• Home
  • »
  • News
  • »
  • state
  • »
  • Karnataka Elections: ಸಿದ್ಧರಾಮಯ್ಯ ಚುನಾವಣೆಗೆ ಸ್ಪರ್ಧಿಸೋದು ಬೇಡ: ಪರಮಾಪ್ತನಿಂದಲೇ ಹೊಸ ಬಾಂಬ್!

Karnataka Elections: ಸಿದ್ಧರಾಮಯ್ಯ ಚುನಾವಣೆಗೆ ಸ್ಪರ್ಧಿಸೋದು ಬೇಡ: ಪರಮಾಪ್ತನಿಂದಲೇ ಹೊಸ ಬಾಂಬ್!

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ಅಪ್ಪಟ ಅನುಯಾಯಿ ಎನಿಸಿಕೊಂಡ ಮಾಜಿ ಸಚಿವ ಸಂತೋಷ್ ಲಾಡ್ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಕನಸು ಕಾಣ್ತಿರೋ ಸಿದ್ಧರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಹುಬ್ಬಳ್ಳಿ(ನ.18): ವಿಧಾನಸಭೆ ಚುನಾವಣೆ(Karnataka Elections) ಹತ್ತಿರ ಬರುತ್ತಿರುವಂತೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳಲಾರಂಭಿಸಿವೆ. ಅದರಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್​ಗಾಗಿ ಈಗಾಗಲೇ ಫೈಟ್ ಆರಂಭಗೊಂಡಿದೆ. ಇದರ ನಡುವೆ ನಾನು ಸಿಎಂ ಆಗಬೇಕೆಂದರೆ ಕಾಂಗ್ರೆಸ್ (Congress) ಪಕ್ಷವನ್ನು ಗೆಲ್ಲಿಸುವಂತೆ ಸಿದ್ಧರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ. ಆದರೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಅವರ ಅಪ್ಪಟ ಅನುಯಾಯಿ ಎನಿಸಿಕೊಂಡ ಮಾಜಿ ಸಚಿವ ಸಂತೋಷ್ ಲಾಡ್ (Minister Santosh Lad) ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಕನಸು ಕಾಣ್ತಿರೋ ಸಿದ್ಧರಾಮಯ್ಯ (Siddaramaiah) ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ.


ಹೌದು, ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಬೇಡ‌‌ ಅಂತ ಹೇಳಿರೋದು ಯಾರೋ ಅವರ ರಾಜಕೀಯ ವೈರಿ ಅಲ್ಲ. ಬದಲಿಗೆ ಸಿದ್ಧರಾಮಯ್ಯ ಆಪ್ತ ಅಂತಲೇ ಗುರುತಿಸಿಕೊಂಡಿರೋ ಮಾಜಿ ಸಚಿವ ಸಂತೋಷ ಲಾಡ್. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಯಸ್ಸು ಇತ್ಯಾದಿ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ. ಸಿದ್ದರಾಮಯ್ಯ ಪಕ್ಷ ಬಲಪಡಿಸುವ ಕೆಲಸ ಮಾಡಲಿ ಎಂದಿದ್ದಾರೆ.


ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಮಾಜಿ ಸಿಎಂ ಸ್ಪರ್ಧೆ ಫಿಕ್ಸ್​! ಮತ್ತೆ ನಾಮಿನೇಷನ್​ ಮಾಡಲು ಬರ್ತಾರಂತೆ ಸಿದ್ದರಾಮಯ್ಯ


ಅವರು ಒಂದು ಕ್ಷೇತ್ರದಲ್ಲಿ ಸ್ಪರ್ದಿಸಿ, ಅಲ್ಲಿಗೆ ಸೀಮಿತ ಆಗೋದು ಬೇಡ


ಅವರು ಒಂದು ಕ್ಷೇತ್ರದಲ್ಲಿ ಸ್ಪರ್ದಿಸಿ, ಅಲ್ಲಿಗೆ ಸೀಮಿತ ಆಗೋದು ಬೇಡ. ಸಿದ್ಧರಾಮಯ್ಯ ಕೋಲಾರ ಮತ್ತಿತರ ಕಡೆ ಸ್ಪರ್ಧಿಸ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಸಿದ್ಧರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೇ ಗೆಲ್ತಾರೆ. ಆದರೆ ಚುನಾವಣೆಗೆ ಸ್ಪರ್ದಿಸಿದಾಗ ಆ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತೆ. ಇದರಿಂದಾಗಿ ರಾಜ್ಯದ ವಿವಿಧೆಡೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅವರ ಪ್ರಚಾರದ ಕೊರತೆ ಆಗುತ್ತದೆ. ಬೇಸಿಗೆ ಕಾಲದಲ್ಲಿ ಚುನಾವಣೆ ನಡೆಯುತ್ತಿರುವುದರಿಂದಾಗಿ ಆರೋಗ್ಯ ಇತ್ಯಾದಿಗಳ ಮೇಲೂ ಪರಿಣಾಮ ಬೀರುತ್ತದೆ.
ಇಡೀ ರಾಜ್ಯ ಸುತ್ತಬೇಕಿರುವುದುರಿಂದ ಅವರು ಸ್ಪರ್ಧಿಸದೇ ಇರೋದು ಒಳ್ಳೆಯದು. ಅದರಿಂದ ಕಾಂಗ್ರೆಸ್‌ ಪಕ್ಷಕ್ಕೇ ಲಾಭವಾಗುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.


ಸಂತೋಷ್ ಲಾಡ್​


ಡಿಕೆಶಿ ಸ್ಪರ್ಧೆಯೂ ಬೇಡ


ಡಿ.ಕೆ. ಶಿವಕುಮಾರ್ ಸಹ ಒಂದು ಕ್ಷೇತ್ರದಿಂದ ಸ್ಪರ್ದೀಸೋದು ಬೇಡ. ಅವರು ಸಹ ರಾಜ್ಯ ಸುತ್ತಾಟ ಮಾಡಿ ಪ್ರಚಾರದಲ್ಲಿ ತೊಡಗಿಸಿಕೊಂಡ್ರೆ ಒಳ್ಳೆಯದು. ಇಬ್ಬರು ನಾಯಕರು ಚುನಾವಣೆ ಸ್ಪರ್ದಿಸದೇ ಇದ್ದರೆ ಒಳ್ಳೆಯದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ಪರ್ಧಿಸದೇ ಅಧಿಕಾರ ನಡೆಸಬಹುದು ಎಂದರು.


ಕಲಘಟಗಿ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ವಿಚಾರಕ್ಕೆ ಪ್ರತಿಕ್ರಿಯೆ


ಕಲಘಟಗಿ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ವಿಚಾರಕ್ಕೆ ಪ್ರತಿಕ್ರಿಯಸಿದ ಲಾಡ್, ನಾಗರಾಜ ಛಬ್ಬಿ ಮತ್ತು ನಾನು ಒಳ್ಳೆಯ ಸ್ನೇಹಿತರು. ಕ್ಷೇತ್ರದಲ್ಲಿ ಅವರು ಕುಕ್ಕರ್ ಹಂಚುತ್ತಿದ್ದಾರೆ ಅನ್ನೋ ವಿಷಯ ಗೊತ್ತಾಗಿದೆ. ಅವರ ಕುಕ್ಕರ್ ಗಾಗಿ ನಾನೂ ಕಾಯುತ್ತಿದ್ದೇನೆ. ನನಗೆ ಟಿಕೇಟ್ ಕೊಡ್ತಾರೆ ಅಂತ ಅವರು ನೀಡಿರೋ ಹೇಳಿಕೆಯಿಂದ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಯಾಗಿರೋದು ಸತ್ಯ. ಟಿಕೆಟ್ ಯಾರಿಗೆ ಅಂತ ಹೈಕಮಾಂಡ್ ನಿರ್ಧರಿಸುತ್ತದೆ. ಕಲಘಟಗಿಯಲ್ಲಿ 2008 ಕ್ಕಿಂತ ಮುಂಚಿತವಾಗಿ ಒಮ್ಮೆಯೂ ಕಾಂಗ್ರೆಸ್ ಗೆದ್ದಿರಲಿಲ್ಲ ಎಂದಿದ್ದಾರೆ.


ಇದನ್ನೂ ಓದಿ:  Bengaluru: ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದ ಮಗು; ಶೋಧಕಾರ್ಯ ಮಾಡಿದ್ರು ಪತ್ತೆಯಾಗದ ಕಂದ


ಅಲ್ಲದೇ ನಾನು ಕ್ಷೇತ್ರಕ್ಕೆ ಬಂದ ಮೇಲೆ ಕಾಂಗ್ರೆಸ್ ಮೊದಲ ಗೆಲುವು ಸಾಧಿಸಿತು. ಆ ಕ್ಷೇತ್ರದಿಂದ ನಾನು ಎರಡು ಬಾರಿ ಗೆದ್ದಿದ್ದೇನೆ. ಮುಂದೆಯೂ ಸ್ಪರ್ಧಿಸಬೇಕೆಂಬ ಇಚ್ಚೆ ಹೊಂದಿದ್ದೇನೆ. ಆದರೆ ಕಾಂಗ್ರೆಸ್ ಟಿಕೇಟ್ ಸಿಗದಿದ್ದಲ್ಲಿ ನಾನು ಬಿಜೆಪಿ ಸೇರಲ್ಲ. ಬಿಜೆಪಿ ಸೇರುತ್ತಾರೆ ಅನ್ನೋದು ಊಹಾಪೋಹ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರ್ತೇನೆ. ಕಾಂಗ್ರೆಸ್ ನಿಂದಲೇ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇಬೆ ಎಂದು ನ್ಯೂಸ್  18 ಕನ್ನಡಕ್ಕೆ ಸಂತೋಷ್ ಲಾಡ್ ತಿಳಿಸಿದ್ದಾರೆ.

Published by:Precilla Olivia Dias
First published: