ಮಾಜಿ ಶಾಸಕ ಉಮೇಶ್ ಜಾಧವ್ ಮಾರಾಟವಾಗಿದ್ದಾರೆ; ಕಿಡಿಕಾರಿದ ಸಿದ್ದರಾಮಯ್ಯ

ಕುಂದಗೋಳ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಹಾಗೂ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ಕೊಡುಗೆ ಏನು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

G Hareeshkumar | news18
Updated:May 16, 2019, 8:09 AM IST
ಮಾಜಿ ಶಾಸಕ ಉಮೇಶ್ ಜಾಧವ್ ಮಾರಾಟವಾಗಿದ್ದಾರೆ; ಕಿಡಿಕಾರಿದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: May 16, 2019, 8:09 AM IST
  • Share this:
ಹುಬ್ಬಳ್ಳಿ(ಮೇ 16): ಅಪರೇಷನ್ ಕಮಲಕ್ಕೆ ಬಲಿಯಾಗಿ ಮಾಜಿ ಶಾಸಕ ಉಮೇಶ್ ಜಾಧವ್ ಬಿಜೆಪಿಗೆ ಮಾರಾಟವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಗುರುತರ ಆರೋಪ ಮಾಡಿದ್ದಾರೆ.

ಬುಧವಾರ ಕಲಬುರಗಿಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, "ಡಾ. ಉಮೇಶ್​ ಜಾಧವ್ ಮಾರಾಟವಾಗಿದ್ದಾರೆ. ಬಿಜೆಪಿಯವರು ಶಿವಳ್ಳಿಗೆ 25 ಕೋಟಿ ಹಣಕ್ಕೆ ಬೆಲೆ ಕಟ್ಟಿದ್ದರು. ಶಿವಳ್ಳಿ ಈ ವಿಚಾರನ್ನು ನನಗೆ ಫೋನ್ ಮೂಲಕ ತಿಳಿಸಿದ್ದರು.  ಪ್ರಜಾಪ್ರಭುತ್ವ ಉಳಿಯಬೇಕು ಅಂದ್ರೆ ಪಕ್ಷಕ್ಕೆ ಬದ್ಧರಾಗಿ ಚುನಾಯಿತವಾದ ಪಕ್ಷಕ್ಕೆ ನಿಷ್ಠಾವಂತರಾಗಿಬೇಕು" ಎಂದವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ 6 ವರ್ಷ ನಿರ್ಬಂಧ? ದೇವೇಗೌಡರ ಮೊಮ್ಮಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದಿಂದ ಸೂಚನೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು, ನಮ್ಮನ್ನ ನೋಡಬೇಡಿ ಮೋದಿ ಅವರನ್ನು ನೋಡಿ ವೋಟ್ ಹಾಕಿ ಎನ್ನುತ್ತಾರೆ. ನಮ್ಮಲ್ಲಿ ಹೆಣ್ಣು ನೋಡಲು ಹೋದರೆ ಅವರ ಅಮ್ಮನನ್ನು ನೋಡಿ ಅಂದಂತಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಇದೇ ವೇಳೆ, ಕುಂದಗೋಳ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಹಾಗೂ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ಕೊಡುಗೆ ಏನು ಎಂದೂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ರಾಜಕೀಯ ಲಾಭಕ್ಕಾಗಿ ಜಾಧವ್ ಏನು ಬೇಕಾದರೂ ಮಾಡಲು ಸಿದ್ದ : ಪ್ರಿಯಾಂಕ್​​​

ರಾಜಕೀಯ ಲಾಭಕ್ಕಾಗಿ ಉಮೇಶ್ ಜಾಧವ್ ಏನು ಬೇಕಾದರೂ ಮಾಡಲು ಸಿದ್ಧ.ಚಿಂಚೋಳಿಗೆ ದತ್ತು ತಗೋತೀನಿ ಅಂತ ಹೇಳಿದ ಪ್ರಿಯಾಂಕ್ ಎಲ್ಲಿ ಅಂತ ಉಮೇಶ್ ಜಾಧವ್ ಪ್ರಶ್ನಿಸುತ್ತಾನೆ. ನಾನು ಚಿಂಚೋಳಿಯನ್ನು ದತ್ತು ತಗೋತೀನಿ ಅಂತ ನಾನು ಹೇಳಿಲ್ಲ. ಚಿಂಚೋಳಿ ಜನರೇ ನನ್ನನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಅವರು ಉಮೇಶ್ ಜಾಧವ್​ಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಲಿಂಗಾಯತರು ಕಾಂಗ್ರೆಸ್​ಗೆ ಮತ ಹಾಕಿದರೆ ಅಪರಾಧ ಎಂದ ಯಡಿಯೂರಪ್ಪ ವಿರುದ್ದ ಚುನಾವಣಾ ಆಯೋಗಕ್ಕೆ ದೂರು

ಚಿಂಚೋಳಿ ಜನ ಗುಳೇ ಹೋಗ್ತಿದಾರೆ ಅಂತ ಬಿಜೆಪಿ ನಾಯಕರು ಹೇಳ್ತಾರೆ.
ಗುಳೇ ಹೋಗಿದಕ್ಕೆ ಕಾರಣ ಯಾರು? ಯಾಕೆ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡಿಲ್ಲ? ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡದೇ ಇದ್ದುದಕ್ಕೆ ಜನ ಗುಳೇ ಹೋಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಉಮೇಶ್ ಜಾಧವ್ ಮೆದುಳಿಗೆ ಮತ್ತು ನಾಲಿಗೆಗೆ ಮಿತಿ ಇಲ್ಲ ಅನಿಸುತ್ತೆ. ಬಿಜೆಪಿಯವರು ಮತ್ತು ಉಮೇಶ್ ಜಾಧವ್ ಅವರು ಚಿಂಚೋಳಿಗೆ ಉಪಚುನಾವಣೆಯ ಹೊರೆ ಬರಲು ಕಾರಣವಾಗಿದ್ದಾರೆ. ಯಾಕೆ ಉಪ ಚುನಾವಣೆ ಬಂದಿತೆಂದು ಅವರು ಉತ್ತರ ಕೊಡಲಿ. ಅವಿನಾಶ್ ಜಾಧವ್ ಪಾಪ ಕೂಸು ಇದಾನೆ. ಈಗ ಬೇರೆ ಪರೀಕ್ಷೆ ಬರೆದಿದ್ದಾನೆ . ಅವಿನಾಶ್ ಜಾಧವ್ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಆದರೆ ನಮ್ಮ ಅಭ್ಯರ್ಥಿ ಸುಭಾಷ್ ರಾಠೋಡ ಕಾನೂನು ಪದವೀಧರನಿದ್ದು ಈ ಭಾಗದ ಜನರ ಸುಖ ದುಃಖದಲ್ಲಿ ಭಾಗಿಯಾಗಿದ್ದಾನೆ. ಅಂಥವರನ್ನು ಗೆಲ್ಲಿಸುವ ಮೂಲಕ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published: May 16, 2019, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading