ಸರ್ಕಾರದ ನಿರ್ಲಕ್ಷ್ಯದಿಂದ ನವೀನ್​ ಸಾವು ಎಂದ Siddaramaiah; ರಕ್ಷಣಾ ಕಾರ್ಯ ಚುರುಕಿಗೆ HDK ಒತ್ತಾಯ

ಯುದ್ಧ ಆರಂಭಕ್ಕೂ ಮುನ್ನವೇ ರಷ್ಯಾ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವಂತೆ ಎಚ್ಚರಿಕೆ ನೀಡಿತ್ತು. ಆದರೆ, ಸರ್ಕಾರದ ನಿರ್ಲಕ್ಷ್ಯಕ್ಕೆ ನವೀನ್​ ಬೆಲೆತರುವಂತೆ ಆಗಿದೆ

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

 • Share this:
  ಉಕ್ರೇನ್​ನಲ್ಲಿ ನಡೆದ ಶೆಲ್​ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ನವೀನ ಗ್ಯಾನಗೌಡರ (22) ಸಾವನ್ನಪ್ಪಿದ್ದಾರೆ. ಈ ಸಾವಿನ ಸುದ್ದಿ ಇಡೀ ಕರ್ನಾಟಕದಲ್ಲಿ ಶೋಕ ಮೂಡುವಂತೆ ಮಾಡಿದೆ. ಮಗನನ್ನು ಕಳೆದುಕೊಂಡ ನವೀನ್ ಅವರ ತಂದೆ ಶೇಖರಗೌಡ ಅವರಿಗೆ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಧುರೀಣ ನಾಯಕ ಬಿಎಸ್​ ಯಡಿಯೂರಪ್ಪ ಕರೆ ಮಾಡಿ ಸಾಂತ್ವನ ತಿಳಿಸಿದ್ದಾರೆ. ಜೊತೆಗೆ ಪಾರ್ಥಿವ ಶರೀರವನ್ನು ತರುವ ಎಲ್ಲ ಯತ್ನ ನಡೆಯುತ್ತಿದೆ. ಈ ಸಂಬಂಧ ಕೇಂದ್ರ ವಿದೇಶಾಂಗ ಸಚಿವಾಲಯದ ಜೊತೆ ಮಾತನಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ

  ಸರ್ಕಾರದ ನಿರ್ಲಕ್ಷ್ಯ
  ಇನ್ನು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಕೂಡ ನವೀನ್​ ಸಾವಿಗೆ ಸಂತಾಪ ಸೂಪಿಸಿದ್ದಾರೆ. ಹಲವು ಕನಸುಗಳನ್ನು ಹೊತ್ತ ಯುವ ವೈದ್ಯಕೀಯ ವಿದ್ಯಾರ್ಥಿಯನ್ನು ಹೊತ್ತ ಆತ ಪ್ರಯಣಕ್ಕೆ ಬಿಜೆಪಿ ಇತಿಶ್ರೀ ಹಾಡಿದೆ. ಯುದ್ಧ ಆರಂಭಕ್ಕೂ ಮುನ್ನವೇ ರಷ್ಯಾ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವಂತೆ ಎಚ್ಚರಿಕೆ ನೀಡಿತ್ತು. ಆದರೆ, ಸರ್ಕಾರದ ನಿರ್ಲಕ್ಷ್ಯಕ್ಕೆ ನವೀನ್​ ಬೆಲೆತರುವಂತೆ ಆಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಇದೇ ವೇಳೆ ವಿದೇಶಾಂಗ ಇಲಾಖೆ ಮತ್ತು ಪ್ರಧಾನಿಗಳು ವಿವಿಧ ದೇಶಗಳೊಂದಿಗೆ ತಮ್ಮ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಲ್ಲಾ ಭಾರತೀಯರ ಸುರಕ್ಷತೆಗಾಗಿ ಎಲ್ಲಾ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾಗರಿಕರ ಮೇಲಿನ ದಾಳಿಯು ಗಂಭೀರ ಕಳವಳಕಾರಿಯಾಗಿದೆ ಎಂದಿದ್ದಾರೆ

  ಶಿವರಾತ್ರಿಯ ದಿನವೇ ಬರಸಿಡಿಲು ಎಂದ ಎಚ್​ಡಿಕೆ
  ರಷ್ಯಾ ದಾಳಿಯಿಂದ ಕನ್ನಡಿಗ ವಿದ್ಯಾರ್ಥಿ ಸಾವನ್ನಪ್ಪಿರುವ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ನವೀನ್‌ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: ಮೃತ Naveen ಕುಟುಂಬಕ್ಕೆ CM ಸಾಂತ್ವನ; ಬೆಳಗ್ಗೆ ಅಷ್ಟೇ ಮಗ ಮಾತನಾಡಿದ್ದ ಎಂದು ಕಣ್ಣೀರಿಟ್ಟ ತಂದೆ

  ಭಾರತದಲ್ಲಿ ದುಬಾರಿ ವೈದ್ಯ ಶಿಕ್ಷಣ ಸಾಧ್ಯವಾಗದೇ ವೈದ್ಯನಾಗಬೇಕು ಎಂಬ ಕನಸು ಹೊತ್ತು ನವೀನ್  ಅಲ್ಲಿಗೆ ಹೋಗಿದ್ದರು. ಯುದ್ಧವು ಅವರ ಕನಸನ್ನು ನುಚ್ಚುನೂರು ಮಾಡಿದೆ. ಇಂಥ ಅನೇಕ ವಿದ್ಯಾರ್ಥಿಗಳು ಇನ್ನೂ  ಖಾರ್ಕೀವ್ ನಗರದಲ್ಲೇ ಸಿಲುಕೊಂಡಿದ್ದಾರೆ ಅವರ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ
  ಶೆಲ್‌ ದಾಳಿಗೆ ತುತ್ತಾಗುವ ಮುನ್ನ 2 ಸಲ ತಮ್ಮ ಪೋಷಕರಿಗೆ ನವೀನ್‌ ಕರೆ ಮಾಡಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿದ್ದಾರೆ ಎಂಬುದನ್ನು ನೆನೆದರೆ ಬಹಳ ನೋವಾಗುತ್ತದೆ.

  ಇದನ್ನೂ ಓದಿ: ಒಡಿಶಾದಲ್ಲಿದೆ ವಿಸ್ಮಯಕಾರಿ ಗುಪ್ತೇಶ್ವರ ಶಿವನ ದೇವಾಲಯ.. ಇಲ್ಲಿ ಪೂಜಿಸಿದ್ರೆ ಇಷ್ಟಾರ್ಥಗಳು ಸಿದ್ಧಿಸುತಂತೆ!

  ರಕ್ಷಣಾ ಕಾರ್ಯ ಚುರುಕುಗೊಳ್ಳಬೇಕು

  ಬಾಂಬ್‌, ಕ್ಷಿಪಣಿ, ಶೆಲ್‌ ಸ್ಫೋಟಗಳಿಂದ ಅವರೆಲ್ಲರೂ ಖಾರ್ಕೀವ್‌ ನಗರದಲ್ಲಿ ತತ್ತರಿಸುತ್ತಿದ್ದಾರೆ. ಮೊದಲೇ ಇಲ್ಲಿ ಸಿಲುಕಿರುವವರನ್ನು ರಕ್ಷಿಸಬೇಕಿತ್ತು
  ಕೇಂದ್ರ ಸರಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಬಿಡಬಾರದು ಎಂದರು

  ಏನು ಆಗುತ್ತಿದೆ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್​

  ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಕೂಡ ನವೀನ್​ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, ನಮ್ಮ ರಾಜ್ಯದ ಒಬ್ಬ ವಿದ್ಯಾರ್ಥಿಯೊಬ್ಬರ ಹತ್ಯೆಯಾಗಿದೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲಿಂದ ವಿದ್ಯಾರ್ಥಿಗಳನ್ನು ಕರೆತರಲು ನಿನ್ನೆ ನಾಲ್ಕು ಜನ ಕೇಂದ್ರ ಸಚಿವರನ್ನ ನೇಮಕ ಮಾಡಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು? ನಮ್ಮ ವಿದೇಶಾಂಗ ಸಚಿವಾಲಯ ಏನಾಗಿದೆ? ಮೋದಿ ಎಲ್ಲರನ್ನು ಕರೆತರ್ತಿನಿ ಅಂದಿದ್ದರು, ಈಗ ಏನಾಗಿದೆ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ
  Published by:Seema R
  First published: