ವಿಪಕ್ಷ ನಾಯಕ ಸ್ಥಾನಗಳನ್ನ ನೀಡಿದ್ದಕ್ಕೆ ಹೈಕಮಾಂಡ್​ಗೆ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್ ಧನ್ಯವಾದ

ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಎಸ್.ಆರ್. ಪಾಟೀಲ್ ಅವರು ಸಿದ್ದರಾಮಯ್ಯರ ಆಪ್ತರೇ ಆಗಿದ್ದಾರೆ. ಎಸ್.ಆರ್. ಪಾಟೀಲ್ ಅವರ ಹೆಸರನ್ನು ಹೈಕಮಾಂಡ್ ಬಳಿ ಸೂಚಿಸಿದ್ದು ಸಿದ್ದರಾಮಯ್ಯ ಅವರೆಯೇ.

news18-kannada
Updated:October 9, 2019, 9:45 PM IST
ವಿಪಕ್ಷ ನಾಯಕ ಸ್ಥಾನಗಳನ್ನ ನೀಡಿದ್ದಕ್ಕೆ ಹೈಕಮಾಂಡ್​ಗೆ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್ ಧನ್ಯವಾದ
ವಿಪಕ್ಷ ನಾಯಕನಾದ ಸಿದ್ದರಾಮಯ್ಯಗೆ ಶಾಸಕಾಂಗ ಸಭೆಯಲ್ಲಿ ಶಾಸಕರಿಂದ ಅಭಿನಂದನೆ
  • Share this:
ಬೆಂಗಳೂರು(ಅ. 09): ವಿಧಾನಸಭೆ ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಎಸ್.ಆರ್. ಪಾಟೀಲ್ ಅವರನ್ನು ಹೈಕಮಾಂಡ್ ಆರಿಸಿದೆ. ತಮ್ಮ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಕ್ಕೆ ಇಬ್ಬರೂ ನಾಯಕರು ಹೈಕಮಾಂಡ್​ಗೆ ಧನ್ಯವಾದ ಹೇಳಿದ್ಧಾರೆ.

ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ್ದಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ನನಗೆ ಐದು ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟಿದ್ದರು. ಈಗ ಮತ್ತೊಮ್ಎ ಕಾಂಗ್ರೆಸ್ ಪಕ್ಷ ಬಲಪಡಿಸುವ ಜವಾಬ್ದಾರಿ ವಹಿಸಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆ, ಪರಿಷತ್ನಲ್ಲಿ ಸಿದ್ದರಾಮಯ್ಯ ಮತ್ತು ಎಸ್.ಆರ್. ಪಾಟೀಲ್ ವಿಪಕ್ಷ ನಾಯಕರು; ಮೂಲ ಕಾಂಗ್ರೆಸ್ಸಿಗರಿಗೆ ಹಿನ್ನಡೆ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದಿಂದ ತನ್ನನ್ನು ತೆರವುಗೊಳಿಸುವಂತೆ ಕೆ.ಸಿ. ವೇಣುಗೋಪಾಲ್ ಅವರಲ್ಲಿ ಮನವಿ ಮಾಡಿದ್ದೆ. ರಾಜ್ಯದಲ್ಲಿ ವಿಪಕ್ಷ ನಾಯಕನಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿಡಬ್ಲ್ಯೂಸಿ ಸದಸ್ಯತ್ವದಿಂದ ಹಿಂಸರಿಯುವ ಉದ್ದೇಶವಿತ್ತು. ಅದರಂತೆ ಕಾರ್ಯಕಾರಿ ಸಮಿತಿ ಸದಸ್ಯತ್ವದಿಂದ ನನ್ನನ್ನು ತೆರವು ಮಾಡಿದ್ದಾರೆ. ಇಷ್ಟು ದಿನ ಸಿಡಬ್ಲ್ಯೂಸಿಯ ಸದಸ್ಯನಾಗಿ ಸೇವೆ ಮಾಡಲು ಅವಕಾಶ ಕೊಟ್ಟ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ಧಾರೆ.

ಇದೇ ವೇಳೆ, ವಿಧಾನಸಭೆಯ ವಿಪಕ್ಷ ನಾಯಕನಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಮಾಧ್ಯಮದವರಿಗೆ ನಿರ್ಬಂಧ ಇನ್ನು ಅಧಿಕೃತ; ಬಿಎಸ್​ವೈ ಮಾತಿಗೂ ಕಿವಿಗೊಡದ ಸಭಾಧ್ಯಕ್ಷ ಕಾಗೇರಿ

ಎಸ್.ಆರ್. ಪಾಟೀಲ್ ಪ್ರತಿಕ್ರಿಯೆ:

ಇನ್ನು, ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕನಾಗಿ ತನ್ನನ್ನು ಆಯ್ಕೆ ಮಾಡಿದ್ದಕ್ಕೆ ಎಸ್.ಆರ್. ಪಾಟೀಲ್ ಅವರು ಸೋನಿಯಾ ಗಾಂಧಿಗೆ ಧನ್ಯವಾದ ಹೇಳಿದ್ಧಾರೆ. ಹೈಕಮಾಂಡ್ ತನಗೆ ಗುರುತರ ಜವಾಬ್ದಾರಿ ನೀಡಿದೆ. ತಾನು ಹಿಂದೆ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ಧೇನೆ. ಸಭಾ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ಈಗ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ಧಾರೆ. ನಾಳೆ ಸದನದಲ್ಲಿ ಪ್ರವಾಹ ಸಂತ್ರಸ್ತರ ವಿಚಾರ ಪ್ರಸ್ತಾಪ ಮಾಡಿ ಹೋರಾಟ ನಡೆಸುತ್ತೇನೆ ಎಂದು ಮಾಜಿ ಸಚಿವರೂ ಆಗಿರುವ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ.

ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಎಸ್.ಆರ್. ಪಾಟೀಲ್ ಅವರು ಸಿದ್ದರಾಮಯ್ಯರ ಆಪ್ತರೇ ಆಗಿದ್ದಾರೆ. ಎಸ್.ಆರ್. ಪಾಟೀಲ್ ಅವರ ಹೆಸರನ್ನು ಹೈಕಮಾಂಡ್ ಬಳಿ ಸೂಚಿಸಿದ್ದು ಸಿದ್ದರಾಮಯ್ಯ ಅವರೆಯೇ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 9, 2019, 9:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading