Siddaramaiah: ಸಿದ್ದರಾಮಯ್ಯ ಕಾರಿನ ಮೇಲೆ ಕಲ್ಲು ಎಸೆಯಲಾಗಿತ್ತಾ? ಮಾಂಸ ವಿವಾದದ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು?

ಮೊಟ್ಟೆ ಎಸೆದ ವಿಚಾರ ಹಸಿಯಾಗಿರುವಾಗಲೇ ಮತ್ತೊಂದು ಆಘಾತಕಾರಿ ವಿಚಾರವನ್ನು ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇಂದು ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂದು ನನ್ನ ಕಾರಿನ ಮೇಲೆ ಕಲ್ಲು (Stone) ಎಸೆಯುವ ಪ್ರಯತ್ನ ಕೂಡ ನಡೆದಿತ್ತು ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬೆಂಗಳೂರು: ಇದೇ ತಿಂಗಳ 18ರಂದು ಮಾಜಿ ಸಿಎಂ (Former CM) ಸಿದ್ದರಾಮಯ್ಯ (Siddaramaiah) ಪ್ರವಾಹ (Flood) ಪರಿಸ್ಥಿತಿ ವೀಕ್ಷಿಸಲು ಕೊಡಗಿಗೆ (Kodagu) ತೆರಳಿದ್ದರು. ಈ ವೇಳೆ ಮಡಿಕೇರಿಯಲ್ಲಿ (Madikeri) ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈ ಘಟನೆ ರಾಜ್ಯ ರಾಜಕೀಯದಲ್ಲಿ (State Politics) ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಮೊಟ್ಟೆ ಹೊಡೆದ ಆರೋಪಿ ಸಂಪತ್ (Sampat) ನಮ್ಮ ಪಕ್ಷದ ಕಾರ್ಯಕರ್ತನಲ್ಲ (Party Worker), ನಿಮ್ಮ ಪಕ್ಷದ ಕಾರ್ಯಕರ್ತ ಅಂತ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರು (BJP Leaders) ವಾಕ್ಸಮರ ನಡೆಸಿದ್ದಾರೆ. ಇದೀಗ ಮತ್ತೊಂದು ಆಘಾತಕಾರಿ ವಿಚಾರವನ್ನು ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇಂದು ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ (Press Meet) ನಡೆಸಿದ ಅವರು, ಅಂದು ನನ್ನ ಕಾರಿನ ಮೇಲೆ ಕಲ್ಲು (Stone) ಎಸೆಯುವ ಪ್ರಯತ್ನ ಕೂಡ ನಡೆದಿತ್ತು ಎಂದಿದ್ದಾರೆ.

ಸಿದ್ದರಾಮಯ್ಯ ಮೇಲೆ ಕಲ್ಲು ಎಸೆಯುಲು ಯತ್ನಿಸಿದ್ದರಾ?

ಆಗಸ್ಟ್ 18ರಂದು ಅತಿವೃಷ್ಟಿಯಿಂದಾದ ಹಾನಿ ವೀಕ್ಷಿಸುವುದಕ್ಕಾಗಿ ಕೊಡಗು ಜಿಲ್ಲೆಗೆ ಹೋಗಿದ್ದೆ, ತಿತಿಮತಿಯಲ್ಲಿ 15-20 ಜನ ಕಪ್ಪು ಬಾವುಟ ಪ್ರದರ್ಶಿಸಿದರು. ಆದರೆ ಪೊಲೀಸರು ಏನೂ ಮಾಡದೇ ಸುಮ್ಮನೆ ನಿಂತಿದ್ದರು. ಅವರು ಕಪ್ಪು ಬಾವುಟ ಕಾರಿನಲ್ಲಿ ಹಾಕಲು ಬಂದ್ರೂ ಸುಮ್ಮನಿದ್ದರು. ವೀಕ್ಷಣೆಗೆ ಹೋಗಿದ್ದ ವೇಳೆ ಒಂದರೆಡು ಕಡೆ ಬಟ್ಟೆಯಲ್ಲಿ ಕಲ್ಲಿಟ್ಟು ತನ್ನ ಕಡೆಗೆ ಎಸೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಇದು ಸರ್ಕಾರಿ ಪ್ರಾಯೋಜಿತ ಪ್ರತಿಭಟನೆ”

ಕೊಡಗಿನ ಗುಡ್ಡೆಹೊಸಳ್ಳಿ ಬಳಿಯೂ 15-20 ಯುವಕರು ಪ್ರತಿಭಟನೆ ಮಾಡಿದ್ದಾರೆ. ಮೊದಲೇ ಪ್ರತಿಭಟನ ಮಾಡಿದಾಗ ಪೊಲೀಸರು ಎಚ್ಚೆತ್ತುಕೊಳ್ಳಲಿಲ್ಲ. ಎಸ್ ಪಿ ಸುಮ್ಮನೆ ನೋಡುತ್ತ ನಿಂತುಬಿಟ್ಟಿದ್ದಾನೆ. ಇಷ್ಟೆಲ್ಲಾ ಆಗಿದ್ದರೂ ಡಿಸಿಯಾಗಲಿ ಪೊಲೀಸರಾಗಲಿ ಏನೂ ಕ್ರಮ ಕೈಗೊಳ್ಳಲಿಲ್ಲ. ಇಷ್ಟೆಲ್ಲಾ ನೋಡಿದ ಮೇಲೆ ಇದು ಸರ್ಕಾರದ ಪ್ರಾಯೋಜಿತ ಪ್ರತಿಭಟನೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ರು.

ಇದನ್ನೂ ಓದಿ: Madikeri Chalo: ಕಾಂಗ್ರೆಸ್ ಪ್ಲ್ಯಾನ್‌ಗೆ ಬಿಜೆಪಿ ಠಕ್ಕರ್; ಕೊಡಗಿನಲ್ಲಿ ನಾಳೆಯಿಂದ 4 ದಿನ ನಿಷೇಧಾಜ್ಞೆ

“ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ”

ಇನ್ನು ನಾನು ಆ ದಿನ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವೀಣಾ ಅಚ್ಚಯ್ಯ ಅವರು ನಾಟಿ ಕೋಳಿ ಸಾರು, ಕಳಲೆ ಪಲ್ಯ ಹಾಗೂ ರೊಟ್ಟಿ ತಂದಿದ್ದರು. ನಾನು ಆ ದಿನ ನಾಟಿ ಕೋಳಿ ತಿನ್ನದೇ ಬರೀ ಕಳಲೆ ಪಲ್ಯ ಹಾಗೂ ರೊಟ್ಟಿ ಮಾತ್ರ ತಿಂದಿದ್ದೆ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.“ಬೋಪಯ್ಯ ಸವಾಲು ಹಾಕಿದ್ದರು”

‘ಕೊಡಗಿನಲ್ಲಿ ಆಗಿದ್ದು ಸರ್ಕಾರಿ ಪ್ರಾಯೋಜಿತ, ಮೊದಲೇ ರೂಪಿಸಿದ ಪ್ರತಿಭಟನ. ಕೊಡಗಿನ ಜನರು ಒಳ್ಳೆಯವರು, ನಾವು ಪ್ರತಿಭಟನೆ ಮಾಡಲು ಮುಂದಾಗಿದ್ದು ಅಲ್ಲಿನ ಜನರ ವಿರುದ್ಧ ಅಲ್ಲ, ಬದಲಾಗಿ ಅಲ್ಲಿನ ಜನರ ಪರವಾಗಿ. ನಾನು ಪ್ರತಿಭಟನೆಗೆ ಘೋಷಣೆ ಮಾಡಿದ ಬಳಿಕ ಕೆಜಿ ಬೋಪಯ್ಯ ಬರಲಿ ನೋಡೋಣ ಅಂತ ಸವಾಲು ಹಾಕಿದ್ರು. ಹಾಗಾದ್ರೆ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವಾ? ಅಂತ ಸಿದ್ದರಾಮಯ್ಯ ಪ್ರಶ್ನಿಸಿದ್ರು.

“ಹಿಂದೆ ರೆಡ್ಡಿ ಸಹೋದರರೂ ಸವಾಲು ಹಾಕಿದ್ದರು”

ವಿಪಕ್ಷ ನಾಯಕನ ಸ್ಥಾನ ಅಂದ್ರೆ ಶಾಡೋ ಸಿಎಂ. ಆದ್ರೆ ಬೋಪಯ್ಯ ನನ್ನನ್ನೇ ಹೆದರಿಸಲು ನೋಡಿದ್ರು. ಈ ಹಿಂದೆ ರೆಡ್ಡಿ ಸಹೋದರರು ಹೀಗೆ ಸವಾಲು ಹಾಕಿದ್ದರು. ಆಗ ಏನಾಯ್ತು? ಅಂತ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: Siddaramaiah: ಮನೆಯಲ್ಲಿ ಏನಾದ್ರೂ ತಿನ್ನಿ, ದೇವಸ್ಥಾನಕ್ಕೆ ಹೋಗುವಾಗ ಶಿಷ್ಟಾಚಾರ ಪಾಲಿಸಿ: ಪ್ರತಾಪ್ ಸಿಂಹ

“ಮಡಿಕೇರಿ ಚಲೋ ಮುಂದೂಡಿಕೆ”

ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಪ್ರತಿಭಟನಾ ರ್ಯಾಲಿಯನ್ನು ಮುಂದೂಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ನಾಳೆಯಿಂದ ನಾಲ್ಕು ದಿನ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಾವು ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಈ ನಿರ್ಧಾರಕ್ಕೆ ಬಂದಿದ್ದೇವೆ ಅಂತ ಅವರು ತಿಳಿಸಿದ್ದಾರೆ.
Published by:Annappa Achari
First published: