BSY & ಅವರ ಪುತ್ರನನ್ನ ಜೈಲಿಗೆ ಕಳುಹಿಸ್ತೀವಿ ಎಂದು ಹೆದರಿಸಿ ಬಿಜೆಪಿ ರಾಜೀನಾಮೆ ಪಡೆದಿದೆ: Siddaramaiah ಆರೋಪ

ಬಿಜೆಪಿಯವರು ಕೊಲೆಗಡುಕರು, ಬಿಜೆಪಿಯವರದು ಗೂಂಡಾ ಸರ್ಕಾರ, ಕೊಲೆಗಡುಕರು ಸರ್ಕಾರ. ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹತ್ತಿಸಿ ಸಾಯಿಸಿದ್ರು. ಹಾವೇರಿಯಲ್ಲಿ  ಗುಂಡು ಹಾರಿಸಿ ರೈತರನ್ನು ಕೊಂದರು ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಿದ್ದರಾಮಯ್ಯ-ಯಡಿಯೂರಪ್ಪ

ಸಿದ್ದರಾಮಯ್ಯ-ಯಡಿಯೂರಪ್ಪ

  • Share this:
ಹಾವೇರಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾನಗಲ್​​ನ ಮಾಸಣಕಟ್ಟಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ (BJP) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದಿನ ಸಿಎಂ ಬಿ.ಎಸ್​.ಯಡಿಯೂರಪ್ಪರನ್ನ(bs yediyurappa)  ಬಲಾತ್ಕಾರವಾಗಿ ಹೆದರಿಸಿ. ಮನೆಗೆ ಕಳಿಸಿದ್ರು. ರಾಜೀನಾಮೆ ಕೊಡದಿದ್ರೆ ನಿನ್ನ ಮತ್ತು ನಿನ್ನ ಮಗನನ್ನು ಜೈಲಿಗೆ ಕಳಿಸ್ತೀನಿ ಅಂತ ಹೆದರಿಸಿದ್ರು. ಯಡಿಯೂರಪ್ಪ ಅಳುತ್ತಾ ರಾಜೀನಾಮೆ ಕೊಟ್ಟು  ಮನೆಗೆ ಹೋದ. ಈ ವೇಳೆ ತಾನು ಮುಖ್ಯಮಂತ್ರಿ ಆಗಬೇಕು ಅಂತ ಬೊಮ್ಮಾಯಿ ಕಯ್ತಾ ಇದ್ರು. RSSನವರೇ ಬೊಮ್ಮಾಯಿನ ಮುಖ್ಯಮಂತ್ರಿ ಮಾಡಿದರು. ಬೊಮ್ಮಾಯಿಯವರ ರಿಮೋರ್ಟ್​​ RSSನವರ ಬಳಿ ಇದೆ. ಇಷ್ಟಕ್ಕೆ ಎಲ್ಲಾ ಮುಗಿಯಿತು ಎಂದು ಬೊಮ್ಮಾಯಿ ಭಾವಿಸಬಾರದು ಎಂದು ಸಿದ್ದರಾಮುಯ್ಯ ಎಚ್ಚರಿಸಿದರು.

ಬಿಜೆಪಿಯವರು ಕೊಲೆಗಡುಕರು

ಬಿಜೆಪಿಯವರು ಕೊಲೆಗಡುಕರು, ಬಿಜೆಪಿಯವರದು ಗೂಂಡಾ ಸರ್ಕಾರ, ಕೊಲೆಗಡುಕರು ಸರ್ಕಾರ. ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹತ್ತಿಸಿ ಸಾಯಿಸಿದ್ರು. ಹಾವೇರಿಯಲ್ಲಿ  ಗುಂಡು ಹಾರಿಸಿ ರೈತರನ್ನು ಕೊಂದರು. ಗಾಂಧಿಜೀಯನ್ನು ಕೊಂದ ಗೋಡ್ಸೆಗೆ ದೇವಸ್ಥಾನ ಕಟ್ಟಿ ಪೂಜೆ ಮಾಡ್ತಾರೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಗೆ ದೇವಸ್ಥಾನ ಕಟ್ಟಿದರೂ ಆಶ್ಚರ್ಯ ಇಲ್ಲ. ಯುವಕರಿಗೆ ಉದ್ಯೋಗ ಕೊಡ್ತೀನಿ ಅಂತ ತಿರುಪತಿ ನಾಮ ಹಾಕಿದರು ಎಂದು ಅಬ್ಬರ ಭಾಷಣ ಮಾಡಿದರು.

56 ಇಂಚಿನ ಎದೆ ಅಲ್ಲ, ತಾಯಿ ಹೃದಯ ಇರಬೇಕು

ನರೇಂದ್ರ ಮೋದಿ ಈ ಗಿರಾಕಿ ಕೊರೋನಾ ಟೈಂ ನಲ್ಲಿ ಜನರಿಗೆ ಲಸಿಕೆ ಹಾಕಿಸೋದು ಬಿಟ್ಟು ದೀಪ ಹಚ್ಚಿ ಅಂತ ಅಂದ. 56 ಇಂಚಿನ ಎದೆ ಇದೆ ಎಂದು ಮೋದಿ ಹೇಳಿದ್ರು. 56 ಇಂಚಿನ ಎದೆ ಬಾಡಿ ಬಿಲ್ಡರ್ , ಪೌಲ್ವಾನರಿಗೂ ಇರುತ್ತೆ. ಆದರೆ ತಾಯಿ ಹೃದಯ ಇರಬೇಕು ಎಂದು ಪ್ರಧಾನಿ ಮೋದಿಗೆ ತಿರುಗೇಟು ಕೊಟ್ಟರು. ಚಾಣಕ್ಯ ಯುನಿವರ್ಸಿಟಿ ಕಟ್ಟೋಕೆ ಹೋಗ್ತಿದ್ದಾರೆ. ಆರ್ ಎಸ್ ಎಸ್ ನವರೇ ಬೊಮ್ಮಾಯಿನ ಸಿಎಂ ಮಾಡಿದ್ದು, ಇವರ ರಿಮೋರ್ಟ್  ಆರ್ ಎಸ್ ಎಸ್ ನವರ ಬಳಿ ಇದೆ. ಚಾಣಕ್ಯ ಯುನಿವರ್ಸಿಟಿಗೆ ಕಡಿಮೆ ಬೆಲೆಗೆ ಜಮೀನು ನೀಡಿದ್ದಾರೆ. 116.16 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಕೊಟ್ಟಿದಾರೆ ಎಂದು ಆರೋಪಿಸಿದರು.

ಸಮಾಜ ಒಡೆಯೋಕೆ ಇರೋ ಕೋಮುವಾದಿಗಳ ಗುಂಪು RSS

ಆರ್ ಎಸ್ ಎಸ್ ನವರು ದೇಶಭಕ್ತರು ಅಂತಾರೆ, ಯಾವಾನಾರೂ ಒಬ್ಬ ಆರ್ ಎಸ್ ಎಸ್ ನವನು ಜೈಲಿಗೆ ಹೋಗಿದಾನೇನ್ರಿ? ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದು ತೋರಿಸಲಿ. ಆರ್ ಎಸ್ ಎಸ್ ಸಮಾಜ ಒಡೆಯಲು ಇರೋ ಪಾರ್ಟಿ. ಸಮಾಜ ಒಡೆಯೋಕೆ ಇರೋ ಕೋಮುವಾದಿಗಳ ಗುಂಪು ಆರ್ ಎಸ್ ಎಸ್ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು. RSS ಬಗ್ಗೆ ಮಾತಾಡಿ ಯಾರನ್ನ ಸಿದ್ದರಾಮಯ್ಯ ಓಲೈಕೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ರು. ಯಾರನ್ನ ಓಲೈಕೆ ಮಾಡ್ತಿದಿನಂತೆ? ಅವರು ಆರ್ ಎಸ್ ಎಸ್  ಹಿಡಿತದಲ್ಲಿದಾರಲ್ಲಾ, ಅವರನ್ನ ಓಲೈಕೆ ಮಾಡ್ತಿದ್ದೀನಿ. ಅವರನ್ನೇ ಓಲೈಕೆ ಮಾಡ್ತಿದ್ದೀನಿ ಎಂದು ವ್ಯಂಗ್ಯವಾಡಿದರು.

ತೈಲ ಬೆಲೆ ಇಳಿಸ್ತಿನಿ ಅನ್ನೋದು ಎಲೆಕ್ಷನ್​ ಸ್ಟಂಟ್​

ಆದಾಯದಲ್ಲಿ ಚೇತರಿಕೆ ಕಂಡರೆ ಇಂಧನ ಬೆಲೆ ಇಳಿಕೆ ಬಗ್ಗೆ ಚರ್ಚೆ ಮಾಡ್ತೀವಿ ಎಂಬ  ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಎಲೆಕ್ಷನ್ ಸ್ಟಂಟ್. ಚುನಾವಣೆಗೋಸ್ಕರ ಹೇಳಿರೋ ಮಾತಿದು. ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಮಾಡಿದಾರಲ್ಲಾ? ಸರಕಾರಕ್ಕೆ ಈಗಾಗಲೇ ಆದಾಯ ಬಂದಿದೆ. ಇತ್ತೀಚೆಗೆ ಒಂದು ವಾರದ ಹಿಂದೆ ವರದಿ ಬಂದಿದೆ. ಸೆಪ್ಟಂಬರ್ ನಿಂದ ಇತ್ತೀಚಿನವರೆ ಗೆ 9000  ಕೋಟಿ ರೂ. ಟ್ಯಾಕ್ಸ್ ಕಲೆಕ್ಷನ್ ಆಗಿದೆ. ತೈಲ ಬೆಲೆ ಜಾಸ್ತಿ ಆಗಿರೋದಕ್ಕೆ ಸರ್ಕಾರಕ್ಕೆ ಆದಾಯ ಜಾಸ್ತಿ ಆಗಿದೆ. ಡೀಸೆಲ್ ಪೆಟ್ರೋಲ್ ಬೆಲೆ ಒಂದತ್ತು ರೂಪಾಯಿ ಕಡಿಮೆ ಮಾಡಲಿ ಎಂದು ಸವಾಲೆಸೆದರು.

ಇದನ್ನೂ ಓದಿ: DK Shivakumar-BY Vijayendra: ವೇದಿಕೆ ಮೇಲೆ ಡಿಕೆಶಿ-ಬಿ.ವೈ.ವಿಜಯೇಂದ್ರ ಗುಪ್ತ್ ಗುಪ್ತ್ ಮಾತುಕತೆ!

ಸಂಗುರು ಸಕ್ಕರೆ ಕಾರ್ಖಾನೆ ವಿಚಾರಕ್ಕೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸಂಗುರು ಕಾರ್ಖಾನೆ ಕಾಂಗ್ರೆಸ್ ನವರಿಂದ ದಿವಾಳಿಯಾಗಿದೆ ಎಂದು ಬೊಮ್ಮಾಯಿ ಸುಳ್ಳು ಹೇಳ್ತಾರೆ. ಸಜ್ಜನರ ಮೇಲೆ ಆರೋಪ ಇದೆ, ಈ ಆರೋಪ ಇರೋ ವ್ಯಕ್ತಿನಾ ಎಂ ಎಲ್ ಎ ಮಾಡ್ತೀರಾ ಎಂದು ಪ್ರಶ್ನಿಸಿದರು. ಶುಗರ್ ಫ್ಯಾಕ್ಟರಿ ಸಿದ್ದೇಶ್ವರಗೆ ಬಿಜೆಪಿಯವರೇ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
Published by:Kavya V
First published: