ಚೆನ್ನೈಗೆ ಸಿದ್ಧಗಂಗಾ ಶ್ರೀ; ಲಿವರ್ ಬೈಪಾಸ್ ಸರ್ಜರಿಗೆ ವ್ಯವಸ್ಥೆ

ತುಮಕೂರಿನಲ್ಲಿರುವ ಸಿದ್ದಗಂಗಾ ಹಳೆಮಠಕ್ಕೆ ಚೆನ್ನೈನ ವೈದ್ಯರ ತಂಡವೊಂದು ಆಗಮಿಸಿ ಶ್ರೀಗಳ ಆರೋಗ್ಯ ಪರೀಕ್ಷೆ ನಡೆಸುತ್ತಿದೆ. ಅವರು ಆರೋಗ್ಯವಾಗಿದ್ದು, ಸಂಪೂರ್ಣ ಗುಣಮುಖರಾಗಲು ಇಂದು ಚೆನ್ನೈಗೆ ಕರೆದುಕೊಂಡು ಹೋಗಲಾಗುವುದು.

Vijayasarthy SN | news18india
Updated:December 7, 2018, 3:22 PM IST
ಚೆನ್ನೈಗೆ ಸಿದ್ಧಗಂಗಾ ಶ್ರೀ; ಲಿವರ್ ಬೈಪಾಸ್ ಸರ್ಜರಿಗೆ ವ್ಯವಸ್ಥೆ
ಸಿದ್ದಗಂಗಾ ಮಠಧ ಶ್ರೀ ಶಿವಕುಮಾರ ಸ್ವಾಮೀಜಿ
Vijayasarthy SN | news18india
Updated: December 7, 2018, 3:22 PM IST
 ವಿಠಲ್ ಕುಮಾರ್, 

ತುಮಕೂರು (ಡಿ. 7): ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಕಾಣುತ್ತಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಶುಕ್ರವಾರ ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ವಿಶೇಷ ಏರ್​​ ಆ್ಯಂಬುಲೆನ್ಸ್​ನಲ್ಲಿ ಅವರನ್ನು ಕರೆದೊಯ್ಯಲಾಗಿದೆ. ಚೆನ್ನೈನ ಡಾ. ರೇಲಾ ಇನ್ಸ್​​ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್​ನಲ್ಲಿ ಸಿದ್ದಗಂಗಾ ಶ್ರೀಗಳಿಗೆ ಲಿವರ್ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲು ಉದ್ದೇಶಿಸಲಾಗಿದೆ.

ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಎನ್ನಲಾಗಿದೆ.  ಆದರೂ ಶ್ರೀಗಳು ಸಂಪೂರ್ಣವಾಗಿ ಗುಣಮುಖರಾಗಲು ಚೆನ್ನೈಗೆ ರವಾನೆ ಮಾಡಿ ಅಲ್ಲಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಯೋಜನೆ ಹಾಕಲಾಯಿತು.

ಚೆನ್ನೈನಿಂದ ನುರಿತ ಅರವಳಿಕೆ ತಜ್ಞ ಡಾ. ಎಲ್.ಎನ್. ಕುಮಾರ್ ನೇತೃತ್ವದಲ್ಲಿ ಮೂವರು ವೈದ್ಯರ ತಂಡವು ಗುರುವಾರ ಸಂಜೆ ತುಮಕೂರಿನಲ್ಲಿರುವ ಮಠಕ್ಕೆ ಬಂದು ಶ್ರೀಗಳ ಆರೋಗ್ಯವನ್ನು ಖುದ್ದಾಗಿ ಪರಿಶೀಲಿಸಿ, ನಂತರ ಚೆನ್ನೈಗೇ ಸ್ವಾಮೀಜಿ ಅವರನ್ನು ಶಿಫ್ಟ್ ಮಾಡಲು ನಿರ್ಧರಿಸಿತು.

ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ. ಪರಮೇಶ್ ಹಾಗೂ ಡಾ. ರವೀಂದ್ರ ಅವರು ಬುಧವಾರ ಬೆಳಗ್ಗೆ ಚೆನ್ನೈಗೆ ಹೋಗಿ ಅಲ್ಲಿನ ನುರಿತ ವೈದ್ಯರೊಂದಿಗೆ ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ನೀಡಿ ಸಮಾಲೋಚನೆ ನಡೆಸಿದ್ದರು. ಆ ಬಳಿಕವೇ, ಡಾ. ಎಲ್.ಎನ್. ಕುಮಾರ್ ಮತ್ತವರ ತಂಡವನ್ನು ತುಮಕೂರಿಗೆ ಕರೆತಂದು ಖುದ್ದಾಗಿ ಪರಿಶೀಲಿಸುವ ನಿರ್ಧಾರಕ್ಕೆ ಬರಲಾಯಿತು.

ಇದನ್ನೂ ಓದಿ: ಆಸ್ಪತ್ರೆಯಿಂದ ಸಿದ್ದಗಂಗಾ ಸ್ವಾಮೀಜಿ ಡಿಸ್ಚಾರ್ಜ್​; ಮಠದಲ್ಲಿ ವಿಶ್ರಾಂತಿಗೆ ವೈದ್ಯರ ಸೂಚನೆ

ರಾಜ್ಯ ಸರಕಾರ ಕೂಡ ಶತಾಯುಷಿ ಡಾ. ಶಿವಕುಮಾರ ಸ್ವಾಮಿಗಳ ಆರೋಗ್ಯದ ಬಗ್ಗೆ ನಿರಂತರವಾಗಿ ನಿಗಾ ಇಟ್ಟಿದೆ. ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶ್ರೀಗಳ ಆರೋಗ್ಯ ವಿಚಾರಿಸುತ್ತಿದ್ದಾರೆ. ವೈದ್ಯರು ಸಲಹೆ ನೀಡಿದಲ್ಲಿ ಚೆನ್ನೈಗೆ ಶಿಫ್ಟ್ ಮಾಡಲು ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಮಾಡಿರುವುದಾಗಿ ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ನಿನ್ನೆ ಮಾಹಿತಿ ನೀಡಿದ್ದರು..
Loading...

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ; ಎರಡು ಸ್ಟಂಟ್​ಗಳ ಬದಲಾವಣೆ

ಐದು ದಿನಗಳ ಹಿಂದೆ ಸಿದ್ದಗಂಗಾ ಮಠದ ಶ್ರೀಗಳಿಗೆ ಜ್ವರ ಮತ್ತು ರಕ್ತದ ಸೋಂಕುಂಟಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2-3 ದಿನಗಳ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಣೆಗೊಂಡು ಡಿಸ್ಚಾರ್ಜ್ ಮಾಡಲಾಯಿತು. 111 ವರ್ಷಗಳ ಶ್ರೀಗಳ ಯಕೃತ್ತಿನಲ್ಲಿ ಈ ಮೊದಲೇ 8 ಸ್ಟೆಂಟ್​ಗಳನ್ನ ಹಾಕಲಾಗಿದೆ. ಈಗ ಅವರ ಲಿವರ್​ಗೆ ಮತ್ತೊಂದು ಸ್ಟೆಂಟ್ ಅಳವಡಿಸಲು ಸಾಧ್ಯವಾಗುವುದಿಲ್ಲ. ಶ್ರಿಗಳಿಗೆ ಮತ್ತೊಮ್ಮೆ ಲಿವರ್ ಸೋಂಕು ಉಂಟಾದರೆ ಚಿಕಿತ್ಸೆ ನೀಡಲು ವೈದ್ಯರಿಗೆ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಲಿವರ್ ಬೈಪಾಸ್ ಸರ್ಜರಿ ಮಾಡುವುದು ಹಾಗೂ ಗಾಲ್ ಬ್ಲಾಡರ್ (ಪಿತ್ತ ಕೋಶ) ಅನ್ನೇ ತೆಗೆದುಹಾಕುವುದು ಸದ್ಯಕ್ಕೆ ಇರುವ ಏಕೈಕ ಮಾರ್ಗವೆಂಬ ಅಭಿಪ್ರಾಯಕ್ಕೆ ವೈದ್ಯರು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈಗೆ ಸ್ವಾಮೀಜಿಯನ್ನು ಕರೆದೊಯ್ಯಲಾಗುತ್ತಿದೆ.

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ