ಜನರ ಕಷ್ಟಕ್ಕೆ ಸ್ಪಂದಿಸದಿದ್ರೆ ಸಸ್ಪೆಂಡ್​ ಆಗೋಗ್ತೀಯ; ಬದಾಮಿಯಲ್ಲಿ ಪಿಡಿಓಗೆ ಸಿದ್ದರಾಮಯ್ಯ ಎಚ್ಚರಿಕೆ

ಬದಾಮಿಯ ನೆರೆಪೀಡಿತ ಪ್ರದೇಶಗಳ ಪರಿಶೀಲನೆಗೆ ಹೋದಾಗ ಅಧಿಕಾರಿಗಳು ಬಾರದ್ದನ್ನು ಕಂಡು ಕೋಪಗೊಂಡ ಸಿದ್ದರಾಮಯ್ಯ ಅಧಿಕಾರಿಗಳೇನು ಕತ್ತೆ ಕಾಯೋಕೆ ಹೋಗಿದ್ದಾರಾ? ಎಂದು ಗುಡುಗಿದರು. ತಡವಾಗಿ ಬಂದ ತಹಶೀಲ್ದಾರ್ ವಿರುದ್ಧ ಗರಂ ಆದ ಅವರು ಇಷ್ಟೊತ್ತು ಏನ್ಮಾಡುತ್ತಿದ್ದಿ? ನಾನು ಬಂದರೂ ನಿನಗೆ ಬರೋಕಾಗಲ್ವ? ಎಂದು ಪ್ರಶ್ನಿಸಿದರು.

Sushma Chakre | news18-kannada
Updated:October 23, 2019, 12:25 PM IST
ಜನರ ಕಷ್ಟಕ್ಕೆ ಸ್ಪಂದಿಸದಿದ್ರೆ ಸಸ್ಪೆಂಡ್​ ಆಗೋಗ್ತೀಯ; ಬದಾಮಿಯಲ್ಲಿ ಪಿಡಿಓಗೆ ಸಿದ್ದರಾಮಯ್ಯ ಎಚ್ಚರಿಕೆ
ನೆರೆಪೀಡಿತ ಸ್ಥಳಗಳ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ತರಾಟೆ
  • Share this:
ಬಾಗಲಕೋಟೆ (ಅ. 23): ನಾನು ಬಂದ್ರೂ ನಿಮಗೆ ಬರೋಕಾಗಲ್ವ? ಇಷ್ಟೊತ್ತು ಏನು ಮಾಡ್ತಿದ್ದೆ? ಅಧಿಕಾರಿಗಳೆಲ್ಲ ಕತ್ತೆ ಕಾಯೋಕೆ ಹೋಗಿದ್ದಾರಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಾಗಲಕೋಟೆಯ ನೆರೆಪೀಡಿತ ಪ್ರದೇಶಗಳ ಪರಿಶೀಲನೆ ವೇಳೆ ಗುಡುಗಿದ್ದಾರೆ. 

ಪ್ರವಾಹದ ಹೊಡೆತದಿಂದ ಚೇತರಿಸಿಕೊಳ್ಳುವುದರೊಳಗೆ ಬಾಗಲಕೋಟೆಯಲ್ಲಿ ಮತ್ತೆ ಭಾರೀ ಮಳೆ ಶುರುವಾಗಿದೆ. ಮಲಪ್ರಭಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ವಕ್ಷೇತ್ರವಾದ ಬದಾಮಿ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಬದಾಮಿ ತಾಲೂಕಿನ ಗೋವನಕೊಪ್ಪದಲ್ಲಿ ಪರಿಶೀಲನೆಗೆ ತೆರಳಿದ್ದ ಸಿದ್ದರಾಮಯ್ಯ ಅಲ್ಲಿಗೆ ಇನ್ನೂ ಅಧಿಕಾರಿಗಳು ಬಂದಿಲ್ಲವೆಂಬುದನ್ನು ತಿಳಿದು ಕೋಪಗೊಂಡರು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನೆರೆ ಸಂತ್ರಸ್ತರ ಅಳಲು ಆಲಿಸಿದ ಸಿದ್ದರಾಮಯ್ಯ ಈ ವೇಳೆ ಅಧಿಕಾರಿಗಳು ಗೈರಾದುದಕ್ಕೆ ಆಕ್ರೋಶ ಹೊರಹಾಕಿದರು. 'ಏಯ್ ಎಲ್ಲಿದ್ದಾರೆ ಅಧಿಕಾರಿಗಳು?' ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ  ತಡವಾಗಿ ಬಂದ ತಹಶೀಲ್ದಾರ್ ವಿರುದ್ಧ ಗರಂ ಆದರು. 'ಇಷ್ಟೊತ್ತು ಏನ್ಮಾಡುತ್ತಿದ್ದಿ? ನಾನು ಬಂದರೂ ನಿನಗೆ ಬರೋಕಾಗಲ್ವ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ತಹಶೀಲ್ದಾರ್, 'ರಸ್ತೆ ಬಂದ್ ಆಗಿತ್ತು. ಅದನ್ನು ಕ್ಲಿಯರ್ ಮಾಡಿಸೋಕೆ ಹೋಗಿದ್ದೆ. ಆದ್ದರಿಂದಲೇ ತಡವಾಯಿತು' ಎಂದು ಸಮಜಾಯಿಷಿ ನೀಡಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಇನ್ನೆರಡು ದಿನ ಭಾರೀ ಮಳೆ; ಕರಾವಳಿಯಲ್ಲಿ ರೆಡ್ ಅಲರ್ಟ್​ ಘೋಷಣೆ

ಸಸ್ಪೆಂಡ್ ಆಗೋಗ್ತೀಯ; ಪಿಡಿಓಗೆ ಎಚ್ಚರಿಕೆ:

ಗೋವನಕೊಪ್ಪದಲ್ಲಿ ಮುರಿದ ಸೇತುವೆ ಪರಿಶೀಲನೆ ನಡೆಸಿ ಸ್ಥಳೀಯರ ಸಮಸ್ಯೆ ಆಲಿಸುವಾಗ ಆಲೂರ್ ಎಸ್​ಕೆ ಗ್ರಾಮ ಪಂಚಾಯ್ತಿ ಪಿಡಿಓಗೆ ತರಾಟೆ ತೆಗೆದುಕೊಂಡ ಸಿದ್ದರಾಮಯ್ಯ, 'ಗ್ರಾಮ ಪಂಚಾಯ್ತಿ ಚೇರ್ಮನ್ ಹೇಳಿದ್ರೂ ಕೇಳಬೇಡ. ಜನರ ಸಮಸ್ಯೆಗೆ ಸ್ಪಂದಿಸಿ ಜನರ ಕೆಲಸ ಮಾಡಿಕೊಡು. ಇಲ್ಲದೇ ಹೋದರೆ ಸಸ್ಪೆಂಡ್ ಆಗ್ತೀಯಾ ನೋಡು' ಎಂದು ಪಿಡಿಓಗೆ ಎಚ್ಚರಿಕೆ ನೀಡಿದರು.

ಮಲಪ್ರಭಾ ನದಿಯ ಪ್ರವಾಹದಿಂದ ಬದಾಮಿ ತಾಲೂಕಿನ ಅನೇಕ ರಸ್ತೆಗಳು ಬಂದ್ ಆಗಿವೆ. ನಿನ್ನೆ ಬಾಗಲಕೋಟೆಗೆ ಬರುವಾಗಲೂ ಸಿದ್ದರಾಮಯ್ಯ ಹುಬ್ಬಳ್ಳಿ ಮಾರ್ಗದಲ್ಲಿ ಬದಾಮಿಗೆ ಬಂದಿದ್ದರು. ಇಂದು ಕೂಡ ಪ್ರವಾಹ ಪೀಡಿತ ಗ್ರಾಮಕ್ಕೆ ಕಾರು ಹೋಗದ ಕಾರಣ ಪೊಲೀಸ್ ಜೀಪ್ ಹತ್ತಿ ಸಿದ್ದರಾಮಯ್ಯ ಸಂತ್ರಸ್ತರ ಸಮಸ್ಯೆ ಆಲಿಸಲು ತೆರಳಿದರು. ಹೆಬ್ಬಳ್ಳಿಯಿಂದ ಮುಮರಡ್ಡಿಕೊಪ್ಪಕ್ಕೆ ಸಂಪರ್ಕಿಸೋ ರಸ್ತೆ ಪ್ರವಾಹಕ್ಕೆ ಹಾನಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಕಾರನ್ನು ಬಿಟ್ಟು ಪೊಲೀಸ್ ಜೀಪ್ ಹತ್ತಿದರು.(ವರದಿ: ರಾಚಪ್ಪ ಬನ್ನಿದಿನ್ನಿ)

 

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading