Karnataka Politics: ಭ್ರಷ್ಟಾಚಾರದಿಂದ ಸರ್ಕಾರ ಗಬ್ಬೆದ್ದು ನಾರುತ್ತಿದೆ ಎಂದ ಸಿದ್ದು, ಬೊಮ್ಮಾಯಿಗೆ ಧಮ್ ಬಂದಿದೆ ಅಂತ ಡಿಕೆಶಿ ಟಾಂಗ್!

ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಬಿಜೆಪಿ ನಾಯಕರಿಗೆ 40 ಪರ್ಸೆಂಟ್ ಹಣ ಕೊಡಬೇಕು. ಅಧಿಕಾರಿಗಳ ವರ್ಗಾವಣೆಗೂ ದುಡ್ಡು ಕೊಡಬೇಕಂತೆ. ಭ್ರಷ್ಟಾಚಾರದಿಂದ ಬಿಜೆಪಿ ಸರ್ಕಾರ ಗಬ್ಬೆದ್ದು ಹೋಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​

  • Share this:
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah), ಇದು ಭ್ರಷ್ಟಾಚಾರದಿಂದ (Corruption) ಗಬ್ಬೆದ್ದು ಹೋಗಿರೋ ಸರ್ಕಾರ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಸರ್ಕಾರ, 40 ಪರ್ಸೆಂಟ್​ ಕಮಿಷನ್ (40 Percent Commission) ಸರ್ಕಾರ ಎಂಬ ಅಭಿಯಾನವನ್ನು ಕಾಂಗ್ರೆಸ್ ಮಾಡ್ತಿದೆ. ಮುಖ್ಯಮಂತ್ರಿ ಹಾಗೂ ಅವರ ಮಂತ್ರಿ ಮಂಡಲ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಜನರ ರಕ್ತ ಹೀರುವ ಕೆಲಸ ಕೂಡ ನಡೀತ್ತಿದೆ ಎಂದು ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಿಡಿಕಾರಿದ್ದಾರೆ.

ಇವ್ರ ಕಮಿಷನ್​ ಕಾಟಕ್ಕೆ ಸಂತೋಷ್​ ಪ್ರಾಣಬಿಟ್ರು

ಬಿಜೆಪಿ ಕಾರ್ಯಕರ್ತ ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ, ಸಂತೋಷ್ ಎಂಬ ವ್ಯಕ್ತಿ ಬಿಜೆಪಿ ಕಮಿಷನ್ ಕಾಟಕ್ಕೆಗೆ ಬಲಿಯಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಈ ಬಗ್ಗೆ ನಾವು ಅಸೆಂಬ್ಲಿ ಯಲ್ಲು ಕೂಡ ಧ್ವನಿ ಎತ್ತಿದ್ವಿ. ಅವ್ರ ಸಾವಿಗೆ ಈಶ್ವರಪ್ಪನೇ ಕಾರಣ, ಹೀಗಾಗಿ ಅವ್ರು ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡಿದ್ವಿ. ಆ ಮೇಲೆ ಅವ್ರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ರು, ಆದರೆ ಅವ್ರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ದಾಖಲು ಮಾಡಿಲ್ಲ. ಕೊನೆಗೆ ಸರ್ಕಾರ ತನಿಖೆ ಮಾಡಿಸ್ತೀನಿ, ಅಂತ ಬಿ ರಿಪೋರ್ಟ್ ಕೊಟ್ಟಿದ್ದಾರೆ.

ಸಂತೋಷ್​ ಪತ್ನಿಯಿಂದ ರಾಜ್ಯಪಾಲರಿಗೆ ಪತ್ರ

ಸರ್ಕಾರಕ್ಕೆ ಸಂತೋಷ್​ ಸೂಸೈಡ್​ ಕೇಸ್​ ಪೊಲೀಸರಿಂದ ಬೇಡ, ನಿವೃತ್ತ ನ್ಯಾಯಮೂರ್ತಿಗಳಿಂದ ಮಾಡಿಸಿ ಎಂದಿದ್ವಿ. ಆದರೆ ಅವರು ತನಿಖೆ ಮಾಡಿಸಿಲ್. ಇದೀಗ ಸಂತೋಷ್ ಪತ್ನಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಬಿ ರಿಪೋರ್ಟ್ ವಿರುದ್ಧ ಚಾಲೆಂಜ್ ಮಾಡಿ ಕೋರ್ಟ್​ ಹೋಗುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕೆಂಪಣ್ಣ ಕೂಡ ಪ್ರಧಾನಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಭ್ರಷ್ಟಾಚಾರದಿಂದ ಸರ್ಕಾರ ಗಬ್ಬೆದ್ದು ಹೋಗಿದೆ

ಇನ್ನು ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಬಿಜೆಪಿ ನಾಯಕರಿಗೆ 40 ಪರ್ಸೆಂಟ್ ಹಣ ಕೊಡಬೇಕು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅಧಿಕಾರಿಗಳ ವರ್ಗಾವಣೆಗೂ ದುಡ್ಡು ಕೊಡಬೇಕಂತೆ. ಭ್ರಷ್ಟಾಚಾರದಿಂದ ಸರ್ಕಾರ ಗಬ್ಬೆದ್ದು ಹೋಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು.

BJP tweet against former CM Siddaramaiah
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್


ಸಿಎಂ ವಿರುದ್ಧ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ

ಫಸ್ಟ್​ ರ್ಯಾಂಕ್​​ ಪಡೆದವರೇ PSI ಕೇಸ್​ನಲ್ಲಿ ಅರೆಸ್ಟ್​ ಆಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು. PSI ನೇಮಕಾತಿ ಹಗರಣದಲ್ಲಿ ಅಧಿಕಾರಿಯನ್ನೇ ಬಂಧಿಸಿದ್ದೀರಿ. ಕನಕಗಿರಿ ಶಾಸಕ ಸರ್ಕಾರಕ್ಕೆ 15 ಲಕ್ಷ ಕೊಟ್ಟಿದ್ದೀನಿ ಎಂದಿದ್ದಾರೆ. ಪ್ರಿಯಾಂಕ್ ಪ್ರಶ್ನಿಸಿದರೆ ನೋಟಿಸ್ ಕೊಟ್ಟು ಹೆದರಿಸುತ್ತೀರಾ ಎಂದು ಪ್ರಶ್ನಿಸಿದರು. 2,500 ಕೋಟಿ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದರು. ಯತ್ನಾಳ್​ಗೆ ಯಾಕೆ ನೋಟಿಸ್​ ಕೊಟ್ಟು ವಿಚಾರಣೆಗೆ ಕರೆಯಲಿಲ್ಲ ಎಂದರು. ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ವಿರುದ್ಧ ಆರೋಪವಿತ್ತು. ಕೇಸ್ ತನಿಖೆಗೂ ಮುನ್ನ ಅವರು ತಪ್ಪು ಮಾಡಿಲ್ಲ ಎಂದು ಹೇಳ್ತಿದ್ದೀರಿ.

ಈಗ ಬೊಮ್ಮಾಯಿಗೆ ಧಮ್​ ಬಂದು ಬಿಟ್ಟಿದೆ

ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ಕಳಂಕಿತರನ್ನು ಕಾಪಾಡುತ್ತಿದ್ದೀರಿ. ಈಗ ನಮ್ಮ ಮೇಲೂ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಏನೋ ಧಮ್ ಬಗ್ಗೆ ಮಾತನಾಡುತ್ತಿದ್ದರು. 3 ವರ್ಷದಿಂದ ತನಿಖೆ ಮಾಡಿಸದೇ ಏನು ಮಾಡುತ್ತಿದ್ದರು. ಈಗ ಏನೋ ಸಿಎಂ ಬೊಮ್ಮಾಯಿಗೆ ಧಮ್​ ಬಂದು ಬಿಟ್ಟಿದೆ ಎಂದು ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: Illegal Building: ಎಷ್ಟೇ ದೊಡ್ಡವರಾದ್ರೂ ಬಿಡಲ್ಲ; ನೋಯ್ಡಾ ಮಾದರಿಯಲ್ಲಿ ಸ್ಫೋಟಕ ಇಟ್ಟು ನೆಲಸಮ ಮಾಡ್ತೀವಿ- ಆರ್ ಅಶೋಕ್

ಅಸೆಂಬ್ಲಿಯಲ್ಲಿ ಭ್ರಷ್ಟಾಚಾರದ ವ್ಯಾಪಕವಾಗಿ ಚರ್ಚೆ ಮಾಡಬೇಕು. ಈ ಜವಾಬ್ದಾರಿಯನ್ನು ಶಾಸಕರಿಗೆ ಕೊಟ್ಟಿದ್ದೇವೆ.  ಬ್ರಹ್ಮಾಂಡ ಭ್ರಷ್ಟಾಚಾರದ ಹೊರಗೆ ತೆಗೆಯಲು ಕಾಂಗ್ರೆಸ್ ಸಜ್ಜಾಗಿದೆ. ಅದಕ್ಕಾಗಿ ಇಂದು ನಾವು ಅಭಿಯಾನ ಶುರು ಮಾಡಿದ್ದೇವೆ ಎಂದು ಡಿಕೆಶಿ ಹೇಳಿದ್ರು.
Published by:ಪಾವನ ಎಚ್ ಎಸ್
First published: