HOME » NEWS » State » SIDDARAMAIAH ANGRY ON BJP GOVERNMENT BS YEDIYURAPPA OVER KARNATAKA LOCKDOWN GUIDELINES SCT

Siddaramaiah: ಕರ್ನಾಟಕ ಸಂಪೂರ್ಣ ಲಾಕ್​ಡೌನ್ ಆಗಬೇಕು, ಇದು ಸತ್ತ ಸರ್ಕಾರ; ಸಿದ್ದರಾಮಯ್ಯ ಆಕ್ರೋಶ

Karnataka Lockdown: ಈಗ ಜಾರಿ ಮಾಡಿರುವುದು ಸಂಪೂರ್ಣ ಲಾಕ್ ಡೌನ್ ಅಲ್ಲ. ನನ್ನ ಅಭಿಪ್ರಾಯದಲ್ಲಿ ಎರಡು ವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಲಾಕ್ ಮಾಡಿದ ರಾಜ್ಯಗಳಲ್ಲಿ ಕೊರೊನಾ ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

news18-kannada
Updated:May 10, 2021, 3:44 PM IST
Siddaramaiah: ಕರ್ನಾಟಕ ಸಂಪೂರ್ಣ ಲಾಕ್​ಡೌನ್ ಆಗಬೇಕು, ಇದು ಸತ್ತ ಸರ್ಕಾರ; ಸಿದ್ದರಾಮಯ್ಯ ಆಕ್ರೋಶ
ವಿಪಕ್ಷ ನಾಯಕ ಸಿದ್ದರಾಮಯ್ಯ.
  • Share this:
ಬೆಂಗಳೂರು (ಮೇ 10): ಕರ್ನಾಟಕದಲ್ಲಿ ಇಂದಿನಿಂದ ಲಾಕ್​ಡೌನ್ ಘೋಷಣೆಯಾಗಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಮನೆಯಿಂದ ಹೊರಗೆ ಕಾಲಿಡುವವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಆದರೆ, ಹಲವು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಣ್ಣು, ಕಲ್ಲು ಇರೋ ರಾಗಿಯನ್ನು ಸರ್ಕಾರ ಕೊಡ್ತಿದೆ. ಬಡವರ ಜೀವ ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಉತ್ಪಾದಕರನ್ನು ಉಳಿಸಿಕೊಳ್ಳಲು ಸರ್ಕಾರ ಅವರ ಕೈಗೆ ಹಣ ಕೊಡಬೇಕು, ಆರ್ಥಿಕ ಸಹಾಯ ಮಾಡಬೇಕು. ಆಂಧ್ರಪ್ರದೇಶ, ಕೇರಳದಲ್ಲಿ ಪ್ಯಾಕೇಜ್ ಕೊಟ್ಟಿದ್ದಾರೆ. ಇಲ್ಲೂ ಸಹ ಪ್ಯಾಕೇಜ್ ಕೊಡಬೇಕು ಎಂದು ಒತ್ತಾಯ ಮಾಡ್ತೀನಿ. ಈ ಸರ್ಕಾರದಲ್ಲಿ ಬದ್ಧತೆ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈಗ ಜಾರಿ ಮಾಡಿರುವುದು ಸಂಪೂರ್ಣ ಲಾಕ್ ಡೌನ್ ಅಲ್ಲ. ನನ್ನ ಅಭಿಪ್ರಾಯದಲ್ಲಿ ಎರಡು ವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಲಾಕ್ ಮಾಡಿದ ರಾಜ್ಯಗಳಲ್ಲಿ ಕೊರೊನಾ ಕಡಿಮೆಯಾಗಿದೆ. ಆಂಧ್ರಪ್ರದೇಶ, ದಹಲಿಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿದ ಪರಿಣಾಮ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಕರ್ನಾಟಕದಲ್ಲೂ ಫುಲ್ ಲಾಕ್ ಡೌನ್ ಆಗಬೇಕು. ಕರ್ನಾಟಕದಲ್ಲಿ ಕೊರೊನಾ ಟೆಸ್ಟ್ ಗಳನ್ನ ಸಮರ್ಪಕವಾಗಿ ಮಾಡ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬರುತ್ತಿರುವ ವೆಂಟಿಲೇಟರ್ ಬಳಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಸತ್ತ ಸರ್ಕಾರರಿಂದ ಅರಾಜಕತೆ ಸೃಷ್ಟಿ ಆಗಿದೆ. ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ವಿಫಲವಾದ ಬಳಿಕ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದೆ. ಇದರ ಅರ್ಥ ಸರ್ಕಾರ ಸತ್ತು ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೋನಾ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಹೀಗಾಗಿ, ಜನರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಿಮ್ಮ ರಕ್ಷಣೆ ಜತೆಗೆ ಬೇರೆಯವರ ರಕ್ಷಣೆಯನ್ನೂ ಮಾಡಿ. ಎಲ್ಲರೂ ಕೊರೋನಾ ಲಸಿಕೆಗಳನ್ನು ತಪ್ಪದೇ ಹಾಕಿಸಿಕೊಳ್ಳಿ. ಕೊರೋನಾಗೆ ಲಸಿಕೆ ಮಾತ್ರ ಶಾಶ್ವತ ಪರಿಹಾರ. ರಾಜ್ಯದಲ್ಲಿ ಕೊರೋನಾ ಲಸಿಕೆಯ ಕೊರತೆ ಆಗಿದೆ. ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾಯುತ್ತಿದ್ದಾರೆ. ಆಕ್ಸಿಜನ್ ಸಕಾಲದಲ್ಲಿ ಸಿಕ್ಕರೆ ರೋಗಿಗಳನ್ನು ಬದುಕಿಸಬಹುದು. ಆಕ್ಸಿಜನ್ ಇಲ್ಲದೇ ದಾರಿಯಲ್ಲಿ ಬರುವಾಗ, ಆಸ್ಪತ್ರೆ ಕಾರಿಡರ್, ರಸ್ತೆ, ಆಂಬುಲೆನ್ಸ್, ಆಟೋದಲ್ಲಿ ಸತ್ತು ಹೋದರು ಅನ್ನೋ ಸುದ್ದಿಗಳನ್ನು ಕೇಳಿದಾಗ ಬಹಳ ಬೇಸರವಾಗುತ್ತಿದೆ ಎಂದು ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ.
Youtube Video

ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಕರ್ನಾಟಕದಲ್ಲಿ ಬಳಸಿಕೊಳ್ಳಿ ಅಂತ ಹೇಳ ಬೇಕಿತ್ತು. ಕರ್ನಾಟಕ ಸರ್ಕಾರಕ್ಕೆ ಅಸಡ್ಡೆ ಜಾಸ್ತಿಯಾಗಿದೆ. ತಜ್ಞರೇ ಮೊದಲೇ ಹೇಳಿದ್ದರೂ ತಜ್ಞರ ಸಲಹೆಯನ್ನ ವಿರೋಧಿಸಿದರು. ಬಹಳ ಜನ ಶಾಸಕರು ಆಸ್ಪತ್ರೆಗಳಿಗೆ ಬೆಡ್, ರೆಮಿಡಿಸಿವರ್, ಕಿಟ್ ಗಳನ್ನು ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಇವತ್ತು ಲಾಕ್ ಡೌನ್ ಇದ್ದರೂ ಕೂಡ ಸಾಂಕೇತಿಕವಾಗಿ ಫುಡ್ ಕಿಟ್ ಕೊಡ್ತಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Published by: Sushma Chakre
First published: May 10, 2021, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories