ಹೌದು, ನೀವು ಹಿಂದೆ ಕುಳಿತಿದ್ದೀರಲ್ಲ, ಗಮನಿಸುತ್ತಿರುತ್ತೀರಿ: BSY ಬಗ್ಗೆ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

ಏ ಕೂತ್ಕೊಳ್ಳರಪ್ಪ ಎಂದರು. ಇದಕ್ಕೆ ಉತ್ತರಿಸಿದ ಆರ್.ಅಶೋಕ್ ನೀರು ಕುಡಿಯಲು ಹೋಗುತ್ತಿರೋದಾಗಿ ಹೇಳಿದರು. ಇಲ್ಲೇ ಕೂತ್ಕೊಳ್ಳಿ, ಇಲ್ಲಿಗೆ ನೀರು ತಂದು ಕೊಡ್ತಾರೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಂತಯೆ ಆರ್.ಅಶೋಕ್ ಆಸೀನರಾದರು

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬಜೆಟ್ ಅಧಿವೇಶನ (Budget Session) ಆರಂಭವಾಗಿದ್ದು, ಪ್ರಶ್ನೋತ್ತರದ ಬಳಿಕ ಈ ವರ್ಷದ ಅಯವ್ಯಯ ಕುರಿತಾಗಿ ಚರ್ಚೆ ಆರಂಭವಾಗಿದೆ. ಮೊದಲಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಬಜೆಟ್ ಕುರಿತು ಚರ್ಚೆ ಆರಂಭಿಸಿದರು. ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಸಚಿವರಾದ ಮುನಿರತ್ನ (Minister Munirathna) ಮತ್ತು ಆರ್.ಅಶೋಕ್ (Minister R Ashok) ಹೊರ ನಡೆಯಲು ಮುಂದಾದರು. ಇದನ್ನ ಗಮನಿಸಿದ ಸಿದ್ದರಾಮಯ್ಯನವರು, ಏ ಕೂತ್ಕೊಳ್ಳರಪ್ಪ ಎಂದರು. ಇದಕ್ಕೆ ಉತ್ತರಿಸಿದ ಆರ್.ಅಶೋಕ್ ನೀರು ಕುಡಿಯಲು ಹೋಗುತ್ತಿರೋದಾಗಿ ಹೇಳಿದರು. ಇಲ್ಲೇ ಕೂತ್ಕೊಳ್ಳಿ, ಇಲ್ಲಿಗೆ ನೀರು ತಂದು ಕೊಡ್ತಾರೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಂತಯೆ ಆರ್.ಅಶೋಕ್ ಆಸೀನರಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಬಿ.ಎಸ್.ಯಡಿಯೂರಪ್ಪ (BS Yediyurappa), ಅವರು ಸುಮ್ಮನೆ ಹೋಗ್ತಿದ್ರು. ನೀವು ಹೇಳಿದ ಮೇಲೆ ಕುಳಿತುಕೊಂಡರು ಎಂದು ಹೇಳಿದರು.  ಹೌದು ನೀವು ಹಿಂದೆ ಕುಳಿತಿದ್ದೀರಿ. ಇಂತದ್ದನ್ನೆಲ್ಲ ಗಮನಿಸುತ್ತೀರ ಎಂದು ಕೊಂಡಿದ್ದೇನೆ ಎಂದು ಹಾಸ್ಯ ಚಟಾಕಿ ಸಿದ್ದರಾಮಯ್ಯ ಹಾರಿಸಿದರು.

ಭಾಷಣದ ಆರಂಭದಲ್ಲ್ಲಿಯೇ ಸರ್ಕಾರ, ಬಜೆಟ್, ಸಿಎಂ ಬಸವರಾಜ್ ಬೊಮ್ಮಾಯಿ ಟೀಕಿಸಲು ಸಿದ್ದರಾಮಯ್ಯ ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೇರಿ,  ನೀವು ಫ್ರೆಂಡ್ ಅಂತೇಳಿ, ಅವರನ್ನು ಹೀಗೆ ಟೀಕೆ ಮಾಡ್ತಿದ್ದೀರಿ ಎಂದರು.

ನಮ್ಮ ಸಿದ್ಧಾಂತಗಳು ಬೇರೆ

ಸ್ನೇಹ ಬೇರೆ ರಾಜಕಾರಣ ಬೇರೆ, ಸಿದ್ದಾಂತ ಬೇರೆ. ನೀವು RSS ನಿಂದ ಬಂದವರು. ನಿಮ್ಮ ವೈಚಾರಿಕ ಸಿದ್ದಾಂತ ಬೇರೆ, ನಮ್ಮ ಸಿದ್ದಾಂತ ಬೇರೆಯಾಗಿವೆ. ಹೊರಗೆ ಸ್ನೇಹ ಇದ್ದೇ ಇರುತ್ತೆ, ಇಲ್ಲಿ ರಾಜಕಾರಣ ಇದ್ದೇ ಇರುತ್ತೆ ಎಂದು ಸ್ಪೀಕರ್ ಗೆ ತಿರುಗೇಟು ಕೊಟ್ಟರು.

ಇದನ್ನೂ ಓದಿ:  Budget Session: ಅನುದಾನ ನೀಡಿದ್ರೆ ಮಾತ್ರ ದೇವರ ಆಶೀರ್ವಾದಾನಾ? ಸ್ಪೀಕರ್ ನಗೆ ಚಟಾಕಿ

ಬೊಮ್ಮಾಯಿ 2022-23ಕ್ಕೆ ರಾಜ್ಯದ ಬಜೆಟ್ ಮಂಡಿಸಿದ್ದಾರೆ. ಬೊಮ್ಮಾಯಿ ಒಳ್ಳೆಯ ಸ್ನೇಹಿತರು. ಅವರ ತಂದೆ ರಾಯಿಸ್ಟ್, ಇವರಿಗೂ ಅವರ ತಂದೆ ಪ್ರಭಾವ ಇದೆ. ಹಾಗಾಗಿ ಬಹಳ ನಿರೀಕ್ಷೆ ಇತ್ತು, ಇವರು ಮಂಡಿಸೋ ಬಜೆಟ್ ಮೇಲೆ. ಆ ನಿರೀಕ್ಷೆ ಹುಸಿಯಾಗಿದೆ ಅಂತ ಬಹಳ ಬೇಸರದಿಂದ ಹೇಳ್ತಿದ್ದೀನಿ ಎಂದರು.

ನಿಮಗೂ ನಮಗೂ ಒಳ್ಳೆಯ ಸ್ನೇಹ. ನೀವು RSS ನಿಂದ ಬಂದಿದ್ದೀರಿ, ನಾನು ಬೇರೆ ಕಡೆ ಇಂದ ಬಂದಿದ್ದೀನಿ. ನಮಗೂ ನಿಮಗೂ ವೈಚಾರಿಕವಾಗಿ, ಸೈದ್ದಾಂತಿಕ ವಾಗಿ ಭಿನ್ನಾಭಿಪ್ರಾಯ ಇದೆ. ಆದ್ರೆ ಮನುಷ್ಯ ಬೇರೆ, ನಾನು ನಿಮ್ಮನ್ನ, ನೀವು ನಮ್ಮನ್ನ ಪ್ರೀಸುತ್ತೇವೆ. ಬೇಸರ ಅಂತ ಅಷ್ಟೇ ಹೇಳಿದೆ, ನೋವು ಅಂತ ಹೇಳಲಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯರಿಗೆ ಆರ್ ಅಶೋಕ್ ತಿರುಗೇಟು

ನಾವು, ಯಡಿಯೂರಪ್ಪ ಅವರು RSS ಇಂದ ಬಂದವರು. ಅವರು ನಮಗಿಂತಲೂ ಈಗ ಹೆಚ್ಚು RSS ಆಗಿದ್ದಾರೆ. ಜನರಿಗೆ ಒಳ್ಳೆಯದನ್ನ ಮಾಡ್ತಿದ್ದಾರೆ. RSS ಯಾವುದೇ ಪಕ್ಷ ಅಲ್ಲ ಎಂದು ಸಚಿವ ಆರ್.ಅಶೋಕ್ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು.

ಬೆಳವಣಿಗೆಗೆ ಪೂರಕವಲ್ಲದ ಬಜೆಟ್.  ತುಂಬಾ ನಿರಾಶಾದಾಯಕ‌ ಬಜೆಟ್. ನಾನು ಒಟ್ಟು 13 ಬಜೆಟ್ ಮಂಡಿಸಿದ್ದೇನೆ. ಸಿಎಂ ಆಗಿ ಆರು ಬಜೆಟ್ ಮಂಡಿಸಿದ್ದೇನೆ. ಬಜೆಟ್ ನಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು. ಈಗ ಏನು ಕೊಟ್ಟಿದ್ದೇವೆ, ಮುಂದೆ ಏನ್ಮಾಡ್ತೇವೆ ತಿಳಿಸಬೇಕು. ಆದರೆ ಈ ಬಜೆಟ್ ನಲ್ಲಿ ಎಲ್ಲವನ್ನ ಮುಚ್ಚಿಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ:  Ukraineನಿಂದ ಬಂದಿರುವ Students ಭವಿಷ್ಯ ಏನು? ಮಕ್ಕಳ ಕನಸುಗಳ ಜೊತೆ ವ್ಯಾಪಾರೀಕರಣ ಬೇಡ: HD Kumaraswamy

ಬಜೆಟ್ ಪಾರದರ್ಶಕವಾಗಿಲ್ಲ

ಯಡಿಯೂರಪ್ಪನವರು ಬಜೆಟ್ ಮಂಡಿಸಿದ್ದರು. ಇಲಾಖೆ ಬಿಟ್ಟು ಸೆಕ್ಟರ್ ಬಜೆಟ್ ಮಂಡಿಸಿದ್ರು. ಈಗ ಅದೇ ದಾರಿಯನ್ನ ಬೊಮ್ಮಾಯಿ ತುಳಿದಿದ್ದಾರೆ. ಇಲಾಖಾವಾರು ಎಲ್ಲಿಯೂ ತಿಳಿಸಿಲ್ಲ. ಇದರಿಂದ ಜನರಿಗೆ ಉತ್ತರದಾಯಿತ್ವವಾಗಲ್ಲ. ಜನರು ಕಟ್ಟುವ ತೆರಿಗೆ ಹಣವನ್ನೇ ಇಲ್ಲಿ ಖರ್ಚು ಮಾಡೋದು. ಖರ್ಚು ಮಾಡುವಾಗ ಪಾರದರ್ಶಕವಾಗಿರಬೇಕು ಎಂದು ತಿಳಿಸಿದರು.
Published by:Mahmadrafik K
First published: