ಬೆಂಗಳೂರು: ನಾನು ಎರಡು ಕ್ಷೇತ್ರದಿಂದ ಟೆಕೆಟ್ ನೀಡುವಂತೆ ಹೈಕಮಾಂಡ್ (Congress High Command) ಬಳಿ ಕೇಳಿದ್ದೆ. ವರುಣಾ ಜೊತೆಗೆ ಕೋಲಾರಕ್ಕೂ ಟಿಕೆಟ್ ನೀಡುವಂತೆ ಕೇಳಿದ್ದೇನೆ. ಕೋಲಾರದಲ್ಲಿ(Kolar) ಸ್ಪರ್ಧೆ ಮಾಡುವ ಬಗ್ಗೆ ದೃಢ ನಿರ್ಧಾರವನ್ನು ಸಿದ್ದರಾಮಯ್ಯ (Former CM Siddaramaiah) ಪ್ರಕಟಿಸಿದರು. ಟಿಕೆಟ್ ನೀಡಿದ್ರೆ ಎರಡು ಕ್ಷೇತ್ರಗಳಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಹೈಕಮಾಂಡ್ ಅವರು ವರುಣಾದಲ್ಲಿ ನಿಲ್ಲು ಅಂತ ಹೇಳಿದರು. ಅಲ್ಲಿಯೂ ನಿಲ್ತಾ ಇದ್ದೀನಿ, ಕೋಲಾರನೂ ಬೇಕು ಅಂತ ಕೇಳಿದ್ದೇನೆ. ಯತೀಂದ್ರ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವು ಶಾಸಕರಿಗೆ ಟಿಕೆಟ್ ನೀಡಿಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಲ್ಲೆಲ್ಲಿ ಎರಡಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದವೋ ಅಲ್ಲಿಗೆ ಇನ್ನು ಟಿಕೆಟ್ ಫೈನಲ್ ಮಾಡಿಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಮೀಸಲಾತಿ ಪ್ರಕಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇವರು ಅಧಿಕಾರಕ್ಕೆ ಬಂದು 4 ವರ್ಷ ಆಯ್ತು. ಈಗ ಯಾಕೆ ಮೀಸಲಾತಿ ಪ್ರಕಟ ಮಾಡ್ತಾರೆ? ಎಲ್ಲಾ ಚುನಾವಣೆಗಾಗಿ ಮಾಡ್ತಾ ಇರೋ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.
ಈಗ ಯಾಕೆ ಮೀಸಲಾತಿ ತೆಗೆದ್ರು?
ಅಲ್ಪಸಂಖ್ಯಾತರಿಗೆ ಯಾಕೆ ಮೀಸಲಾತಿ ತೆಗೆದರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇವರ ಮೀಸಲಾತಿ ತೆಗೆದು ಬೇರೆಯವರಿಗೆ ಯಾಕೆ ಕೊಡಬೇಕು. ಈಗಾಗಲೇ 56 % ಮೀಸಲಾತಿ ಇದೆ, EWS ಸೇರಿದ್ರೆ 66% ಮೀಸಲಾತಿ ಆಗುತ್ತೆ. ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಘೋಷಣೆ ಮಾಡಿದರು. ಆದರೆ ಇವತ್ತಿನವರೆಗೂ 9 ಶೆಡ್ಯೂಲ್ಗೆ ಸೇರಿಸಿಲ್ಲ ಎಂದು ತಿಳಿಸಿದರು.
ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯರಿಗೆ ಮತ್ತೊಂದು ಕ್ಷೇತ್ರದ ಟಿಕೆಟ್ ಸಿಗುತ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಆದ್ದರಿಂದಲೇ ಕೋಲಾರ ಮತ್ತು ಬಾದಾಮಿ ಕ್ಷೇತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಉಳಿಸಿಕೊಂಡಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ