• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • H Vishwanath: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕರ್ನಾಟಕದ ಬಫೂನ್​ಗಳು; ಮಾಜಿ ಸಚಿವ ಹೆಚ್​. ವಿಶ್ವನಾಥ್ ಕಿಡಿ

H Vishwanath: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕರ್ನಾಟಕದ ಬಫೂನ್​ಗಳು; ಮಾಜಿ ಸಚಿವ ಹೆಚ್​. ವಿಶ್ವನಾಥ್ ಕಿಡಿ

ಹೆಚ್. ವಿಶ್ವನಾಥ್.

ಹೆಚ್. ವಿಶ್ವನಾಥ್.

ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ? ಜೆಡಿಎಸ್​ ಪಕ್ಷದಲ್ಲಿದ್ದ ಅವರನ್ನು ದೇವೇಗೌಡರು ಪಕ್ಷದಿಂದಲೇ ಹೊರ ಹಾಕಿದ್ದರು. ನಂತರ ಅವರು ಕಾಂಗ್ರೆಸ್​ಗೆ ಬಂದರು. ಅಲ್ಲೂ ಅವರೇನು ಹೋರಾಟ ಮಾಡಿಲ್ಲ ಎಂದು ವಿಶ್ವನಾಥ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Share this:

ಬೆಂಗಳೂರು (ಜನವರಿ 06); ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್​.ಡಿ. ಕುಮಾರಸ್ವಾಮಿ ಇಬ್ಬರೂ ಕರ್ನಾಟಕದ ಬಫೂನ್​ಗಳು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನ ಪರಿಷತ್​ ಸದಸ್ಯ ಹೆಚ್​. ವಿಶ್ವನಾಥ್​ ಕಿಡಿಕಾರಿದ್ದಾರೆ. ಗೋ ಹತ್ಯೆ ಪ್ರತಿಬಂಧಕ ಕಾಯ್ದೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್​ ಇತ್ತೀಚೆಗೆ ದೊಡ್ಡ ಮಟ್ಟದ ಗಲಾಟೆಗೆ ಸಾಕ್ಷಿಯಾಗಿತ್ತು. ಈ ವೇಳೆ ಉಪ ಸಭಾಪತಿ ಧರ್ಮೇಗೌಡ ಅವರನ್ನು ಸಭಾಪತಿ ಸ್ಥಾನದಿಂದ ಅಕ್ಷರಶಃ ಎಳೆದು ಹಾಕಲಾಗಿತ್ತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದರು. ವಿಧಾನ ಪರಿಷತ್​ ಗಲಾಟೆಯಿಂದ ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದೇ ರಾಜ್ಯ ರಾಜಕೀಯದಲ್ಲಿ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ಮಾತನಾಡಿದ್ದ ಕುಮಾರಸ್ವಾಮಿ ಧರ್ಮೇಗೌಡ ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿರುವ ಹೆಚ್​. ವಿಶ್ವನಾಥ್, "ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ಕರ್ನಾಟಕದ ಬಫೂನ್​ಗಳಾಗಿದ್ದು, ಇವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ" ಎಂದು ಅಪಹಾಸ್ಯ ಮಾಡಿದ್ದಾರೆ.


ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರ ವಿರುದ್ಧವೂ ಕಿಡಿಕಾರಿದ ಹೆಚ್. ವಿಶ್ವನಾಥ್​, "ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ? ಜೆಡಿಎಸ್​ ಪಕ್ಷದಲ್ಲಿದ್ದ ಅವರನ್ನು ದೇವೇಗೌಡರು ಪಕ್ಷದಿಂದಲೇ ಹೊರ ಹಾಕಿದ್ದರು. ನಂತರ ಅವರು ಕಾಂಗ್ರೆಸ್​ಗೆ ಬಂದರು. ಅಲ್ಲೂ ಅವರೇನು ಹೋರಾಟ ಮಾಡಿಲ್ಲ. ನಾವು ಹೋರಾಟ ಮಾಡಿದ್ವಿ, ಅವರು ಮುಖ್ಯಮಂತ್ರಿ ಆದ್ರು. ಬೇಕಿದ್ದರೆ ನಾನೇ ಹೋರಾಟದ ಕುರಿತು ಸಿದ್ದರಾಮಯ್ಯ ಅವರಿಗೆ ಪಾಠ ಮಾಡಲು ಸಿದ್ದನಿದ್ದೇನೆ.


ಇದನ್ನೂ ಓದಿ: Mamata Banerjee: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮತ್ತೋರ್ವ ಟಿಎಂಸಿ ನಾಯಕ; ಸಿಎಂ ಮಮತಾ ಬ್ಯಾನರ್ಜಿಗೆ ಹಿನ್ನಡೆ


ಇನ್ನೂ ಕುಮಾರಸ್ವಾಮಿ ಧರ್ಮೇಗೌಡ ಅವರ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಅಸಲಿಗೆ ಈ ಇಬ್ಬರೂ ನಾಯಕರು ಏಕೆ ಮಾತನಾಡುತ್ತಾರೆ?. ಜನರೇ ಇವರನ್ನು ಬಫೂನ್​ ತರ ನೋಡುತ್ತಿರುವಾಗ ಇವರು ಯಾರಿಗಾಗಿ ಮಾತನಾಡುತ್ತಿದ್ದಾರೆ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ವಿಶ್ವನಾಥ್, "ಸಚಿವ ಸಂಪುಟದ ಬಗ್ಗೆ ಎಲ್ಲರೂ ಮಾತನಾಡುವುದು ಸರಿಯಲ್ಲ. ಮುಖ್ಯ ಮಂತ್ರಿಯಾಗಲಿ ಬೇರೆ ಯಾರೇ ಆಗಲಿ ಅದರ ಬಗ್ಗೆ ದಿನವಿಡೀ ಮಾತನಾಡುವುದು ಸರಿಯಲ್ಲ. ಹೈ ಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತೋ, ಅವಾಗ ಸಂಪುಟ ವಿಸ್ತರಣೆ ಆಗುತ್ತೆ. ಪ್ರತಿ ದಿನ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಬದಲು ಅಭಿವೃದ್ಧಿಯ ಕುರಿತು ಮಾತನಾಡುವುದು ಉತ್ತಮ. ಹಿರಿಯನಾಗಿ ನನ್ನ ಅನುಭವದ ಆಧಾರದ ಮೇಲೆ‌ ಈ ಮಾತು ಹೇಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

First published: