ತುಮಕೂರು: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು (Siddalinga Swamiji) ತುಮಕೂರಿನ (Tumakuru) ಮತಗಟ್ಟೆ ಸಂಖ್ಯೆ 116ರಲ್ಲಿ ಮತದಾನ ಚಲಾಯಿಸಿದರು. 116ರಲ್ಲಿ ಮೊದಲಿಗರಾಗಿ ಸ್ವಾಮೀಜಿಗಳು ಮತ ಹಾಕಿದರು. ಮತದಾನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಪ್ರಮುಖವಾದ ಮಹತ್ವವಿದೆ. ಹಾಗಾಗಿ 18 ವರ್ಷ ತುಂಬಿದ ಎಲ್ಲರೂ ಮತದಾನ (Voting) ಮಾಡಬೇಕೆಂದು ಕರೆ ನೀಡಿದರು. ಮನೆಯಲ್ಲಿ ಕುಳಿತುಕೊಳ್ಳದೇ ಮತಗಟ್ಟೆಗೆ ಬಂದು ಯಾವುದೇ ಆಮಿಷಕ್ಕೆ ಒಳಗಾಗದೇ ನ್ಯಾಯಯುತವಾಗಿ ವೋಟ್ ಹಾಕಬೇಕು ಎಂದು ಹೇಳಿದರು.
ಮತದಾನ ಮಾಡಲು ಜನರೇ ಜಾಗೃತರಾಗಿರಬೇಕು. ಒಂದು ಮತಕ್ಕೆ ಕೋಟಿ ನೀಡಿದರೂ ಸಾಲದು. ಹಾಗಾಗಿ ಯಾವುದೇ ಅಮಿಷಕ್ಕೆ ಒಳಗಾಗದೇ ಗುಪ್ತವಾಗಿ ವೋಟ್ ಮಾಡಬೇಕು ಎಂದು ಹೇಳಿದರು.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನ ಮತದಾನ
ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮತದಾನ ಮಾಡಿದ್ದು, ಬೆಳಗ್ಗೆ ಕುಟುಂಬದ ಜೊತೆ ಬಂದು ಮತಚಲಾಯಿಸಿದ್ದಾರೆ. ಮತದಾನದ ನಂತ್ರ ಸೆಲ್ಫಿ ಬೂತ್ ನಲ್ಲಿ ಸೆಲ್ಫಿ ತೆಗೆದುಕೊಂಡ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಇದನ್ನೂ ಓದಿ: Karnataka Election 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ
ನಿರ್ಮಲಾ ಸೀತಾರಾಮನ್ ಮತದಾನ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ ಚಲಾಯಿಸಲು ಆಗಮಿಸಿದ್ದು, ಜಯನಗರ ಬಿಇಎಸ್ ಕಾಲೇಜಿಗೆ ಕುಟುಂಬದ ಸಮೇತರಾಗಿ ಆಗಮಿಸಿದ್ದಾರೆ. ಬಸವೇಶ್ವರ ನಗರದ ವಿಎಲ್ ಎಸ್ ಶಾಲೆಗೆ ಆಗಮಿಸಿ ಮತದಾನ ಮಾಡಿದ ಸುರೇಶ್ ಕುಮಾರ್. ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ