HOME » NEWS » State » SIDDARAMAIAH AND DK SHIVAKUMAR DEFENDS THE SELECTION OF 2 CANDIDATES FOR MLC ELECTIONS SNVS

ಕಾಂಗ್ರೆಸ್​ನಿಂದ ನಸೀರ್, ಹರಿಪ್ರಸಾದ್ ಆಯ್ಕೆಯನ್ನ ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಡಿಕೆಶಿ

ಮೇಲ್ಮನೆಗಳಿಗೆ ಹಿರಿಯರು ಮತ್ತು ಅನುಭವಿಗಳೇ ಬೇಕಾಗಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಸರಿಯಾಗಿಯೇ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

news18-kannada
Updated:June 18, 2020, 9:14 PM IST
ಕಾಂಗ್ರೆಸ್​ನಿಂದ ನಸೀರ್, ಹರಿಪ್ರಸಾದ್ ಆಯ್ಕೆಯನ್ನ ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಡಿಕೆಶಿ
ಸಿದ್ದರಾಮಯ್ಯ
  • Share this:
ಬೆಂಗಳೂರು(ಜೂನ್ 18): ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುವ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯ ನಂತರ ಅಭ್ಯರ್ಥಿಗಳಾದ ಬಿಕೆ ಹರಿಪ್ರಸಾದ್ ಹಾಗೂ ನಜೀರ್ ಅಹಮದ್ ಗೆ ಬಿ ಫಾರಂ ವಿತರಿಸಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಪಕ್ಷದ ಹೈಕಮಾಂಡ್ ಆಯ್ಕೆಯನ್ನು ಸಮರ್ಥಿಸಿಕೊಂಡರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೇಲ್ಮನೆ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ್ದೇವೆ. ಸುಮಾರು 270 ಅರ್ಜಿಗಳು ಬಂದಿದ್ದವು. ಎಲ್ಲವನ್ನೂ ಹೈಕಮಾಂಡಿಗೆ ಕಳುಹಿಸಿದ್ದೆವು. ಅಂತಿಮವಾಗಿ ಹೈಕಮಾಂಡ್ ಇಬ್ಬರನ್ನು ಆಯ್ಕೆ ಮಾಡಿದೆ. ನಜೀರ್ ಅಹ್ಮದ್ ಹಾಗೂ ಬಿಕೆ ಹರಿಪ್ರಸಾದ್ ಒಮ್ಮತದ ಹಾಗೂ ಸಮರ್ಥ ಅಭ್ಯರ್ಥಿಗಳ ಆಗಿದ್ದಾರೆ ಎಂದು ವಿವರಿಸಿದರು.

ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮಾತನಾಡಿ, ವಿಧಾನಪರಿಷತ್ ಸ್ಥಾನಕ್ಕೆ ಇನ್ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ನೀವು ಚರ್ಚಿಸಿ ಅಂತಿಮವಾಗಿ ಮೂರು ನಾಲ್ಕು ಸಮುದಾಯವನ್ನು ಪರಿಗಣಿಸಿದಿರಿ. ಪಕ್ಷದ ಹೈಕಮಾಂಡ್ ಒಬ್ಬ ಹಿರಿಯ ನಾಯಕರಿಗೆ ಟಿಕೆಟ್ ನೀಡಿದೆ. ನಿಮ್ಮ ಸಲಹೆಯನ್ನು ಪರಿಗಣಿಸಿ ಹೈಕಮಾಂಡ್ ಆಯ್ಕೆ ಮಾಡಿದೆ, ರಾಜಕಾರಣದಲ್ಲಿ ಬಿಕೆ ಹರಿಪ್ರಸಾದ್ ನನಗಿಂತ ಹಿರಿಯರು. ಉತ್ತಮ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ವಿಧಾನಸಭೆ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಯುವ ಮುಖಗಳಿಗೆ ಅವಕಾಶ ನೀಡುತ್ತೇವೆ. ಮೇಲ್ಮನೆಗಳಿಗೆ ಹಿರಿಯ ಹಾಗೂ ಅನುಭವಿಗಳೇ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಿಜೆಪಿಗೆ ನಾನು ಹೈ ಕಮಾಂಡ್ ಅಲ್ಲ, ಹೆಚ್​. ವಿಶ್ವನಾಥ್​ಗೆ ಬುದ್ಧಿಯಿಲ್ಲ; ಸಿದ್ದರಾಮಯ್ಯ ತಿರುಗೇಟು

ಆದ್ರೆ ಇದಕ್ಕೂ ಮೊದಲು ರಾಜ್ಯದ ನಾಯಕರು ಬೇರೆ ಬೇರೆ ಹೆಸರುಗಳ ಪಟ್ಟಿಯನ್ನು ಹೈ ಕಮಾಂಡ್​ಗೆ ಕಳುಹಿಸಿದ್ದರು. ಇಂದು ನಾಮ ಪತ್ರ ಸಲ್ಲಿಕೆ ಮಾಡಿರುವ ಇಬ್ಬರ ಪೈಕಿ ಹರಿಪ್ರಸಾದ್ ಅವರು ಹೈ ಕಮಾಂಡ್ ಮುಖಾಂತರ ಟಿಕೆಟ್ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಎಂಆರ್ ಸೀತಾರಾಮ್, ನೀವೆದಿತ್ತಾ ಆಳ್ವ ಸಹ ಪಯ್ರತ್ನ ಪಟ್ಟಿದ್ದರು. ಆದರೆ, ಅಂತಿಮವಾಗಿ ನಸೀರ್ ಅಹಮದ್ ಮತ್ತು ಹರಿಪ್ರಸಾದ್ ಅವರಿಗೆ ಅವಕಾಶ ಸಿಕ್ಕಿದೆ.
First published: June 18, 2020, 9:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories