‘ತಮ್ಮ ಅಧಿಕಾರ ಅವಧಿಯಲ್ಲಿ ಸಿಎಂ ಯಡಿಯೂರಪ್ಪ ಉತ್ತಮ ಸೇವೆ ಮಾಡಿದ್ಧಾರೆ‘ - ಸಿದ್ದಲಿಂಗ ಮಹಾಸ್ವಾಮಿಗಳು

ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸಚಿವರು ಇಲ್ಲದಿದ್ದರೂ ನೆರೆ ಹಾವಳಿ ಸೇರಿದಂತೆ ಹಲವು ವಿಚಾರದಲ್ಲಿ ಸಿಎಂ ಏಕಾಂಗಿಯಾಗಿ ಓಡಾಡಿದ್ರು. ರಾಜ್ಯದ ಎಲ್ಲಾ ಕಡೆ ಒಬ್ಬರೇ ಸಂಚಾರ ಮಾಡಿದ್ದೂ ನಿಜಕ್ಕೂ ಉತ್ತಮ ಸೇವೆ ಅಂದರು ಸಿದ್ದಲಿಂಗ ಮಹಾಸ್ವಾಮಿಗಳು.

ಸಿದ್ದಲಿಂಗ ಮಹಾಸ್ವಾಮಿಗಳು

ಸಿದ್ದಲಿಂಗ ಮಹಾಸ್ವಾಮಿಗಳು

  • Share this:
ಬೆಂಗಳೂರು(ಸೆ.07): ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಯಾಣ ನಗರದ ಮೂಡಲಪಾಳ್ಯದಲ್ಲಿ ಇಂದು ಬಿಬಿಎಂಪಿ ವತಿಯಿಂದ  ಪರಮಪೂಜ್ಯ ಡಾ: ಶ್ರೀ ಶಿವಕುಮಾಸ್ವಾಮಿರವರ ಪುತ್ಥಳಿಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ಅನಾವರಣ ಮಾಡಿದರು. ಜತೆಗೆ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಮತ್ತು ಇ ಗ್ರಂಥಾಲಯದ ನೂತನ  ಕಟ್ಟಡವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು, ಸಚಿವರಾದ ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ಆರ್. ಅಶೋಕ್, ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ,  ಶಾಸಕ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದ ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ರಾಜ್ಯದಲ್ಲಿ ಖಜಾನೆ ಖಾಲಿಯಾದ್ರೂ ನೀರಿನ ಖಜಾನೆ ಖಾಲಿ ಆಗಿಲ್ಲ. ರಾಜ್ಯದಲ್ಲಿ ಹೆಚ್ಚು ಮಳೆ ಆಗ್ತಾಯಿದೆ. ಚೆನ್ನಾಗಿ ಮಳೆಯಾಗಿದ್ರೆ ಜನರು ಬೇಸಾಯ ಸೇರಿದಂತೆ ಇತರ ಕೆಲಸ ಮಾಡಲು ಅನುಕೂಲವಾಗುತ್ತೆ. ಸಿಎಂ ಯಡಿಯೂರಪ್ಪ ರಾಜ್ಯದ ಸಿಎಂ ಆದ ಸಂದರ್ಭಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಎಂದು ಸಿದ್ದಗಂಗಾ ಶ್ರೀಗಳು ಹೊಗಳಿದ್ರು. ಇಷ್ಟೇ ಅಲ್ಲದೇ ಕೊರೋನಾ ಸೊಂಕು ನಿರ್ವಹಣೆಯನ್ನು ಯಡಿಯೂರಪ್ಪ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸಚಿವರು ಇಲ್ಲದಿದ್ದರೂ ನೆರೆ ಹಾವಳಿ ಸೇರಿದಂತೆ ಹಲವು ವಿಚಾರದಲ್ಲಿ ಸಿಎಂ ಏಕಾಂಗಿಯಾಗಿ ಓಡಾಡಿದ್ರು. ರಾಜ್ಯದ ಎಲ್ಲಾ ಕಡೆ ಒಬ್ಬರೇ  ಸಂಚಾರ ಮಾಡಿದ್ದೂ ನಿಜಕ್ಕೂ ಉತ್ತಮ ಸೇವೆ ಅಂದರು.

ವಿ. ಸೋಮಣ್ಣನವರು ವಸತಿ ಸಚಿವರಾದ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ಗೋವಿಂದರಾಜನಗರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ. ಯಾವುದೇ ಕೆಲಸ ಕೊಟ್ರು ಸೋಮಣ್ಣ ಜಾಣ್ಮೆಯಿಂದ ನಿರ್ವಹಣೆ ಮಾಡುತ್ತಾರೆ ಎಂದರು.

ಸಿಎಂ ಜೊತೆ ಸದಾ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರ್​​. ಅಶೋಕ್, ವಿ. ಸೋಮಣ್ಣ ಇರ್ತಾರೆ.  ಇನ್ನು . ಸಚಿವ ಆರ್ ಅಶೋಕ್ ಅವರು  ಸಿಎಂ ಜೊತೆ ಇದ್ರೆ ಒಳ್ಳೆಯ ದಂಡನಾಯಕನ ಥರ ಕಾಣ್ತಾರೆ ಅಂತ ಹೇಳಿದ್ರು.

ಇದನ್ನೂ ಓದಿ: Drug Mafia: ‘ರಾಗಿಣಿ, ಜಮೀರ್​​ ಯಾರೇ ಆಗಲೀ ಡ್ರಗ್ಸ್ ಕೇಸಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ‘ - ಸಿದ್ದರಾಮಯ್ಯ ಆಗ್ರಹ

ಸೋಮಣ್ಣನವರು ಹೇಳಿದಂತೆ ರಾಜ್ಯಕ್ಕೆ  ಎರಡು ಕಣ್ಣುಗಳು ಸಿದ್ದಗಂಗಾ ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳು. ಅವರ ಮಾರ್ಗದರ್ಶನದಲ್ಲಿ ರಾಜ್ಯ ಮುದುವರೆಯಲಿದೆ. ಜತೆಗೆ ಜೀವನದಲ್ಲಿ ಸರಳವಾಗಿ ಬದುಕಬೇಕು ಎಂಬ ಪಾಠವನ್ನು ಕೊರೋನಾ ಹೇಳಿಕೊಟ್ಟಿದೆ ಅಂತ ಸಿದ್ದಗಂಗಾ ಮಠದ ಶ್ರೀಗಳು ತಿಳಿಸಿದರು.
Published by:Ganesh Nachikethu
First published: