ಚಿಕ್ಕಮಗಳೂರು (ಮಾರ್ಚ್ 07) : ಭಾರತ ಮಾತೆಯನ್ನು ಬಿಜೆಪಿಯವರೇನು ಗುತ್ತಿದೆ ಪಡೆದಿದ್ದಾರ? ಎಂದು ಕಟುವಾಗಿ ಪ್ರಶ್ನೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇನ್ಮುಂದೆ ನಾವು ಬಿಜೆಪಿಯವರಿಗಿಂತ ಜೋರಾಗಿ ಭಾರತ ಮಾತೆಯ ಹೆಸರನ್ನು ಹೇಳೋಣ ಎಂದಿದ್ದಾರೆ.
ಇಂದು ಚಿಕ್ಕಮಗಳೂರಿನಲ್ಲಿ ಸಿಎಎ ವಿರುದ್ಧದ ಜನಜಾಗೃತಿ ಸಭೆಯಲ್ಲಿ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ನಾನು ಮನೆಯಲ್ಲಿ ಹುಟ್ಟಿದ್ದು, ಡೇಟ್ ಆಫ್ ಬರ್ಥ್ ಗೊತ್ತಿಲ್ಲ. ಹೀಗಾಗಿ ನನ್ನನ್ನು ಡೌಟ್ ಫುಲ್ ಅಂತ ಮಾಡ್ತೀರಾ? ಎಂದು ಕಿಡಿಕಾರಿರುವ ಅವರು, ಭಾರತದಲ್ಲಿ ಇದೇ ರೀತಿ ಹಲವಾರು ಜನರಿಗೆ ಹುಟ್ಟು ದಿನ ಗೊತ್ತಿಲ್ಲ, ಇನ್ನೂ ಬರ್ಥ್ ಸರ್ಟಿಫಿಕೇಟ್ ಬಹುತೇಕರ ಬಳಿ ಇಲ್ಲ. ಆದರೂ ಬಿಜೆಪಿಯವರು ಈ ವಿವಾದಾತ್ಮಕ ಕಾನೂನನ್ನು ಜಾರಿಗೆ ತರುತ್ತಿದ್ದಾರೆ ಇವರು ಮಾನ, ಮರ್ಯಾದೆ ಇಲ್ಲದ ಭಂಡ ಜನ" ಎಂದು ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಗಲಭೆ ಮಾಡ್ಸಿದ್ದು ಬಿಜೆಪಿಯವರೇ ಅವರಿಗೆ ಇದೇ ಕೆಲಸ. ಅದಕ್ಕೆ ಡಾ|ಬಿ.ಆರ್. ಅಂಬೇಡ್ಕರ್ ಅಂದೇ ಎಚ್ಚರಿಕೆ ಕೊಟ್ಟಿದ್ರು "ಸಂವಿಧಾನ ಫೇಲಾಗಲ್ಲ, ಒಂದು ವೇಳೆ ಸಂವಿಧಾನ ಫೇಲಾದ್ರೆ ಅದು ಮತಾಂಧರಿಂದ ಮಾತ್ರ ಸಾಧ್ಯ" ಎಂದು ಹೇಳಿದ್ದರು. ಇನ್ನೂ ಬಿಜೆಪಿಯವರು ಮಾತೆತ್ತಿದರೆ ಭಾರತ ಮಾತೆಯ ಹೆಸರೇಳುತ್ತಾರೆ. ಇವರೇನು ಭಾರತ ಮಾತೆಯನ್ನು ಗುತ್ತಿದೆ ಪಡೆದಿದ್ದಾರಾ? ಇನ್ಮುಂದೆ ನಾವು ಭಾರತ ಮಾತೆಯ ಹೆಸರನ್ನು ಅವರಿಗಿಂತ ಜೋರಾಗಿ ಹೇಳೋಣ" ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ : ಭಾರತದ ಹೊರತು ಎಲ್ಲರನ್ನೂ ಬರಮಾಡಿಕೊಳ್ಳುವ ದೇಶ ಯಾವುದಿದೆ?; ಸಿಎಎ ವಿರೋಧಿಗಳಿಗೆ ಸಚಿವ ಜೈಶಂಕರ್ ಪ್ರಶ್ನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ