ಸಿದ್ದರಾಮಯ್ಯ ಅವರನ್ನೂ ತನಿಖೆಗೆ ಒಳಪಡಿಸಲಿ: ಶ್ರೀರಾಮುಲು ಆಗ್ರಹ

ಆಡಿಯೋ ಪ್ರಕರಣದ ಮೂಲಕ ಸ್ಪೀಕರ್ ಅವರ ಹೆಸರು ಹೊರತೆಗೆದಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೆಯೇ. ಅವರನ್ನು ಹಾಗೂ ಸಿದ್ದರಾಮಯ್ಯ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಶ್ರೀರಾಮುಲು ಆಗ್ರಹಿಸಿದರು.

Vijayasarthy SN | news18
Updated:February 12, 2019, 3:40 PM IST
ಸಿದ್ದರಾಮಯ್ಯ ಅವರನ್ನೂ ತನಿಖೆಗೆ ಒಳಪಡಿಸಲಿ: ಶ್ರೀರಾಮುಲು ಆಗ್ರಹ
ಶ್ರೀರಾಮುಲು
Vijayasarthy SN | news18
Updated: February 12, 2019, 3:40 PM IST
ಬೆಂಗಳೂರು(ಫೆ. 12): ಆಡಿಯೋ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ನಾಯಕ ಬಿ. ಶ್ರೀರಾಮುಲು ಇಂದು ವಿಧಾನಸಭೆಯಲ್ಲಿ ಆಗ್ರಹಿಸಿದರು. ಆಡಿಯೋ ಪ್ರಕರಣದ ತನಿಖೆ ವಿಚಾರದ ಬಗ್ಗೆ ಇಂದು ವಿಧಾನಸಭೆ ಅಧಿವೇಶನದಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಶ್ರೀರಾಮುಲು, ಈ ಪ್ರಕರಣದ ತನಿಖೆಯ ವ್ಯಾಪ್ತಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರನ್ನೂ ಒಳಗೊಳ್ಳಬೇಕು ಎಂದು ಆಗ್ರಹಿಸಿದರು.

ಒಬ್ಬ ಪ್ರಾಮಾಣಿಕ ರಾಜಕಾರಣಿ ಹಾಗೂ ನಿಷ್ಪಕ್ಷಪಾತ ಸ್ಪೀಕರ್ ಆಗಿರುವ ತಮ್ಮ ಹೆಸರನ್ನು ಮುಖ್ಯಮಂತ್ರಿಗಳು ಹೊರತೆಗೆದಿದ್ದಾರೆ. ತಮ್ಮ ಘನತೆಗೆ ಕುಂದು ಬರುವಂತೆ ನಡೆದುಕೊಂಡಿದ್ದಾರೆ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಬಳಿ ಕುಮಾರಸ್ವಾಮಿ ವಿರುದ್ಧ ಶ್ರೀರಾಮುಲು ಕಿಡಿ ಕಾರಿದರು.

ಇದನ್ನೂ ಓದಿ: ಶಾಸಕರ ಅಪಹರಣ ಮಾಡಿದ್ದೀರಾ? ಅತೃಪ್ತರ ಮುಖಂಡ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ನೋಟೀಸ್

ಬಿಜೆಪಿಯ ಬೋಪಯ್ಯ ಸ್ಪೀಕರ್ ಆಗಿದ್ದ ಅವಧಿಯಲ್ಲಿ ನಡೆದ ಘಟನೆಯನ್ನೂ ತನಿಖೆಗೆಗೆ ಒಳಪಡಿಸಬೇಕು. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನೂ ಈ ತನಿಖೆಯಲ್ಲಿ ಸೇರಿಸಬೇಕು ಎಂದು ಬಿ. ಶ್ರೀರಾಮುಲು ಒತ್ತಾಯಿಸಿದರು.

ಇದೇ ವೇಳೆ, ಎಸ್​ಐಟಿಯು ನೇರ ಮುಖ್ಯಮಂತ್ರಿಗಳ ಅಡಿಯಲ್ಲೇ ಬರುತ್ತದೆ. ಅದರ ಬದಲು ಸದನ ಸಮಿತಿ ರಚಿಸಿ ತನಿಖೆ ಮಾಡಿಸಬೇಕು ಎಂದೂ ಶ್ರಿರಾಮುಲು ಆಗ್ರಹಿಸಿದರು. ಜೊತೆಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದೂ ಶ್ರೀರಾಮುಲು ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರನ್ನು ಶ್ರೀರಾಮುಲು ಪ್ರಸ್ತಾಪಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲ ನಡೆಸಿದರು. ಜಮೀರ್ ಅಹ್ಮದ್ ಖಾನ್, ವೆಂಕಟರಮಣಪ್ಪ, ನಾಡಗೌಡ ಮೊದಲಾದವರು ಏರು ಧ್ವನಿಯಲ್ಲಿ ಶ್ರೀರಾಮುಲು ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆಡಿಯೋ ಪ್ರಕರಣ: ಎಸ್​ಐಟಿ ತನಿಖೆಗೆ ಒಪ್ಪಿಸಲೇಬೇಕು ಇದೇ ನನ್ನ ಇಂಗಿತ; ರಮೇಶ್​ ಕುಮಾರ್​
Loading...

ಈ ವೇಳೆ, ಗದ್ದಲ ನಿರತರಿಗೆ ಸ್ಪೀಕರ್ ರಮೇಶ್ ಕುಮಾರ್ ಬುದ್ಧಿ ಹೇಳುವ ಪ್ರಯತ್ನವನ್ನೂ ಮಾಡಿದರು. ಜಮೀರ್ ಅವರೇ ನೀವೆಲ್ಲಾ ಮಂತ್ರಿಗಳಾದವರು… ನೀವೇ ಹೀಗೆ ತಾಳ್ಮೆಗೆಟ್ಟರೆ ಹೇಗೆ? ನೀವು ಸ್ವಲ್ಪ ಮಸಾಲೆ ಕಡಿಮೆ ತಿನ್ನಬೇಕು ಎಂದು ಸ್ಪೀಕರ್ ಹಾಸ್ಯ ಮಾಡಿ, ವಾತಾವರಣ ತಿಳಿ ಮಾಡುವ ಪ್ರಯತ್ನ ಮಾಡಿದರು.

ಇನ್ನು, ಬಿಜೆಪಿಯ ಸದಸ್ಯರೆಲ್ಲರೂ ಎಸ್​ಐಟಿಯಿಂದ ತನಿಖೆ ನಡೆಯಬಾರದು. ಸದನದ ಸಮಿತಿಯಿಂದ ತನಿಖೆ ಅಥವಾ ನ್ಯಾಯಾಂಗ ತನಿಖೆ ಆಗಲಿ ಒಕ್ಕೊರಲಿನಿಂದ ಮನವಿ ಮಾಡಿದರು. ಆದರೆ, ಸ್ಪೀಕರ್ ಅವರು ಬಿಜೆಪಿಯ ಒತ್ತಾಯಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಒಪ್ಪಿಕೊಂಡಿಲ್ಲ. ಎಸ್​ಐಟಿ ತನಿಖೆಯಾದರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಸ್ಪೀಕರ್ ಬಂದಿದ್ದಾರೆ.
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...