ನಡೆದಾಡುವ ದೇವರು ಕನಸು ನನಸು ಮಾಡಲು ಮುಂದಾದ ಸಿದ್ದಗಂಗಾ ಮಠ - ಜೈವಿಕ ಉದ್ಯಾನವನ ನಿರ್ಮಾಣ

ಹೌದು, ಶಿವಕುಮಾರ ಶ್ರೀಗಳ ಕನಸಿನ ಯೋಜನೆಗೆ ಬುಧವಾರ ಡಿಸಿಎಂ ಅಶ್ವಥ್ ನಾರಾಯಣ್, ಕಾನೂನು ಸಚಿವ ಮಾಧುಸ್ವಾಮಿ ಗಿಡನೆಡೆವುದರ ಮೂಲಕ ಚಾಲನೆ ನೀಡಿದ್ದಾರೆ. ಜೊತೆಗೆ ಕೇವಲ ಉದ್ಯಾನವನವಾಗಿರದೆ ಗಿಡಮರಗಳ ಪ್ರತ್ಯಕ್ಷತಾ ಸೆಂಟರ್ ಆಗಿ ಅಭಿವೃದ್ಧಿ ಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

news18-kannada
Updated:August 13, 2020, 9:41 AM IST
ನಡೆದಾಡುವ ದೇವರು ಕನಸು ನನಸು ಮಾಡಲು ಮುಂದಾದ ಸಿದ್ದಗಂಗಾ ಮಠ - ಜೈವಿಕ ಉದ್ಯಾನವನ ನಿರ್ಮಾಣ
ಸಿದ್ದಗಂಗಾ ಸ್ವಾಮೀಜಿ
  • Share this:
ತುಮಕೂರು(ಆ.13): ತ್ರಿವಿಧ ದಾಸೋಹದ ಮೂಲಕ ನಾಡಿನ ಮನ್ನಣೆ ಗಳಿಸಿದ್ದ ಸಿದ್ಧಗಂಗಾಮಠ ಈಗ ಪರಿಸರದ ಬಗ್ಗೆಯೂ ಅತೀವ ಕಾಳಜಿಯನ್ನ ಇಡೀ ನಾಡಿಗೆ ಸಾರುವಂತಹ ಯೋಜನೆಯೊಂದಕ್ಕೆ ಕೈ ಹಾಕಿದೆ. ಕೋವಿಡ್ ಸಮಯದಲ್ಲಿ ಆಯುರ್ವೇದ ಔಷಧೀಯ ಸಸ್ಯಗಳನ್ನ ಬೆಳೆಯಬೇಕೆನ್ನುವ ಮಹತ್ವದ ಉದ್ದೇಶ ಇಟ್ಟುಕೊಂಡು ತುಮಕೂರು ಗ್ರಾಮಾಂತರ ಭಾಗದಲ್ಲಿ ಬರೋಬ್ಬರಿ 8 ಎಕರೆ ಪ್ರದೇಶದಲ್ಲಿ ಜೈವಿಕ ವನ ನಿರ್ಮಾಣ ಮಾಡಲು ಮುಂದಾಗಿದೆ. ಆ ಮೂಲಕ ಶಿವಕುಮಾರ ಸ್ವಾಮೀಜಿಯವರು ಕಾಣುತ್ತಿದ್ದ ಕನಸು ಈಡೇರುತ್ತಿದೆ.

ನಡೆದಾಡುವ ದೇವರು ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಿದ್ಧಿಪುರುಷರು. ತಮ್ಮ ಜೀವನದ ಕೊನೆಯವರೆಗೂ ಸಂಸ್ಕೃತ ಆಯುರ್ವೇದದಂತಹ ತಮ್ಮ ಐತಿಹ್ಯ ವಿಚಾರಗಳ ಮಹತ್ವವನ್ನ ಸಾರುತ್ತಲೇ ಬಂದವರು. ತಮ್ಮ ಜೀವಿತದ ಅವಧಿಯವರೆಗೂ ಔಷಧೀಯ ಸಸ್ಯಗಳ ಬಗ್ಗೆ ಬಹಳ ಕಾಳಜಿ ಹೊಂದಿದ್ದ ಶ್ರೀಗಳು ಇದಕ್ಕಾಗಿ ಒಂದು ಜೈವಿಕ ವನವನ್ನ ನಿರ್ಮಾಣ ಮಾಡುವ ಕನಸು ಹೊಂದಿದ್ದರು.

ಈ ಕಾರ್ಯಕ್ಕಾಗಿ ತುಮಕೂರು ಗ್ರಾಮಾಂತರ ಭಾಗದ ಪಂಡಿತಹಳ್ಳಿ ಬಳಿ ಇರುವ ಬಸದಿ ಬೆಟ್ಟದ ಸಮೀಪ ಎಂಟೂವರೆ ಎಕರೆ ಪ್ರದೇಶವನ್ನೂ ಕೂಡ ಜೈವಿಕವನದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದರು. ಅವರ ಜೀವಿತಾವಧಿಯಲ್ಲಿ ಈ ಕಾರ್ಯ ಕೈಗೂಡಲಿಲ್ಲ. ಈಗ ಶ್ರೀಗಳು ಲಿಂಗೈಕ್ಯರಾದಮೇಲೆ ಅವರ ಆಸೆಯಂತೆ ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಸ್ವಾಮೀಜಿಯವರ ಕನಸು ನನಸು ಮಾಡಲಿಕ್ಕೆ ಹೊರಟಿದ್ದು, ಈಗ ಅಪಾರ ಗಿಡಮರಗಳನ್ನ ನಡೆಬೇಕೆಂದಿರುವ ಜೈವಿಕವನ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

ಹೌದು, ಶಿವಕುಮಾರ ಶ್ರೀಗಳ ಕನಸಿನ ಯೋಜನೆಗೆ ಬುಧವಾರ ಡಿಸಿಎಂ ಅಶ್ವಥ್ ನಾರಾಯಣ್, ಕಾನೂನು ಸಚಿವ ಮಾಧುಸ್ವಾಮಿ ಗಿಡನೆಡೆವುದರ ಮೂಲಕ ಚಾಲನೆ ನೀಡಿದ್ದಾರೆ. ಜೊತೆಗೆ ಕೇವಲ ಉದ್ಯಾನವನವಾಗಿರದೆ ಗಿಡಮರಗಳ ಪ್ರತ್ಯಕ್ಷತಾ ಸೆಂಟರ್ ಆಗಿ ಅಭಿವೃದ್ಧಿ ಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿದ್ಧಗಂಗಾ ತಾಂತ್ರಿಕ ಕಾಲೇಜು ಈ ಜೈವಿಕವನದ ಉಸ್ತುವಾರಿ ವಹಿಸಿಕೊಂಡಿದೆ. ಒಟ್ಟು ಎಂಟೂವರೆ ಎಕರೆ ಪ್ರದೇಶದಲ್ಲಿ ಸುಮಾರು 2 ಸಾವಿರ ರೀತಿಯ ವಿವಿಧ ಜಾತಿಯ ಗಿಡಮರಗಳು ಆಯುರ್ವೇದ ಸಸಿಗಳನ್ನ ಬೆಳೆಯುವ ಯೋಜನೆ ಇದಾಗಿದ್ದು, ರಕ್ತಚಂದನ ಶ್ರೀಗಂಧ ಆಲ ಬೀಟೆ ಹೊನ್ನೆ ರಾಮಪತ್ರೆ ಸಾರ ಅಶೋಕ ಕಡಲಿ ದಾಲ್ಚಿನ್ನಿ ಲವಂಗ ಸೇರಿದಂತೆ ಅನೇಕ ಸಸಿಗಳನ್ನ ಬೆಳಸಲಾಗುತ್ತಿದೆ.

ಜೊತೆಗೆ ಆಯುರ್ವೇದ ಸಸ್ಯಗಳ ಕುರಿತು ಅಧ್ಯಯನ ಕೂಡ ವಿದ್ಯಾರ್ಥಿಗಳು ಇಲ್ಲಿ ನಡೆಸಲಿದ್ದು ಪ್ರಸ್ತುತ ಆಯುರ್ವೇದಕ್ಕೆ ಮಹತ್ವ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪರಿಸರಾಸಕ್ತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನ ಯೋಗ್ಯವನ್ನಾಗಿ ಮಾಡುವ ಯೋಜನೆ ಹೊಂದಿದೆ. ಅಮೂಲ್ಯ ಮರಗಳನ್ನು ಕೂಡ ಬೆಳೆಸಿ ಪರಿಸರ ರಕ್ಷಣೆಯನ್ನೂ ಕೂಡ ಮಾಡುವ ಮಹತ್ವಾಕಾಂಕ್ಷೆ ಮಠ ಹಾಗೂ ಕಾಲೇಜು ಹೊಂದಿದೆ.ಇದನ್ನೂ ಓದಿ: PUC Admission 2020: ಇಂದಿನಿಂದ ಕರ್ನಾಟಕದಲ್ಲಿ ಪ್ರಥಮ ಪಿಯುಸಿಗೆ ಅಡ್ಮಿಷನ್​ ಆರಂಭ

ಒಟ್ಟಾರೆ ತುಮಕೂರಿನ ಅಮೂಲ್ಯ ಪ್ರಾಕೃತಿಕ ಸಂಪತ್ತಿನ ಸಾಕ್ಷಿಕೇಂದ್ರವಾಗಿ.. ಆಯುರ್ವೇದ ಆಧ್ಯಯನ ಕೇಂದ್ರವಾಗಿ ಶಿವಕುಮಾರ ಸ್ವಾಮೀಜಿಯವರ ಕನಸಿಗೆ ಗಿಡನೆಟ್ಟು ನೀರೆರೆಯುವ ಜೈವಿಕ ಉದ್ಯಾನವನಕ್ಕೆ ಚಾಲನೆ ದೊರೆತಿದ್ದು ತ್ರಿವಿಧ ದಾಸೋಹದ ಮೂಲಕ ಹೆಸರಾಗಿದ್ದ ಸಿದ್ಧಗಂಗಾ ಮುಂದೊಂದು ದಿನ ಜೈವಿಕ ಸಸ್ಯಕ್ಷೇತ್ರಗಳ ಅಧ್ಯಯನಕ್ಕೆ ಶಾಶ್ವತ ಕೊಡಗೆ ನೀಡಲಿದೆ.
Published by: Ganesh Nachikethu
First published: August 13, 2020, 7:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading