Siddaramaiah: ರಾಷ್ಟ್ರಧ್ವಜಕ್ಕೆ ಅಪಮಾನ, ಸಿದ್ದರಾಮಯ್ಯ ವಿರುದ್ಧ ದೂರು!

ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಅಂತಾ ಆರೋಪಿಸಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲಾಗಿದೆ. ಸಿದ್ದರಾಮಯ್ಯ ಕೇಸರಿ, ಬಿಳಿ, ಹಸಿರು ಎನ್ನುವ ಬದಲು ಕೇಸರಿ ಜಾಗದಲ್ಲಿ ಕೆಂಪು ಎಂದಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು

  • Share this:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ದೂರು (Case) ದಾಖಲಾಗಿದೆ. ರಾಷ್ಟ್ರಧ್ವಜಕ್ಕೆ (Indian Flag) ಅಪಮಾನ ಮಾಡಿದ್ದಾರೆ ಅಂತಾ ಆರೋಪಿಸಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲಾಗಿದೆ. ಚಿಕ್ಕಮಗಳೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಮುಖಂಡ (BJP Leaders) ಸಿ.ಟಿ.ರವಿ ಸ್ವಗ್ರಾಮ ಚಿಕ್ಕಮಾಗರಹಳ್ಳಿಯ ಯುವಕರು ದೂರು ದಾಖಲಿಸಿದ್ದಾರೆ. ರಾಷ್ಟ್ರಧ್ವಜದ ಬಣ್ಣ (Colour) ವಿವರಿಸುವ ವೇಳೆ ಸಿದ್ದರಾಮಯ್ಯ ಕೇಸರಿ, ಬಿಳಿ, ಹಸಿರು ಎನ್ನುವ ಬದಲು ಕೇಸರಿ ಜಾಗದಲ್ಲಿ ಕೆಂಪು (Red) ಎಂದಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿದ್ದು ಈಗ ದೂರು ದಾಖಲಾಗಿದೆ. ಸಿದ್ದರಾಮಯ್ಯರ ಈ ಮಾತಿಗೆ ಕೆಲವರು ಆಕ್ರೋಶ ಹೊರಹಾಕಿದ್ರೆ ಇನ್ನು ಕೆಲವರು ಕೇಸರಿ ಅಂದ್ರೆ ಭಯನಾ ಅಂತಾನೂ ಪ್ರಶ್ನೆ ಮಾಡಿದ್ದರು.

ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿಯವರ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ವಿರುದ್ಧ  ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.

ಕೆಂಪು ಬಿಳಿ ಹಸಿರು ಎಂದಿದ್ದ ಸಿದ್ದು!

ಸಿದ್ದರಾಮಯ್ಯ ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡೋವಾಗ ತ್ರಿವರ್ಣ ಧ್ವಜದ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ಕೇಸರಿ, ಬಿಳಿ, ಹಸಿರು ಅಂತಾ ಹೇಳುವ ಬದಲು ಕೇಸರಿ ಜಾಗದಲ್ಲಿ ಕೆಂಪು ಎಂದಿದ್ದಾರೆ. ಬಾವುಟದ ಬೇರೆಲ್ಲಾ ಭಾಗವನ್ನು ಸರಿಯಾಗಿ ವಿವರಿಸಿ, ಅದರ ಅರ್ಥ ಹೇಳಿದರೂ ಕೇಸರಿ ಅಂತಾ ಹೇಳಲಿಲ್ಲ. ಅದರ ಬದಲಾಗಿ ಕೆಂಪು ಎಂದಿದ್ದರು.

Siddaramaiah against case filed at Chikkamangalore for insult to the Indian flag
ಸಿದ್ದರಾಮಯ್ಯ


ಸಿದ್ದರಾಮಯ್ಯಗೆ ಕೇಸರಿ ಭಯ!

ಸಿದ್ದರಾಮಯ್ಯ ಮಾತಿಗೆ ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇನ್ನು ಕೆಲವರು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದರು. ಸಿದ್ದರಾಮಯ್ಯಗೆ ಕೇಸರಿ ಕಂಡರೆ ಭಯ ಅಂತಾನೂ ಕಾಲೆಳೆದಿದ್ದರು.

ಇದನ್ನೂ ಓದಿ: ಬೆಟ್ಟಿಂಗ್, ಮೋಸ, ಕಣ್ಣೀರು, ನಾಚಿಕೆ ಪುರಾಣ: ಎಚ್​ಡಿಕೆ-ಅಶ್ವಥ್ ನಾರಾಯಣ ಸಮರ!

ಚಿಕ್ಕಮಗಳೂರು ಬಿಜೆಪಿಯಿಂದ ದೂರು

ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ದೂರು ದಾಖಲಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡ ಗಿರೀಶ್, ಮನು ಹಾಗೂ ಬಜರಂಗದಳದ ಶಿವು ಎಂಬುವವರು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಕಾಲು ಜಾರಿ ಕುಸಿದ ಸಿದ್ದು!

ಸಿದ್ದರಾಮಯ್ಯ ಇಂದು ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆ ಬಳಿ ಕಾರು ಹತ್ತುವ ವೇಳೆ ಜಾರಿ ಕುಸಿದರು. ಕಾರು ಹತ್ತಿ ನಿಂತು ಅಭಿಮಾನಿಗಳತ್ತ ಕೈ ಬೀಸುತ್ತಿದ್ದಾಗ ಜಾರಿ ಕುಸಿದರು. ತಕ್ಷಣ ಅಂಗರಕ್ಷಕರು ಬಂದು ಸಹಾಯ ಮಾಡಿದ್ರು.

ಇದನ್ನೂ ಓದಿ: ನಿತೀಶ್​ ಬಿಜೆಪಿಗೆ ಗುಡ್​​ಬೈ ಹೇಳಿದ್ದೇ ತಡ 5 ವರ್ಷ ಹಳೇ ಟ್ವೀಟ್​ ನೆನಪಿಸಿ ಮೋದಿಗೆ ತಿವಿದ RJD!

ಬಾದಾಮಿಯಲ್ಲಿ ಸ್ಪರ್ಧಿಸಲು ಒತ್ತಾಯ

ಸಿದ್ದರಾಮಯ್ಯ ಇಂದು ಬಾದಾಮಿಯಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕರ್ತರು ಸಿದ್ದರಾಮಯ್ಯಗೆ ಬಾದಾಮಿಯಲ್ಲೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದರು.

ಸಾವಿರಾರು ಅಭಿಮಾನಿಗಳು ಸಿದ್ದರಾಮಯ್ಯ ಭಾಷಣ ವೇಳೆ ಶಿಳ್ಳೆ, ಕೇಕೆ ಹಾಕಿದರು. ಮಾತ್ರವಲ್ಲ ಭಾಷಣದ ವೇಳೆ ಇಲ್ಲೇ ಸ್ಪರ್ಧೆ ಮಾಡಬೇಕು ಎಂದ ಘೋಷಣೆ ಕೂಗುತ್ತಿದ್ದರು.

ಅಭಿಮಾನಿಗಳಿಗೆ ಗದರಿದ ಸಿದ್ದರಾಮಯ್ಯ

ಭಾಷಣದ ವೇಳೆ ಪದೇ ಪದೇ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಸಿದ್ದರಾಮಯ್ಯ ಗದರಿದರು. ಆದರೂ ಅಭಿಮಾನಿಗಳು ಸುಮ್ಮನಾಗಲಿಲ್ಲ. ಕೊನೆಗೆ ಸಿದ್ದರಾಮಯ್ಯ, ನಾನು ಬಾದಾಮಿ ಶಾಸಕ. ಚುನಾವಣೆ ಇನ್ನೂ ಒಂಬತ್ತು ತಿಂಗಳು ಇದೆ. ಆಗ ಬಂದು ಮಾತನಾಡುತ್ತೇನೆ ಅಂತಾ ಹೇಳಿದ್ರು.

ಸಿದ್ದರಾಮಯ್ಯ ಮಾತಿಗೆ ಕಾರ್ಯಕರ್ತರು ಸುಮ್ಮನಾದರು. ಏನೇ ಆದರೂ ಸಿದ್ದರಾಮಯ್ಯರ ಮುಂದಿನ ಕ್ಷೇತ್ರದ ಬಗ್ಗೆ ಕುತೂಹಲ ಮುಂದುವರಿದೇ ಇದೆ. ಯಾವಾಗ ಘೋಷಣೆ ಮಾಡುತ್ತಾರೋ ಗೊತ್ತಿಲ್ಲ.
Published by:Thara Kemmara
First published: