ನನಗೇಕೆ ಇನ್ನೂ ಸರ್ಕಾರಿ ಕಾರು ನೀಡಿಲ್ಲ? ಸ್ಪೀಕರ್ ಸರ್ವಾಧಿಕಾರಿಯೇ?; ಕಾಗೇರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಸಿಎಂ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ತಕ್ಷಣವೇ ಕಾರು ಸೇರಿ ಎಲ್ಲ ಸೌಲಭ್ಯ ಕೊಟ್ಟಿದ್ದಾರೆ. ಮಂತ್ರಿಯಾದವರಿಗೆ ಪ್ರಮಾಣ ವಚನ ಮುಗಿದ ತಕ್ಷಣವೇ ಕಾರು ರೆಡಿ ಇರುತ್ತವೆ. ನಮಗೇಕೆ ಇದುವರೆಗೂ ಸ್ಪೀಕರ್ ಕಾರು ನೀಡಿಲ್ಲ? ಸ್ಪೀಕರ್ ಏನು ಸರ್ವಾಧಿಕಾರಿಯೇ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

news18-kannada
Updated:December 30, 2019, 1:54 PM IST
ನನಗೇಕೆ ಇನ್ನೂ ಸರ್ಕಾರಿ ಕಾರು ನೀಡಿಲ್ಲ? ಸ್ಪೀಕರ್ ಸರ್ವಾಧಿಕಾರಿಯೇ?; ಕಾಗೇರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಸಿದ್ದರಾಮಯ್ಯ- ಸ್ಪೀಕರ್ ಕಾಗೇರಿ
  • Share this:
ಬೆಂಗಳೂರು (ಡಿ. 30): ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಅವರಿಗೆ ಕಾರು ಕೊಡುತ್ತೀರಿ. ಆದರೆ, ನಾನು ಪ್ರತಿಪಕ್ಷ ನಾಯಕನಾಗಿ ಪ್ರಮಾಣವಚನ ಸ್ವೀಕಾರ ಮಾಡಿ 3 ತಿಂಗಳಾದರೂ ಯಾಕಿನ್ನೂ ಕಾರು ನೀಡಿಲ್ಲ? ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ನಾಯಕನಾಗಿರುವ ತಮಗೆ ಸರ್ಕಾರಿ ಸವಲತ್ತು, ಸರ್ಕಾರಿ ಕಾರು ಮತ್ತು ಸಿಬ್ಬಂದಿಯನ್ನು ಒದಗಿಸಬೇಕೆಂದು 2 ತಿಂಗಳ ಹಿಂದೆಯೇ ಸ್ಪೀಕರ್​ಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ ಮನವಿ ಮಾಡಿದ್ದರು. ವಿಪಕ್ಷ ನಾಯಕರಿಗೆ ಸರ್ಕಾರ ಸೌಲಭ್ಯಗಳನ್ನು ಮಂಜೂರು ಮಾಡುವ ಜವಾಬ್ದಾರಿ ಸ್ಪೀಕರ್ ಅವರದ್ದಾಗಿರುತ್ತದೆ. ಆದರೆ, ಸಿದ್ದರಾಮಯ್ಯ ಪತ್ರ ಬರೆದು ತಿಂಗಳಾದರೂ ಇನ್ನೂ ಸರ್ಕಾರಿ, ಕಾರು, ಸಿಬ್ಬಂದಿಯನ್ನು ಮಂಜೂರು ಮಾಡದ ಸ್ಪೀಕರ್ ಕಾಗೇರಿ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಪ್ರತಿಪಕ್ಷ ನಾಯಕರಾದವರಿಗೆ ಕಾರು, ಸಿಬ್ಬಂದಿ, ಸರ್ಕಾರಿ ನಿವಾಸ ಕೊಡುವುದು ಸ್ಪೀಕರ್ ಕರ್ತವ್ಯ. ನಾನು ವಿಪಕ್ಷ ನಾಯಕನಾಗಿ ತಿಂಗಳುಗಳೇ ಕಳೆದಿವೆ. ಇದುವರೆಗೂ ಕಾರು ನೀಡಿಲ್ಲ, ಸಿಬ್ಬಂದಿಯೂ ಇಲ್ಲ. ಪ್ರತಿಪಕ್ಷ ನಾಯಕನಿಗೆ ವೇತನ, ಭತ್ಯೆಯೂ ಇಲ್ಲ ಎಂದು ಆಪ್ತರ ಮುಂದೆ ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಅಸ್ಮಿತೆ ಬಗ್ಗೆ ಕೆಣಕಿದರೆ ಸುಮ್ಮನಿರೊಲ್ಲ: ಶಿವಸೇನೆ, ಫಡ್ನವಿಸ್​ಗೆ ಸಿ.ಟಿ. ರವಿ ಎಚ್ಚರಿಕೆ

ಸಿಎಂ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ತಕ್ಷಣವೇ ಕಾರು ಸೇರಿ ಎಲ್ಲ ಸೌಲಭ್ಯ ಕೊಟ್ಟಿದ್ದಾರೆ. ಮಂತ್ರಿಯಾದವರಿಗೆ ಪ್ರಮಾಣ ವಚನ ಮುಗಿದ ತಕ್ಷಣವೇ ಕಾರು ರೆಡಿ ಇರುತ್ತವೆ. ನಮಗೇಕೆ ಇದುವರೆಗೂ ಸ್ಪೀಕರ್ ಕಾರು ನೀಡಿಲ್ಲ? ಸ್ಪೀಕರ್ ಏನು ಸರ್ವಾಧಿಕಾರಿಯೇ? ಆಡಳಿತ ಪಕ್ಷದವರಿಗೊಂದು ನ್ಯಾಯ, ವಿಪಕ್ಷದವರಿಗೆ ಮತ್ತೊಂದು ನ್ಯಾಯವೇ? ನಾವೇನು ಪ್ರಜಾಪ್ರಭುತ್ವದಲ್ಲಿದ್ದೇವಾ ? ಅಥವಾ ಬೇರೆ ವ್ಯವಸ್ಥೆಯಲ್ಲಿದ್ದೇವಾ? ಎಂದು ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.

ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ತಿಂಗಳೇ ಕಳೆದಿದೆ. ಇನ್ನೂ ವಿರೋಧ ಪಕ್ಷದವರಿಗೆ ಸಿಗಬೇಕಾದ ಸರ್ಕಾರಿ ಕಾರು ಮತ್ತು ಸಿಬ್ಬಂದಿಗಳನ್ನು ಅವರಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ಕಿಡ್ನಾಪ್ ಮಾಡಲು ಬಂದವರು ಯುವತಿಯ ಮೂಗು ಕತ್ತರಿಸಿ ಹೋದರು!ಕೆಲ ತಿಂಗಳ ಹಿಂದಷ್ಟೇ  ಸ್ಪೀಕರ್ ಕಾಗೇರಿ ನಡೆಯ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದರು. ವಿಪಕ್ಷ ನಾಯಕರಾದ ತಮಗೆ ಸರ್ಕಾರಿ ಸವಲತ್ತು ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಕಾನೂನಿನ ಪ್ರಕಾರ , ಸಂವಿಧಾನಿಕವಾಗಿ ವಿಪಕ್ಷ ನಾಯಕರಿಗೆ ನೀಡಬೇಕಾಗದ ಸವಲತ್ತು ನೀಡುವ ಹೊಣೆಯನ್ನು ಸ್ಪೀಕರ್ ಕಚೇರಿ ನಿರ್ವಹಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. 

 

 
First published: December 30, 2019, 1:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading