Siddaramaiah: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಚಿವ ಪುಟ್ಟರಂಗಶೆಟ್ಟಿಗೆ ಹೆದರಿಸಿ ಜಾತಿ ಸಮೀಕ್ಷೆ ವರದಿ ಬರದಂತೆ ತಡೆದರು; ಸಿದ್ದರಾಮಯ್ಯ ನೇರ ಆರೋಪ

ಮುಂದಿನ ಬಾರಿ ಮಡಿವಾಳ ಸಮಾಜದಿಂದ ಒಬ್ಬರನ್ನು ಎಂಎಲ್​ಸಿ ಮಾಡ್ತೀನಿ. ಒಬ್ಬರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಹ ಕೊಡುತ್ತೇನೆ. ನಾನು ಸುಮ್ಮನೆ ಏನನ್ನು ಹೇಳುವುದಿಲ್ಲ. ಹೇಳಿದ ಮೇಲೆ ಅದನ್ನು ಮಾಡೇ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

  • Share this:
    ಬೆಂಗಳೂರು: ಕೋವಿಡ್ ಮೃತ ಮಡಿವಾಳ ಕುಟುಂಬಗಳಿಗೆ 5 ಸಾವಿರ ಪರಿಹಾರ ವಿತರಿಸಿದ ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು, ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ನಾನು ಸಿಎಂ ಆಗಿದ್ದಾಗ ಪ್ರತ್ಯೇಕ ಅನುದಾನ ನೀಡಿದ್ದೆ. ಹಿಂದುಳಿದವರು ಮಾತ್ರ ಜಾತಿ ಹೆಸರಿನಲ್ಲಿ ಸಮ್ಮೇಳನ ಮಾಡಿದರೆ ತಪ್ಪಲ್ಲ. ಮುಂದುವರಿದವರು ಜಾತಿ ಸಮ್ಮೇಳನ ಮಾಡಬಾರದು. ಹಿಂದುಳಿದವರೇ ಸಂಘಟಿತರಾಗಿ ಸಮ್ಮೇಳನ ಮಾಡಬೇಕು. ಹಿಂದುಳಿದ ಜಾತಿಯವರು ಸಮ್ಮೇಳನ ಮಾಡುವುದು ಅಪರಾಧವಲ್ಲ ಎಂದು ಹೇಳಿದರು.

    ಕೆಲವರು ಹೆಸರಿಗೆ ಮಾತ್ರ ಬಸವಣ್ಣನ ಹೆಸರು ಹೇಳುತ್ತಾರೆ. ಇವನಾರವ ಇವನಾರವ, ಇವ ನಮ್ಮವ‌ ನಮ್ಮವ ಎಂದು ಬಸವಣ್ಣನ ವಚನ ಹೇಳುತ್ತಾರೆ. ಆದರೆ ಪಕ್ಕದಲ್ಲಿ ನಿಂತು ನೀವು ಯಾವ ಜಾತಿ ಎಂದು ಕೇಳುತ್ತಾರೆ. ಸಂವಿಧಾನ ಅತ್ಯಂತ ಒಳ್ಳೆಯದು. ಆದರೆ ಸಂವಿಧಾನ ಒಳ್ಳೆಯವರ ಕೈಯಲ್ಲಿ ಇರಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು.

    ಜಾತಿ ಸಮೀಕ್ಷೆ ವರದಿ (Caste Survey Report) ವಿಚಾರವಾಗಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ಜಾತಿ‌ ಸಮೀಕ್ಷೆ ವರದಿ ನಾನು ಸಿಎಂ ಆಗಿದ್ದಾಗ ಪೂರ್ಣವಾಗಿರಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪೂರ್ಣವಾಯ್ತು. ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವನಾಗಿದ್ದರು. ವರದಿ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದರು. ಬಿಡುಗಡೆಗೆ ಪ್ರಯತ್ನ ಮಾಡಲು ಹೋಗಿದ್ದ ಪುಟ್ಟರಂಗಶೆಟ್ಟಿ. ಆದರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ. ಸಚಿವ ಪುಟ್ಟರಂಗಶೆಟ್ಟಿಗೆ ಕುಮಾರಸ್ವಾಮಿ ಅವರು ಹೆದರಿಸಿ ಬಿಟ್ಟಿದ್ರು. ಕುಮಾರಸ್ವಾಮಿಗೆ ಹೆದರಿ ಪುಟ್ಟರಂಗಶೆಟ್ಟಿ ಜಾತಿ ಸಮೀಕ್ಷೆ ವರದಿ ಬಿಡುಗಡೆ ಗೋಜಿಗೆ ಹೋಗಲಿಲ್ಲ. ಇದನ್ನು ಹೇಳಿದರೆ ಕುಮಾರಸ್ವಾಮಿಗೆ ಕೋಪ ಬರುತ್ತದೆ. ಇದ್ದಿದ್ದು ಇದ್ದ ಹಾಗೆ ಹೇಳಿದರೆ ಕೋಪ ಬರುತ್ತದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸಿದ್ದರಾಮಯ್ಯ ಕೂತ್ಕೊಂಡು ಜಾತಿ ಸಮೀಕ್ಷೆ ವರದಿ ಬರೆಸಿಬಿಟ್ಟಿದ್ದಾನೆ ಎನ್ನುತ್ತಾರೆ. ಎಲ್ಲ ಜನಾಂಗದ ಸರ್ವೆ ಅದು. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ಇಲ್ಲ. ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.

    ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಮಡಿವಾಳ ಸಮಾಜದವರನ್ನು ಎಂಎಲ್‌ಸಿ ಮಾಡುತ್ತೇವೆ. ನಾನು ಸಿಎಂ ಆಗಿದ್ದಾಗ ಎಲ್ಲ ಸಮಾಜದವರಿಗೂ ಅವಕಾಶ ಕೊಟ್ಟಿದ್ದೆ, ಆದರೆ ಮಡಿವಾಳ ಸಮಾಜಕ್ಕೆ ಎಂಎಲ್ ಸಿ ಮಾಡೊದಿಕ್ಕೆ ಆಗಲಿಲ್ಲ. ಮುಂದಿನ ಬಾರಿ ಮಡಿವಾಳ ಸಮಾಜದಿಂದ ಒಬ್ಬರನ್ನು ಎಂಎಲ್​ಸಿ ಮಾಡ್ತೀನಿ. ಒಬ್ಬರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಹ ಕೊಡುತ್ತೇನೆ. ನಾನು ಸುಮ್ಮನೆ ಏನನ್ನು ಹೇಳುವುದಿಲ್ಲ. ಹೇಳಿದ ಮೇಲೆ ಅದನ್ನು ಮಾಡೇ ಮಾಡುತ್ತೇನೆ. ಮಡಿವಾಳ ಸಮುದಾಯವನ್ನು ಎಸ್ಸಿಗೆ ಸೇರಿಸಬೇಕು ಎಂಬ ಬೇಡಿಕೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ರಾಜ್ಯದವರು ಎಸ್ಸಿಗೆ ಸೇರಿಸಲು ಆಗಲ್ಲ. ಹೀಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

    ಇದನ್ನು ಓದಿ: Electric Bus in Bengaluru: ಬೆಂಗಳೂರಿಗರಿಗೆ ಗುಡ್​ ನ್ಯೂಸ್; ನಾಳೆಯಿಂದ ನಗರದಲ್ಲಿ ಓಡಾಡಲಿವೆ ಎಲೆಕ್ಟ್ರಿಕ್ ಬಸ್​​ಗಳು

    ಜಾತಿ ಸಮೀಕ್ಷೆ ವರದಿ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

    ರಾಜಕಾರಣದಲ್ಲಿ ಕ್ಷಣಕ್ಕೊಂದು ಬಣ್ಣ ಬದಲಿಸಿಕೊಂಡು ಓಡಾಡುವವರ ಬಗ್ಗೆ ನನಗೆ ಗೊತ್ತಿದೆ. ಇವರು ರಾಜಕೀಯ ಊಸರವಳ್ಳಿಗಳು, ಜನರ ಪಾಲಿನ ಮಗ್ಗುಲ ಮುಳ್ಳುಗಳು! ಮುಳ್ಳನ್ನು ಹೇಗೆ ತೆಗೆಯಬೇಕು ಎಂಬುದು ಜನರಿಗೆ ಗೊತ್ತಿದೆ, ಆ ಕಾಲವೂ ಹತ್ತಿರದಲ್ಲೇ ಇದೆ. ಇವರು (ಸಿದ್ದರಾಮಯ್ಯ) ಅಧಿಕಾರದಲ್ಲಿದ್ದಾಗಲೇ ಕಾಂತರಾಜು ಆಯೋಗದ ವರದಿಯು ಬಂದಿತ್ತು ಆಗಲೇ ಅಂಗೀಕರಿಸಿ ಬಿಡುಗಡೆ ಮಾಡಬಹುದಿತ್ತಲ್ಲ? ಹಾಗೆ ಮಾಡಲಿಲ್ಲ, ಯಾಕೆ? ಅವಕಾಶ ಇದ್ದಾಗ ಮಾಡದೇ ಈಗ ಆಷಾಢಭೂತಿತನ ಏಕೆ? ಜನರಿಗೆ ಅರ್ಥವಾಗದೆಂಬ ಅತಿಬುದ್ಧಿವಂತಿಕೆಯೇ? ಅತಿ ಬುದ್ಧಿವಂತರೆಲ್ಲ ಆಮೇಲೆ ಏನಾದರು ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಎಚ್​.ಡಿ. ಕುಮಾರಸ್ವಾಮಿ ಅವರು ಜಾತಿ ಸಮೀಕ್ಷೆ ವರದಿ ಬಿಡುಗಡೆ ವಿಷಯವಾಗಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ತಿರುಗೇಟು ನೀಡಿದ್ದರು.
    Published by:HR Ramesh
    First published: