Siddalinga Swamiji: ಉಕ್ರೇನ್‌ನಿಂದ ಬಂದ ರಾಜ್ಯದ ವಿದ್ಯಾರ್ಥಿಗಳ ನೆರವಿಗೆ ನಿಂತ ಸಿದ್ದಗಂಗಾ ಮಠ, ಎಲ್ಲರಿಗೂ ಉಚಿತ ಶಿಕ್ಷಣ ನೀಡಲು ಶ್ರೀಗಳ ನಿರ್ಧಾರ

ಉಕ್ರೇನ್‌ನಿಂದ ಹಿಂತಿರುಗಿದ ರಾಜ್ಯದ ಮೆಡಿಕಲ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲು ಸಿದ್ದಲಿಂಗ ಶ್ರೀಗಳು ನಿರ್ಧರಿಸಿದ್ದಾರೆ. ಸಿದ್ದಗಂಗಾ ಮಠ ನಡೆಸುತ್ತಿರುವ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ನೀಡುವುದಾಗಿ ಶ್ರೀಗಳು ಹೇಳಿದ್ದಾರೆ.

ತುಮಕೂರು ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ

ತುಮಕೂರು ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ

  • Share this:
ತುಮಕೂರು: ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಬರೋಬ್ಬರಿ 3 ತಿಂಗಳಿಂದ ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಲೇ ಇದೆ. ಉಕ್ರೇನ್‌ನ ಬಹುತೇಕ ಕಟ್ಟಡಗಳನ್ನು (Buildings) ನಾಶಗೊಳಿಸಿರುವ ರಷ್ಯಾ ಸೇನೆ (Russia Militery), ಸೇತುವೆ (Bridge), ರಸ್ತೆ (Road) ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಧ್ವಂಸ ಮಾಡಿದೆ. ಭೀಕರ ಯುದ್ಧದಿಂದಾಗಿ ಎರಡೂ ಕಡೆ ಅಪಾರ ಸಾವು-ನೋವು ಸಂಭವಿಸಿದೆ. ನಿರಂತರ ಯುದ್ಧದಿಂದಾಗಿ ಉಕ್ರೇನ್‌ನ ಲಕ್ಷಾಂತರ ಮಂದಿ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ (Destitute). ಇನ್ನು ಉಕ್ರೇನ್‌ನಲ್ಲಿ ವಿದ್ಯಾಭ್ಯಾಸಕ್ಕೆ (Education) ಹೋಗಿ ಅನೇಕ ಭಾರತೀಯ ವಿದ್ಯಾರ್ಥಿಗಳು (Indian Students) ಸಿಲುಕಿಕೊಂಡಿದ್ದರು. ಅದರಲ್ಲಿ ಇಬ್ಬರನ್ನು ಹೊರತು ಪಡಿಸಿ, ಉಳಿದವರನ್ನು ಕೇಂದ್ರ ಸರ್ಕಾರ (Central Government) ಸುರಕ್ಷಿತವಾಗಿ (Safe) ದೇಶಕ್ಕೆ ವಾಪಸ್ ಕರೆಸಿಕೊಂಡಿದೆ. ಇದೀಗ ಅಲ್ಲಿಂದ ಬಂದ ಮೆಡಿಕಲ್ ವಿದ್ಯಾರ್ಥಿಗಳಿಗೆ (Medical Students) ಮುಂದಿನ ಶಿಕ್ಷಣದ ಚಿಂತೆ ಶುರುವಾಗಿದೆ. ಇಂತಹ ವಿದ್ಯಾರ್ಥಿಗಳ ನೆರವಿಗೆ ತುಮಕೂರಿನ (Tumkur) ಸಿದ್ದಗಂಗಾ ಶ್ರೀಮಠ (Siddaganga Math) ಮುಂದೆ ಬಂದಿದೆ.

 ವಿದ್ಯಾರ್ಥಿಗಳ ನೆರವಿಗೆ ನಿಂತ ಸಿದ್ಧಲಿಂಗ ಸ್ವಾಮೀಜಿ

ಉಕ್ರೇನ್‌ನಿಂದ ವಾಪಸ್ಸಾಗಿ ಮುಂದಿನ ವಿದ್ಯಾಭ್ಯಾಸದ ಬಗ್ಗೆ ತಲೆ ಕೆಡಿಸಿಕೊಂಡಿರುವ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳ ನೆರವಿಗೆ ತುಮಕೂರಿನ ಸಿದ್ದಗಂಗಾ ಮಠ ಮುಂದೆ ಬಂದಿದೆ. ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.

ಉಚಿತ ವೈದ್ಯಕೀಯ ಶಿಕ್ಷಣ ನೀಡಲು ನಿರ್ಧಾರ

ಉಕ್ರೇನ್‌ನಿಂದ ಹಿಂತಿರುಗಿದ ರಾಜ್ಯದ ಮೆಡಿಕಲ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲು ಸಿದ್ದಲಿಂಗ ಶ್ರೀಗಳು ನಿರ್ಧರಿಸಿದ್ದಾರೆ. ಸಿದ್ದಗಂಗಾ ಮಠ ನಡೆಸುತ್ತಿರುವ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ನೀಡಲು ಶ್ರೀಗಳು ನಿರ್ಧರಿಸಿದ್ದಾರೆ. ಉಕ್ರೇನ್‌ನಲ್ಲಿ ಓದುತ್ತಿದ್ದ 13 ವಿದ್ಯಾರ್ಥಿಗಳಿಗೆ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡಲು ಸ್ವಾಮೀಜಿ ನಿರ್ಧರಿಸಿದ್ದಾರೆ. ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ, ಇದರ ಸದುಪಯೋಗ ಮಾಡಿಕೊಳ್ಳುವಂತೆ ಶ್ರೀಗಳು ಹೇಳಿದ್ದಾರೆ.

ಇದನ್ನೂ ಓದಿ: Rank Student ಉನ್ನತ ಶಿಕ್ಷಣಕ್ಕೆ ಅಡ್ಡಿಯಾಯ್ತು ಬಡತನ, ಸಹಾಯ ಹಸ್ತದ ನಿರೀಕ್ಷೆಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ

ಭವ್ಯ ಪರಂಪರೆಯ ಸಿದ್ದಗಂಗಾ ಮಠ

ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಕಾರ್ಯಕ್ಷೇತ್ರವಾಗಿದ್ದ ತುಮಕೂಯ್ರಿನ ಸಿದ್ದಗಂಗಾ ಮಠಕ್ಕೆ ಅದರದೇ ಆದ ಸುವರ್ಣ ಇತಿಹಾಸ ಇದೆ. 14ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ಸಿದ್ಧಗಂಗಾ ಮಠ  "ಶೂನ್ಯ ಸಿಂಹಾಸನ"ದ ಶ್ರೀ ಗೋಶಾಲ ಸಿದ್ಧೇಶ್ವರ ಸ್ವಾಮಿಜಿಯವರಿಂದ ಸ್ಥಾಪಿತವಾಗಿದೆ. ಗೋಸಲ ಸಿದ್ಧೇಶ್ವರ ಸ್ವಾಮಿಗಳು ಮಹಾನ್ ತಪಸ್ವಿಗಳಾಗಿದ್ದು ಅವರು ಕಲ್ಲು ಬಂಡೆಯೊಂದರಿಂದ ಗಂಗೋದ್ಭವ ಮಾಡಿದ್ದ ಕಾರಣ ಈ ಸ್ಥಳಕ್ಕೆ ಸಿದ್ದಗಂಗೆ ಎಂದು ಹೆಸರು ಬಂದಿದೆ.

ಅಸಂಖ್ಯಾತ ವಿದ್ಯಾರ್ಥಿಗಳ ಆಶ್ರಯ ತಾಣ

1917ರಲ್ಲಿ  ಶ್ರೀದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯ ಪ್ರಾರಂಭವಾಗಿತ್ತು.ಸುಮಾರು ಅರವತ್ತು ವಿದ್ಯಾರ್ಥಿಗಳೊಡನೆ ಪ್ರಾರಂಭವಾಗಿದ್ದ ಈ ವಿದ್ಯಾರ್ಥಿ ನಿಲಯ ಇಂದು ವಿವಿಧ ಜಾತಿ, ಮತಗಳ ಸುಮಾರು 10 ಸಾವಿರ ಮಕ್ಕಳು ಆಶ್ರಯ ಪಡೆದಿದ್ದಾರೆ. ಈ ಉಚಿತ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಕೋಮಿನ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ, ಊಟ ಸಹಿತ ಇಲ್ಲಿ ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ: School Fees: ರಾಜ್ಯದಲ್ಲಿ ಮತ್ತೆ ಶುರುವಾಗುತ್ತಾ ಸ್ಕೂಲ್ ಫೀಸ್‌ ಫೈಟ್? ಲಕ್ಷಾಂತರ ಪೋಷಕರ ಜೇಬಿಗೆ ಬೀಳುತ್ತಾ ಕತ್ತರಿ?

ಶ್ರೀಮಠದಿಂದ ಶಿಕ್ಷಣಕ್ಕೆ ಒತ್ತು

ಸಿದ್ದಗಂಗಾ ಮಠದಿಂದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕ ತರಬೇತಿ ಸಂಸ್ಥೆ, ಸಂಸ್ಕೃತ ಕಾಲೇಜು, ಕನ್ನಡ ಪಂಡಿತ ತರಗತಿ ವಿಭಾಗ, ದೈಹಿಕ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ, ಸಮನ್ವಯ ಶಿಕ್ಷಣ ಸಂಸ್ಥೆ, ದೈಹಿಕ ಶಿಕ್ಷಣ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ ಮಠದಿಂದ ನಡೆಯುತ್ತಿದೆ. ನಾಡಿನ ನಾನಾ ಭಾಗಗಳ ನಗರ, ಗ್ರಾಮೀಣ ಪ್ರದೇಶದಲ್ಲಿ ಮಠ ಸಾಕಷ್ಟು ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.
Published by:Annappa Achari
First published: