹಿಂದೆ ಕುಳಿತಿದ್ದೀರಲ್ಲ, ಗಮನಿಸುತ್ತಿರುತ್ತೀರಿ: BSY ಬಗ್ಗೆ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

ಸಿದ್ದರಾಮಯ್ಯ ವರ್ಸಸ್ ಯತ್ನಾಳ್ ವಾಗ್ವಾದ 

ವಿಧಾನಸಭೆ ಕಲಾಪದಲ್ಲಿ ಬಜೆಟ್​ನಲ್ಲಿ ಜಿಲ್ಲಾಭಿವೃದ್ಧಿಗೆ ಸಿಕ್ಕ ಅನುದಾನ ಕುರಿತು ಸಿದ್ದರಾಮಯ್ಯ ವರ್ಸಸ್ ಯತ್ನಾಳ್ ವಾಗ್ವಾದ ನಡೆಸಿದ್ರು. ಶಿಕಾರಿಪುರ ಬಿಟ್ಟು ಬಾದಾಮಿಯಲ್ಲೇ ಹೆಚ್ಚು ಕೆಲಸ ಆಗಿದೆ ಅಂತಾರೆ ಅಂತ ಯತ್ನಾಳ್ ಕೇಳಿದ್ರು ಇದಕ್ಕೆ ಉತ್ತರಿಸಿ ಸಿದ್ದರಾಮಯ್ಯ ನಮ್ಮಂಥ ಸಾಮಾನ್ಯ ಶಾಸಕರಿಗೆ ನೆರವಾಗುತ್ತೆ ಅಂತ ಹೇಳಿದ್ರು. ಯತ್ನಾಳ್ ಅವರೇ, ನೀವು ಧರಣಿ ಕೂರ್ರಿ, ನಮಗೇನೂ ಕೊಟ್ಟಿಲ್ಲ ಅಂತ ಧರಣಿ ಕುಳಿತುಕೊಳ್ಳಿ.ಈ ಬಜೆಟ್ ನಲ್ಲಿ ಎಲ್ಲಿ ನೋಡಿದ್ರೂ ಹಾವೇರಿ, ಶಿಗ್ಗಾಂವ್ ಇದೆ. ಬೊಮ್ಮಾಯಿ ತೆಗೆದು ಹಾಕಿ ನೀವು ಸಿಎಂ‌ ಆಗ್ರಿ ಯತ್ನಾಳ್, ಆಗ ವಿಜಯಪುರಕ್ಕೆ ಹೆಚ್ಚು ಕೊಡಬಹುದು ಎಂದ್ರು

ಅನುದಾನದ ಬಗ್ಗೆ ಕಚ್ಚಾಟ

ಬಾದಾಮಿಗೆ ಎಷ್ಟು ಅನುದಾನ ಕೊಟ್ಟಿದಾರೆ ಅಂತ ಹೇಳಿ‌ ಮೊದಲು ಹೇಳಿ ಅಂತ ಯತ್ನಾಳ್​ ಟಾಂಗ್​ ಕೊಟ್ಟಿದ್ದಾರೆ. ಕೊಟ್ಟಿರೋದನ್ನ ವಾಪಸ್​ ತಗೊಳ್ಳೋಕೆ ಹೇಳಿ, ನಮ್ ಕ್ಷೇತ್ರದಲ್ಲಿ ಸ್ವಲ್ಪ ಕೆಲಸ ಆಗಿರೋದು ಹೌದು. ನಿಮ್ಮ ಕ್ಷೇತ್ರಕ್ಕಾಗಿಲ್ಲ ಅಂದ್ರೆ ರಾಜೀನಾಮೆ ಕೊಡಿ ಹಾಗಿದ್ರೆ ಎಂದ್ರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್​, ಹಾಲಿ ಸಿಎಂ, ಮಾಜಿ ಸಿಎಂ ಅಲ್ಲೆ ಅಡ್ಜಸ್ಟ್​ ಮಾಡಿಕೊಂಡಿದ್ದೀರಾ ಅಂತ ಯತ್ನಾಳ್ ಕುಟುಕಿದ್ರು.

‘ಸ್ನೇಹ ಬೇರೆ ರಾಜಕಾರಣ ಬೇರೆ‘

ಸ್ಪೀಕರ್​ ಕಾಗೇರಿ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸ್ನೇಹ ಬೇರೆ ರಾಜಕಾರಣ ಬೇರೆ. ನಮಗೂ ನಿಮಗೂ ಸ್ನೇಹ ಇದೆ. ಆದರೆ ನೀವು ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದರೆ ನಾನು ಬೇರೆ ಹಿನ್ನೆಲೆಯಿಂದ ಬಂದವರು. ನಮಗೂ ನಿಮಗೂ ವೈಚಾರಿಕ ಭಿನ್ನಾಭಿಪ್ರಾಯ ಇದೆ. ಆದರೆ ಮನುಷ್ಯತ್ವ ಸ್ನೇಹ ಮುಖ್ಯ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ನೀವು ನನ್ನನ್ನು ಪ್ರೀತಿಸುತ್ತೀರಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕಾಗೇರಿ, ‘ನೀವು ಹೊರಗಡೆ ಸಿಕ್ಕಾಗ ಬಜೆಟ್ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತೀರಿ’ ಎಂದರು. ಇದಕ್ಕೆ, ‘ಯಡಿಯೂರಪ್ಪ ದಾರಿ ಬಿಟ್ಟು ಬೇರೆ ದಾರಿಯಿಂದ ಬಂದವರು ಬಸವರಾಜ ಬೊಮ್ಮಾಯಿ.

ಇದನ್ನೂ ಓದಿ: H.D Kumaraswamy: ‘ಸರ್ಕಾರ ಪೊಲೀಸರಿಗೆ ಸಂಬಳ ಕೊಡಲ್ವಾ?,‘ ನಡು ರಸ್ತೆಯಲ್ಲೇ ರಾಮನಗರ ಎಸ್ಪಿ ಬಗ್ಗೆ HDK ಕೆಂಡಾಮಂಡಲ

ಯಡಿಯೂರಪ್ಪ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರು. ಆದರೆ ಸ್ವಲ್ಪ ದಿನ ಕೋಪದಿಂದ ಹೊರ ಹೋಗಿದ್ದರು. ಆದರೆ ಬೊಮ್ಮಾಯಿ 2008 ರಲ್ಲಿ ಬಿಜೆಪಿಗೆ ಹೋದವರು. ಈ ಕಾರಣಕ್ಕಾಗಿ ಇವರಿಗೆ ಎಸ್ ಆರ್ ಬೊಮ್ಮಾಯಿ ಪ್ರಭಾವ ಇದೆ ಎಂಬುವುದು ನನ್ನ ಅನಿಸಿಕೆ. ಹಾಗಿದ್ದರೂ ಬಜೆಟ್ ನೋಡಿದರೆ ಆರ್ ಎಸ್ ಎಸ್ ಪ್ರಭಾವದಿಂದ ಸೋತು ಬಿಟ್ಟಿದ್ದಾರೆ’ ಎಂದರು ಸಿದ್ದರಾಮಯ್ಯ.
Published by:Pavana HS
First published: