ಗೋಮಾಂಸ ರಫ್ತು ಮಾಡುತ್ತಿರುವವರೆಲ್ಲ ಬಿಜೆಪಿ ಬೆಂಬಲಿಗರು; ಸಿದ್ದರಾಮಯ್ಯ ಆರೋಪ

Siddaramaiah: ಈಗಾಗಲೇ ಇರುವ ಗೋಹತ್ಯೆ ನಿಷೇಧ ಕಾಯ್ದೆಗೆ ಈಗ ತಿದ್ದುಪಡಿ ತಂದಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಲು, ವೈಜ್ಞಾನಿಕವಾಗಿ ಅಧ್ಯಯನ ಮಾಡದೆ ಕಾಯ್ದೆ ಜಾರಿಗೆ ತಂದಿದ್ದಾರೆ. ಈಗ ವಿಧೇಯಕವನ್ನು ಕಾನೂನು ಮಾಡ ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಡಿ. 11): ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ಬಿಜೆಪಿಯವರು ಸದನದಲ್ಲಿ ಏಕಾಏಕಿ ವಿಧೇಯಕ ಮಂಡನೆ ಮಾಡಿದರು. 1964ರ ಕಾಯ್ದೆಗೆ ಅನೇಕ ತಿದ್ದುಪಡಿ ಮಾಡಿದ್ದಾರೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ 1964ರಂದ ಅಸ್ಥಿತ್ವದಲ್ಲಿದೆ. ಅದರಲ್ಲಿ ಯಾವ ಪ್ರಾಣಿಗಳನ್ನು ವಧೆ ಮಾಡಬಹುದೆಂದು ತಿಳಿಸಿದೆ. 12 ವರ್ಷ ತುಂಬಿದ್ದರೆ ಅಂಥವನ್ನು ವಧೆ ಮಾಡಬಹುದು. ಹಸು ಅಥವಾ ಎಮ್ಮೆ ಗೊಡ್ಡಾದರೆ, ಹಾಲು ಕರೆಯದಿದ್ದರೆ ವಧೆ ಮಾಡಬಹುದು. ಪ್ರಾಣಿ ರೋಗಗ್ರಸ್ಥವಾಗಿದ್ದರೆ ತಿನ್ನಲು ಯೋಗ್ಯವಲ್ಲ. ಈ ಎಲ್ಲಾ ಅಂಶಗಳು ಆ ಕಾಯ್ದೆಯಲ್ಲಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ. ಅವರು ಆರ್​ಎಸ್​ಎಸ್ ಕಡೆಯವರು. ಅದಕ್ಕೆ ಮಾಡಿದರೆ ಮಾಡಿಕೊಳ್ಳಲಿ ಅಂತ ಸುಮ್ಮನಿದ್ದಾರೆ. ಗೋಮಾಂಸ ರಫ್ತು ಮಾಡುತ್ತಿರುವವರೆಲ್ಲ ಬಿಜೆಪಿ ಬೆಂಬಲಿಗರು. ಅದನ್ನು ನಿಲ್ಲಿಸಲು ಇವರಿಂದ ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಈಗಾಗಲೇ ಇರುವ ಗೋಹತ್ಯೆ ನಿಷೇಧ ಕಾಯ್ದೆಗೆ ಈಗ ತಿದ್ದುಪಡಿ ತಂದಿದ್ದಾರೆ. ತಿದ್ದುಪಡಿಗೂ ಮುನ್ನ ಯಾವುದೇ ಅಧ್ಯಯನ ಮಾಡಿಲ್ಲ. ಅಧ್ಯಯನ ಮಾಡಿರುವ ವರದಿಯನ್ನೂ ನೋಡಿಲ್ಲ. ಕಾನೂನು ತರಬೇಕಾದರೆ ಸಾಧಕ, ಬಾಧಕಗಳನ್ನು ನೋಡಬೇಕು. ಕೇವಲ ಭಾವನಾತ್ಮಕವಾಗಿ ಈ ಕಾಯ್ದೆಯನ್ನು ತಂದಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಲು ಇದನ್ನು ತಂದಿದ್ದಾರೆ. ವೈಜ್ಞಾನಿಕವಾಗಿ ಅಧ್ಯಯನ ಮಾಡದೆ ಕಾಯ್ದೆ ಜಾರಿಗೆ ತಂದಿದ್ದಾರೆ. ಈಗ ವಿಧೇಯಕವನ್ನು ಕಾನೂನು ಮಾಡ ಹೊರಟಿದ್ದಾರೆ ಎಂದು ರಾಜ್ಯ ಸರ್ಕಾರದ ನಡೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳನ್ನು ಬೀಳಿಸಲು ಅಸಾಧ್ಯ; ಬಿಜೆಪಿ ಪರ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಭರ್ಜರಿ ಬ್ಯಾಟಿಂಗ್

ಕರ್ನಾಟಕದಲ್ಲಿ ಶೇ. 3.4ರಷ್ಟು ಗಂಡು ಕರು ಜನನವಾಗುತ್ತದೆ. ಮೂರೂವರೆ ಕೋಟಿ ಕರು ಹಾಕುವ ಜಾನುವಾರು ಬರುತ್ತವೆ. ಗಂಡು ಕರುಗಳು 10 ವರ್ಷ ಬದುಕಲಿವೆ. 34 ಕೋಟಿ ಹೋರಿಗಳು ಪ್ರತಿ ವರ್ಷ ಸಿಗುತ್ತವೆ. 6 ಕೋಟಿ ಹಸುಗಳು ಹಾಲು ನಿಲ್ಲಿಸುತ್ತವೆ. ಒಟ್ಟು 27 ಕೋಟಿ ಜಾನುವಾರು ಅನುತ್ಪಾದಕವಾಗುತ್ತವೆ. 5 ವರ್ಷಕ್ಕೊಮ್ಮೆ ಜಾನುವಾರು ಜನಗಣತಿ ನಡೆಯಲಿದೆ. 3,98,163 ಮಿಶ್ರತಳಿ ರಾಸುಗಳು ಇವೆ. ನಾಟಿ‌ ಹಸುಗಳು 45,60,842 ಇವೆ. 21,48,560 ಎಮ್ಮೆಗಳಿವೆ. 2012ರ ಪಶು ಗಣತಿಯಂತೆ ಕರ್ನಾಟಕದಲ್ಲಿ 25,75,805 ಕುಟುಂಬಗಳು ಹಸುಗಳನ್ನು ಸಾಕುತ್ತಿವೆ. 13,17,403 ಕುಟುಂಬದವರು ಎಮ್ಮೆ ಸಾಕುತ್ತಾರೆ. ಪ್ರತಿದಿನ 79.35 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಷ್ಟು ರಾಸುಗಳಿಗೆ ಮೇವು ಎಷ್ಟು ಬೇಕಾಗುತ್ತದೆ? ತಿಂಗಳಿಗೆ 23 ಲಕ್ಷ ಮೆಟ್ರಿಕ್ ಟನ್ ಮೇವು ಬೇಕಿದೆ. 2.76 ಲಕ್ಷ ಮೆಟ್ರಿಕ್ ಟನ್ ವರ್ಷಕ್ಕೆ ಮೇವು ಬೇಕು. ಇದನ್ನೆಲ್ಲಾ ಎಲ್ಲಿ ತರೋಕೆ ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಂದಾದ ಸಿಎಂ ಯಡಿಯೂರಪ್ಪ ಸರ್ಕಾರ

ಬರಗಾಲ ಬಂದರೆ ರಾಸುಗಳನ್ನು ಸಾಕುವುದು ಹೇಗೆ? ಹೊರ ರಾಜ್ಯಗಳಿಂದ ಶೇ. 40ರಷ್ಟು ಮೇವು ತರಿಸಿಕೊಳ್ಳುತ್ತೇವೆ. ಒಂದು ಪಶುಗೆ ಪ್ರತಿದಿನ 6 ಕೆ.ಜಿ. ಮೇವು ಬೇಕಿದೆ. ಕಳೆದ 20 ವರ್ಷಗಳಲ್ಲಿ 15 ವರ್ಷ ಬರಗಾಲವಿತ್ತು. ಬರಗಾಲದಲ್ಲಿ ರೈತರು ಜೀವನ ನಡೆಸೋದೇ ಕಷ್ಟ. ಇಂತಹ ಸಂದರ್ಭದಲ್ಲಿ ಗೋಹತ್ಯೆ ಕಾನೂನು ತಂದಿದ್ದಾರೆ. ನೀವು ಅಧ್ಯಯನ ಮಾಡಿಸಿ ತನ್ನಿ, ಅದಕ್ಕೆ ನಮ್ಮ ತಕರಾರಿಲ್ಲ. ಗೋ ಶಾಲೆಗಳಲ್ಲಿ‌ ಇರುವ ಹಸುವಿಗೆ ಮೇವಿಲ್ಲ. ಗೋ ಶಾಲೆಗೆ ಕೊಟ್ಟರೆ ಜನರೇ ಫೀಜ್ ಕಟ್ಟಬೇಕು. ಕೊಟ್ಟ ಹಸುವಿನ ಮೇಂಟೇನನ್ಸ್​ಗೆ ನೀಡಬೇಕು. ರೈತರು ಕಷ್ಟದಲ್ಲಿದ್ದಾರೆ, ಅವರಿಗೆ ಜೀವನ ನಡೆಸೋದು ಕಷ್ಟವಾಗಿದೆ. ಮುದಿ ಹಸುಗಳನ್ನು ಸಾಕೋಕೆ‌ ದುಡ್ಡು ಕೊಡಿ ಅಂದರೆ ಎಲ್ಲಿಂದ ತರುವುದು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗೋ ಮಾತೆ ಅಂತ ಪೂಜೆ ಮಾಡಿದರೆ ಆಗೋಯ್ತೇ? ನಾವು ಸಂಕ್ರಾಂತಿಯಲ್ಲಿ ಗೋ ಪೂಜೆ ಮಾಡುತ್ತೇವೆ. ದೀಪಾವಳಿ ಹಬ್ಬದಲ್ಲೂ ಎಡೆ ಹಾಕುತ್ತೇವೆ. ಸಾಕುವವರು ಅವುಗಳಿಗೆ ಪೂಜೆ ಮಾಡುತ್ತಾರೆ. ಯಾರು ಸಾಕೋದಿಲ್ಲ ಅವರು ಈ ಕಾನೂನು ತರ್ತಾರೆ. ಇದು ರೈತರ ಮೇಲೆ ಮತ್ತಷ್ಟು ಸಂಕಷ್ಟ ತಂದಿಡಲಿದೆ. ರೈತರು ಹಸು ಸಾಕೋದಕ್ಕೂ ಮುಂದೆ ಕಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
Published by:Sushma Chakre
First published: