ಅರ್ಜುನ್ ಸರ್ಜಾ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧ ಎಂದ ನಟಿ ಶ್ರುತಿ ಹರಿಹರನ್

HR Ramesh | news18
Updated:October 21, 2018, 5:31 PM IST
ಅರ್ಜುನ್ ಸರ್ಜಾ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧ ಎಂದ ನಟಿ ಶ್ರುತಿ ಹರಿಹರನ್
  • Advertorial
  • Last Updated: October 21, 2018, 5:31 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ಅ.21): ಅರ್ಜುನ್​ ಸರ್ಜಾ ವಿರುದ್ಧ #MeToo ಅಭಿಯಾನದಡಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್​ ಅವರು ಇಂದು ನಟ ಚೇತನ್​ ಹಾಗೂ ಕವಿತಾ ಲಂಕೇಶ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ, ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು. ಅಲ್ಲದೇ, ಅರ್ಜುನ್ ಸರ್ಜಾ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.

ಅರ್ಜುನ್ ಸರ್ಜಾ ಅವರು ಈ ವಿಚಾರವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಶ್ರುತಿ ಹರಿಹರನ್, ಈ ಹಿಂದೆ ಇದಕ್ಕಿಂತಲೂ ಹೆಚ್ಚಿನ ಶೋಷಣೆ ಅನುಭವಿಸಿದ ಮಹಿಳೆಗೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಗುರಿ. ಅದೇ ಉದ್ದೇಶದಿಂದ ಧೈರ್ಯವಾಗಿ ನಾನು ಮುಂದೆ ಬಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ. ನಾನು ಮಾಡಿರುವ ಆರೋಪಕ್ಕೆ ಕಾನೂನಿನ ಮುಂದೆ ಸಾಕ್ಷ್ಯಗಳನ್ನು ಒದಗಿಸುತ್ತೇನೆ ಎಂದರು.

ವಿಸ್ಮಯ ಸಿನಿಮಾದ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ನನ್ನನ್ನು ಊಟಕ್ಕೆ ಕರೆಯುತ್ತಿದ್ದರು, ಅನುಚಿತವಾಗಿ ನಡೆದುಕೊಂಡಿದ್ದರು ಎಂಬುದನ್ನು ಶ್ರುತಿ ಮತ್ತೆ ಹೇಳಿದರು.

ಚಿತ್ರದ ಬಿಡುಗಡೆ ವೇಳೆ ಅರ್ಜುನ್ ಸರ್ಜಾ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುವ ಆಸೆ ಇದೆ ಎಂದು ನೀವೇ ಹೇಳಿದ್ದಿರಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಹುಶಃ ಆ ಸಮಯದಲ್ಲಿ ನಾನು ಇನ್ನು ಆ ಶಾಕ್​ನಿಂದ ಹೊರಬಂದಿರಲಿಲ್ಲ. ಅಲ್ಲದೇ, ಆ ಸಮಯದಲ್ಲಿ ಇದನ್ನು ಬಹಿರಂಗವಾಗಿ ಹೇಳುವ ಧೈರ್ಯವೂ ನನಗೆ ಇರಲಿಲ್ಲ. ಹೀಗಾಗಿ ಅಂದು ನಾನು ಈ ವಿಚಾರವನ್ನು ಎಲ್ಲಿಯೂ ಹೇಳಿರಲಿಲ್ಲ ಎಂದರು.

ವಿಸ್ಮಯ ಸಿನಿಮಾ ಚಿತ್ರೀಕರಣದ ರಿಹರ್ಸಲ್ ವೇಳೆ ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದಾಗ ಅಂದೇ ನಾನು ಚಿತ್ರದ ನಿರ್ದೇಶಕರ ಗಮನಕ್ಕೆ ತಂದಿದ್ದೆ. ಅಲ್ಲದೇ, ಇನ್ನು ಮುಂದೆ ನಾನು ರಿಹರ್ಸಲ್​ಗೆ ಬರುವುದಿಲ್ಲ. ಶಾಟ್ಸ್​ಗಳಿಗಷ್ಟೇ ಬರುತ್ತೇನೆ. ಶೂಟ್​ ಮುಗಿದ ತಕ್ಷಣ ಕ್ಯಾರಾವಾನ್​ಗೆ ಕರೆದುಕೊಂಡೋಗಿ ಬಿಡಬೇಕು ಎಂಬುದನ್ನು ನಿರ್ದೇಶಕರಿಗೆ ಖಡಾಖಂಡಿತವಾಗಿ ಹೇಳಿದ್ದೆ. ಅರ್ಜುನ್​ ಸರ್ಜಾ ಪ್ರತಿಬಾರಿ ಊಟಕ್ಕೆ ಕರೆದಾಗಲೂ ನಾನು ನೋ ಎಂದೇ ಸ್ಟ್ರಾಂಗ್​ ಆಗಿ ಹೇಳುತ್ತಿದ್ದೆ ಎಂದು ಹೇಳಿದರು.

ಇದನ್ನು ಓದಿ: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮತ್ತೊಬ್ಬ ನಟಿಯಿಂದ #MeToo ಆರೋಪಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರು ಸಾಕಷ್ಟು ಲೈಂಗಿಕ ದೌರ್ಜನ್ಯ ಎದುರಿಸಿದ್ದಾರೆ. ಮುಂದೆ ಐಸಿಸಿ (ಇಂಟರ್ನಲ್​ ಕಂಪ್ಲೇಟ್ ಕಮಿಟಿ) ಮುಖಾಂತರ ಲೈಂಗಿಕ ದೌರ್ಜನ್ಯ, ಕಿರುಕುಳ, ಕಾನೂನು ಹೋರಾಟದ ತಿಳಿವಳಿಕೆ ಕುರಿತಾಗಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

First published:October 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ