Siddaramaiah Tweet: ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು; ಸಿ ಟಿ ರವಿ ವಾಗ್ದಾಳಿ

9 ತಿಂಗಳಲ್ಲಿ ಎಲ್ಲರಿಗೂ ಎರಡು ಡೋಸ್ ಹಾಕಲಾಹಿದೆ. ಸಿದ್ದರಾಮಯ್ಯನವರು ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ವಾ?  ಆ ಡೋಸೇಜ್ ಇರದಿದ್ದಿದ್ರೆ, ಸಿದ್ದುಗೆ ಸಿಗದಿದ್ದಿದ್ರೆ ಏನಾಗ್ತಿತ್ತು ಎಂದು ಊಹೆ ಮಾಡಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.

ಸಿ ಟಿ ರವಿ

ಸಿ ಟಿ ರವಿ

  • Share this:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ (BJP National General Secretary CT  Ravi)  ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮೋದಿ  (PM Modi) ಪ್ರವಾಹದ ವೇಳೆ ಬರಲಿಲ್ಲ, ಆಕ್ಸಿಜನ್ ಕೊಡಲಿಲ್ಲ, ಈಗ ಯೋಗಕ್ಕೆ ಬಂದಿದ್ದಾರೆ ಎಂಬ ಸಿದ್ದರಾಮಯ್ಯ (Former CM Siddaramaiah) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ-ಸಿಗೇಕಾಯಿ ಇದ್ದಂತೆ ಎಂದು ವ್ಯಂಗ್ಯ ಮಾಡಿದರು. ಸುಳ್ಳು ಹೇಳುವುದರಲ್ಲಿ ಅವರಂತಹ ನಿಷ್ಟಾವಂತರು ಬೇರೆ ಯಾರೂ ಇಲ್ಲ. ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರಿಗೂ ಸಿಗಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ರು. ತಮ್ಮ ಅಧಿಕಾರವಧಿಯಲ್ಲಿ ಆಕ್ಸಿಜನ್ ಪ್ಲಾಂಟ್ ಹಾಕಿದ್ರಾ ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದರು. ಪಿಎಂ ಕೇರ್ ನಲ್ಲಿತಯೇ ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಪ್ಲಾಂಟ್ ಹಾಕಲಾಗಿದೆ. ತ್ವರಿತ ನಿರ್ಧಾರ ಕೈಗೊಂಡರು, ಇಲ್ಲವಾದರೆ ಸಾವಿನ ಪ್ರಮಾಣ 10 ಪಟ್ಟು ಹೆಚ್ಚಾಗ್ತಿತ್ತು ಎಂದರು.

ಸಿದ್ದರಾಮಯ್ಯ ಕೊರೊನಾ ಲಸಿಕೆ ಹಾಕಿಕೊಂಡಿಲ್ವಾ|

9 ತಿಂಗಳಲ್ಲಿ ಎಲ್ಲರಿಗೂ ಎರಡು ಡೋಸ್ ಹಾಕಲಾಹಿದೆ. ಸಿದ್ದರಾಮಯ್ಯನವರು ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ವಾ?  ಆ ಡೋಸೇಜ್ ಇರದಿದ್ದಿದ್ರೆ, ಸಿದ್ದುಗೆ ಸಿಗದಿದ್ದಿದ್ರೆ ಏನಾಗ್ತಿತ್ತು ಎಂದು ಊಹೆ ಮಾಡಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Yoga Day: ವಿಜಯಪುರದಲ್ಲಿ ಬುರ್ಖಾ ಧರಿಸಿ ಯೋಗಭ್ಯಾಸ; ಬುದ್ಧಿಮಾಂದ್ಯ ಮಕ್ಕಳಿಗೆ ಯೋಗ ಹೇಳಿಕೊಡುವ ಯುವಕ

ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರತಿ ವರ್ಷ ಪ್ರಧಾನಿಗಳು ಯೋಗ ದಿನಾಚರಣೆಗೆ ಒಂದೊಂದು ಸ್ಥಳ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಲ ಮೋದಿಯವರು ಮೈಸೂರು ನಗರ ಆಯ್ಕೆ ಮಾಡಿಕೊಂಡಿರೋದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ಸಿದ್ದರಾಮಯ್ಯ ಅವರದ್ದು ಅಸಡ್ಡೆ ಮಾತು

ಪ್ರಧಾನಿ ಮೋದಿ ವಿರುದ್ಧ ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಸಿದ್ದರಾಮಯ್ಯ ಕೀಳು ಅಭಿರುಚಿಯ ರಾಜಕಾರಣಿ. ಅವರ ಬಗ್ಗೆ ನಾನು ಮಾತಾಡಲು ಹೋಗಲ್ಲ. ಸಿದ್ದರಾಮಯ್ಯ ಎಲ್ಲರ ಬಗ್ಗೆ ಅಸಡ್ಡೆಯಾಗಿ ಮಾತಾಡ್ತಾರೆ ಎಂದು ಕಿಡಿಕಾರಿದರು.

ಡಿಕೆಶಿ ಹೇಳಿಕೆಗೆ ತಿರುಗೇಟು

ವಿದ್ಯಾರ್ಥಿಗಳು ಏನು ಟೆರರಿಸ್ಟ್ ಗಳ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ನಾಯಕ. ಅವರು ಬಂದಾಗ ಎಲ್ಲ ರೀತಿಯ ಭದ್ರತೆ ಕೊಡಬೇಕು ವಿದ್ಯಾರ್ಥಿಗಳು ಟೆರರಿಸ್ಟ್ ಅಂತಾ ಯಾರು ಹೇಳಿದ್ದು..? ಡಿಕೆ ಶಿವಕುಮಾರ್ ಬೇಕಿದ್ರೆ ಅವರ ಬಾಯಲ್ಲಿ ಆ ಮಾತನ್ನು ಹೇಳಬಹುದು. ವಿದ್ಯಾರ್ಥಿಗಳ ಓಡಾಟ ಹಾಗೂ ಪ್ರಧಾನಿಗಳ ಸಂಚಾರಕ್ಕೆ ತೊಂದರೆ ಆಗುತ್ತೆ ಅಂತಾ ರಜೆ ಕೊಟ್ಟಿದ್ದಾರೆ ಹೊರತು ವಿದ್ಯಾರ್ಥಿಗಳು ಟೆರರಿಸ್ಟ್ ಅನ್ನುವ ಕಾರಣಕ್ಕೆ ಅಲ್ಲ ಎಂದು ತಿರುಗೇಟು ನೀಡಿದರು.

ಮೋದಿಯವರ ನೇತೃತ್ವ ಇದ್ದಿದ್ದರಿಂದಲೇ ಕೋವಿಡ್ ಸಂದರ್ಭದಲ್ಲಿ ಈ ದೇಶ ಬದುಕಿ ಬಚಾವಾಗಿದೆ. ಇದನ್ನು ಇಡೀ ವಿಶ್ವ ಕೊಂಡಾಡ್ತಿದೆ. ಸಿದ್ದರಾಮಯ್ಯ ಏನು ಬೇಕಾದರೂ ಹೇಳಬಹುದು. ಸಾಕಷ್ಟು ಹಣ ಕೊಟ್ಟು ಎರಡು ವರ್ಷ ಉಚಿತ ಅನ್ನ, ವ್ಯಾಕ್ಸಿನ್ ಕೊಟ್ಟಿದ್ದಾರೆ.

ಇದು ಕೇವಲ ಟೀಕೆಗಾಗಿ ಟೀಕೆ

ಜಗತ್ತಿನಲ್ಲಿ ಹೆಚ್ಚು ವ್ಯಾಕ್ಸಿನ್ ಕೊಟ್ಟಿರೋದು ದೇಶ ನಮ್ಮದು.  ಇದೆಲ್ಲವನ್ನೂ ಮರೆತು ಸಿದ್ದರಾಮಯ್ಯ ಟೀಕೆಗಾಗಿ ಟೀಕೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಬಗ್ಗೆ ಬಿಟ್ಟು ಉಳಿದವರೆಲ್ಲರ ಬಗ್ಗೆಯೂ ಮಾತಾಡ್ತಾರೆ.

ಇದನ್ನು ಓದಿ:  Controversy: 'ರಾಮ' ರಾಮಾ, ದೇವರ ಬಗ್ಗೆ ಇದೆಂತಾ ಮಾತು! ವಿವಾದದ ಬಳಿಕ ಕಾಂಗ್ರೆಸ್ ನಾಯಕಿ ಹೇಳುವುದೇನು?

2019 ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದನ್ನು ಮಹಾರಾಷ್ಟ್ರ ಜನತೆ ಒಪ್ಪಿ ಮತ ನೀಡಿದ್ದರು. ಚುನಾವಣೆ ಆದ ಮೇಲೆ ಜನಾದೇಶದ ವಿರುದ್ಧ ಅಲ್ಲಿ ಸರ್ಕಾರ ರಚನೆ ಆಯ್ತು. ಈಗ 2019 ರ ಜನಾದೇಶಕ್ಕೆ ಮಾನ್ಯತೆ ಸಿಗುತ್ತಿದೆ ಅಂತ ನಾನು ಅಂದುಕೊಂಡಿದ್ದೇನೆ ಎಂದು ಮಹಾರಾಷ್ಟ್ರ ರಾಜಕಾರಣದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರತಿಕ್ರಿಯಿಸಿದರು .
Published by:Mahmadrafik K
First published: