ತುಮಕೂರು (ಅ. 22): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former Chief Minister Siddaramaiah) ಆಪ್ತರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಸಿದ್ದು ಆಪ್ತರಾಗಿರೋ ವೈ ಸಿ ಸಿದ್ದರಾಮಯ್ಯ ಹಾಗೂ ಬಸವರಾಜ್ (Basavaraj) ಎನ್ನುವವರು ವಿರುದ್ಧ 1.5 ಕೋಟಿ ರೂ. ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕಾಗಿ ನ್ಯಾಯಬೇಕೆಂದು ಬೆಂಗಳೂರಿನ ಅಂತರಾಜ್ ಕುಟುಂಬ (Family) ತುಮಕೂರಿನ ಶಿರಾ ಗೇಟ್ನ ಹೋಟೆಲ್ (Hotel) ಮುಂದೆ ಧರಣಿ ಕುಳಿತಿದ್ದಾರೆ.
1.5 ಕೋಟಿ ರೂ ವಂಚನೆ ಆರೋಪ
ವೈ.ಸಿ ಸಿದ್ದರಾಮಯ್ಯರ ಸಂಬಂಧಿಯೂ ಆಗಿರುವ ಬಸವರಾಜ್ ಸೇರಿದ ಬೀ ಹೈವ್ ಗ್ರಾಂಡ್ ತ್ರಿಸ್ಟಾರ್ ಹೋಟೆಲ್ ಬಾಡಿಗೆ ಪಡೆದಿದ್ದ ಅಂತರಾಜ್, ಮುಂಗಡವಾಗಿ 50 ಲಕ್ಷ ರೂ. ನೀಡಿ ಹೋಟೆಲ್ ಬಾಡಿಗೆಗೆ ಪಡೆದಿದ್ದರು. ಇಂಟೀರಿಯರ್ ಡಿಸೈನ್, ಪೀಠೋಪಕರಣಕ್ಕೆ 1 ಕೋಟಿ ರೂ. ಖರ್ಚು ಮಾಡಿದ್ದರು. ಆದ್ರೆ, ಹೋಟೆಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ನನ್ನು ಅಲ್ಲಿಂದ ಹೊರಹಾಕಿದ್ದಾರಂತೆ. ಅಲ್ಲದೇ ಹಣವೂ ನೀಡದೆ, ಹೋಟೆಲ್ ಓಪನ್ಗೂ ಅವಕಾಶ ನೀಡದೆ ವಂಚನೆ ಮಾಡಿದ್ದಾರೆ ಎಂದು ಅಂತರಾಜ್ ಅವರು ವೈ.ಸಿ ಸಿದ್ದರಾಮಯ್ಯ, ಬಸವರಾಜ್ ವಿರುದ್ಧ ಆರೋಪಿಸಿದ್ದಾರೆ.
ಹೊಟೇಲ್ ನಡೆಸಲು ಅನುಮತಿ
ಬಿ ಹೈವ್ ಹೋಟೆಲ್ ನನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಿದ್ರು. ಈಗ ಅತ್ತ ದುಡ್ಡು ಕೊಡದೇ ಇತ್ತ ಹೊಟೇಲ್ ನಡೆಸಲು ಅನುಮತಿ ಕೊಡದೇ ವಂಚನೆ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರು ದುರುಪಯೋಗ ಮಾಡಿಕೊಂಡು ಆವಾಜ್ ಹಾಕುತ್ತಿದ್ದಾರೆ ಎಂದು ಅಂತರಾಜ್ ಆರೋಪಿಸಿದ್ದಾರೆ.
ಇದನ್ನೂ ಓದಿ: Siddaramaiah: ಸಚಿವರಾಗೋಕೆ ಸೋಮಣ್ಣ ಅನ್ಫಿಟ್; ಹೆಣ್ಣು ಮಗಳ ಮೇಲೆ ಕೈ ಮಾಡೋಕಾ ಅಧಿಕಾರ ಕೊಟ್ಟಿದ್ದು?-ಸಿದ್ದರಾಮಯ್ಯ
ಅಂತರಾಜ್ ಒಂದು ಡುಪ್ಲೆಕ್ಸ್ ಮನೆ, ಇನ್ನೊಂದು ಮೂರು ಅಂತಸ್ತಿನ ಮನೆ. ಎಕ್ಸ್ ಯು ವಿ ಕಾರು, ಇನ್ನೋವಾ ಕಾರು, ರಾಯಲ್ ಎನ್ ಫಿಲ್ಡ್ ಬೈಕ್ ಎಲ್ಲವೂ ಮಾರಿ ಈಗ ಬೀದಿಗೆ ಬಂದಿದ್ದಾರೆ. ಕುಟುಂಬ ಸಮೇತ ಬೀದಿಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದಾರೆ. ತುಮಕೂರಿನ ಶಿರಾ ಗೇಟ್ ಬಳಿಯಿರುವ ಹೋಟೆಲ್ ಎದುರಿನ ರಸ್ತೆಯಲ್ಲಿ ಅಂತರಾಜ್ ತಮ್ಮ ಕುಟುಂಬ ಸಮೇತ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಬೆಂಗಳೂರು ವಿವಿ ವಿದ್ಯಾರ್ಥಿನಿ ಶಿಲ್ಪಾ ಸಾವು
ಕಳೆದ 14 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ(Bangalore university Student) ಶಿಲ್ಪಾ ಇಂದು ಮೃತರಾಗಿದ್ದಾರೆ. ಬಸ್ ಹತ್ತುವಾಗ ಆಯತಪ್ಪಿ ಬಿದ್ದಿದ್ದ ಶಿಲ್ಪಾ ಮೇಲೆ ಬಿಎಂಟಿಸಿ ಬಸ್ (BMTC Bus) ಹರಿದಿತ್ತು. ಅಕ್ಟೋಬರ್ 11ರಂದು ಅಪಘಾತ (Accident) ನಡೆದಿತ್ತು. ಈ ಘಟನೆ ಬಳಿಕ ರಸ್ತೆಗೆ ಇಳಿದಿದ್ದ ವಿವಿ ವಿದ್ಯಾರ್ಥಿಗಳು (Bangalore university Student Protest) ಖಾಸಗಿ ಬಸ್ (Private Bus) ಓಟಾಟಕ್ಕೆ ಬ್ರೇಕ್ ಹಾಕಬೇಕೆಂದು ದೊಡ್ಡ ಪ್ರತಿಭಟನೆ ಕೂಡಾ ನಡೆಸಿದ್ದರು. ಈಗಲೂ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಶಿಲ್ಪಾ ಆರೋಗ್ಯ ಚೇತರಿಕೆಗಾಗಿ ಸಾವಿರಾರರು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾ ಮೃತರಾಗಿದ್ದಾರೆ.
ಇದನ್ನೂ ಓದಿ: Rahul-Ramya: ಭಾರತ್ ಜೋಡೋ ಯಾತ್ರೆಗೆ ಪದ್ಮಾವತಿ ಎಂಟ್ರಿ; ರಾಹುಲ್ ಗಾಂಧಿಗೆ ರಮ್ಯಾ ಸಾಥ್
ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಶಿಲ್ಪಾ ಶ್ರೀಧರ್ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಳೆದ 14 ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಅಪಘಾತದಲ್ಲಿ ಶಿಲ್ಪಾ ಸೊಂಟದ ಕೆಳಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್ ಆಸ್ಪತ್ರೆಗೆ ಶಿಲ್ಪಾಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ