• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Valentine's Day: ಪ್ರೇಮಿಗಳೇ ಎಚ್ಚರ ಎಚ್ಚರ, ವ್ಯಾಲೆಂಟೈನ್ಸ್ ಡೇ ಹೆಸರಲ್ಲಿ ಮೈಮರೆತರೆ ಹುಷಾರ್! ಪಾರ್ಕ್, ಹೋಟೆಲ್‌ಗಳ ಮೇಲೆ ಕಣ್ಣಿಡುತ್ತಂತೆ ಶ್ರೀರಾಮಸೇನೆ!

Valentine's Day: ಪ್ರೇಮಿಗಳೇ ಎಚ್ಚರ ಎಚ್ಚರ, ವ್ಯಾಲೆಂಟೈನ್ಸ್ ಡೇ ಹೆಸರಲ್ಲಿ ಮೈಮರೆತರೆ ಹುಷಾರ್! ಪಾರ್ಕ್, ಹೋಟೆಲ್‌ಗಳ ಮೇಲೆ ಕಣ್ಣಿಡುತ್ತಂತೆ ಶ್ರೀರಾಮಸೇನೆ!

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನೆ ಸಂಘಟನೆ ಪೊಲೀಸರ ಸಹಕಾರದೊಂದಿಗೆ ಪಾರ್ಕ್, ಪಾರ್ಲರ್, ಹೊಟೇಲ್ ಗಳಲ್ಲಿ ಗಮನ‌ವಿಡುತ್ತೇವೆ. ಡ್ರಗ್, ಸೆಕ್ಸ್ ಮಾಫಿಯಾವನ್ನು ತಡೆಯುವ ಪ್ರಕ್ರಿಯೆ ಮಾಡುತ್ತೇವೆ ಎಂದು ಮುತಾಲಿಕ್​ ಎಚ್ಚರಿಕೆ ನೀಡಿದ್ದಾರೆ.

 • News18 Kannada
 • 4-MIN READ
 • Last Updated :
 • Mangalore, India
 • Share this:

ಮಂಗಳೂರು: ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಾಚರಣೆಗೆ (Valentine's Day) ಶ್ರೀರಾಮ ಸೇನೆ (Shri Ram Sena) ವಿರೋಧ ವ್ಯಕ್ತಪಡಿಸಿದೆ. ಪಾರ್ಕ್, ಪಾರ್ಲರ್, ಹೋಟೆಲ್ (Hotel) ಮೇಲೆ ನಾಳೆ ಕಣ್ಣಿಡುವುದಾಗಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಪ್ರೇಮಿಗಳ‌ ದಿನಾಚರಣೆಯನ್ನು ವಿರೋಧಿಸುತ್ತಾ ಬಂದಿದ್ದೇವೆ. ಈ‌ ಬಾರಿಯೂ ಸಹ ಪೊಲೀಸರ (Police) ಸಹಕಾರದೊಂದಿಗೆ ರಾಜ್ಯಾದ್ಯಂತ ವಿರೋಧ ಮಾಡುತ್ತೇವೆ. ಪಾರ್ಕ್ (Park), ಪಾರ್ಲರ್, ಹೋಟೆಲ್​ಗಳಲ್ಲಿ ಗಮನ‌ ಇಡುತ್ತೇವೆ. ಪ್ರೇಮಿಗಳ (Love) ದಿನಾಚರಣೆ ಹೆಸರಿನಲ್ಲಿ ನಡೆಯುವ ಮಾಫಿಯಾವನ್ನು ತಡೆಯುವ ಪ್ರಕ್ರಿಯೆ ಮಾಡುತ್ತೇವೆ ಎಂದಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನು ಬದ್ಧವಾಗಿಯೇ ನಾವು ನಾಳೆ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತೇವೆ. ಈ‌ ಬಾರಿಯೂ ಸಹ ಪೊಲೀಸರ ಸಹಕಾರದೊಂದಿಗೆ ವಿರೋಧ ಮಾಡುತ್ತೇವೆ. ಇಡೀ ರಾಜ್ಯದಾದ್ಯಂತ ಶ್ರೀರಾಮ ಸೇನೆ ಸಂಘಟನೆ ಪೊಲೀಸರ ಸಹಕಾರದೊಂದಿಗೆ ಪಾರ್ಕ್, ಪಾರ್ಲರ್, ಹೊಟೇಲ್ ಗಳಲ್ಲಿ ಗಮನ‌ವಿಡುತ್ತೇವೆ. ಡ್ರಗ್, ಸೆಕ್ಸ್ ಮಾಫಿಯಾವನ್ನು ತಡೆಯುವ ಪ್ರಕ್ರಿಯೆ ಮಾಡುತ್ತೇವೆ. ಎಲ್ಲವನ್ನು ಕಾನೂನು ಬದ್ಧವಾಗಿಯೇ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Traffic Fines Discount: ವಾಹನ ಸವಾರರಿಗೆ ಗುಡ್​​ನ್ಯೂಸ್​​; ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಇನ್ನೂ ಇದೆ ಟೈಮ್!


ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿ, ಪ್ರವೀಣ್ ನೆಟ್ಟಾರು (Praveen Nettaru) ಕೊಲೆ ಆರೋಪಿ ಶಫಿ ಬೆಳ್ಳಾರೆ SDPI ಹೆಸರು ಘೋಷಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ್ದು, ಶಾಫಿ ಬೆಳ್ಳಾರೆ ಓರ್ವ ಕೊಲೆಗಡುಕ, ಸಂಚುಕೋರ, ಇವರ ಉದ್ದೇಶವೇ ಹಿಂದೂಗಳನ್ನು ಕೊಲೆ ಮಾಡೋದಾಗಿದೆ. ಇವನ ಸ್ಪರ್ಧೆಗೆ ಅವಕಾಶ ನೀಡಿದರೆ ಶ್ರೀರಾಮ ಸೇನೆ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.


ಕಾರ್ಕಳದಿಂದ ಸ್ಪರ್ಧೆ; ಮುತಾಲಿಕ್​ಗೆ ಸಚಿವ ಸುನೀಲ್​ ಕುಮಾರ್ ತಿರುಗೇಟು


ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಮುತಾಲಿಕ್​ ಘೋಷಣೆ ಮಾಡಿದ್ದಾರೆ. ಈ ನಡುವೆ ಕ್ಷೇತ್ರದಲ್ಲಿ ಪ್ರಚಾರ ಆರಂಭ ಮಾಡುವುದಾಗಿ ಹೇಳಿದ್ದ ಮುತಾಲಿಕ್ ಅವರು, ವೋಟಿನ ಜೊತೆ ನೂರರ ನೋಟು ಕೊಡಿ ಎಂದು ಜನತೆಗೆ ಮನವಿ ಮಾಡಿದ್ದರು. ಸದ್ಯ ಈ ಕುರಿತಂತೆ ತಿರುಗೇಟು ನೀಡಿರುವ ಸಚಿವ ಸುನೀಲ್​ ಕುಮಾರ್ (Sunil Kumar), ನೀವು ಆಮಿಷಕ್ಕೆ ಒಳಗಾಗಿಯೇ ಸ್ಪರ್ಧಿಸಲು ಬಯಸಿದ್ದೀರಿ. ನಮಗೆ ಈ ಬಗ್ಗೆ ಮೊದಲೇ ಅನುಮಾನವಿತ್ತು ಇದೀಗ ನಿಜವಾಗಿದೆ.
ಇದನ್ನೂ ಓದಿ: Siddaramaiah: ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲಮನ್ನಾ, ₹5 ಲಕ್ಷದವರೆಗೆ ಬಡ್ಡಿರಹಿತ ಸಾಲ; ಕೋಲಾರದಲ್ಲಿ ಸಿದ್ದರಾಮಯ್ಯ ಘೋಷಣೆ


ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನೀವು ಕಾರ್ಕಳದಿಂದ ಸ್ಪರ್ಧಿಸುವುದನ್ನು ನಾನು ಮೊದಲೇ ಸ್ವಾಗತಿಸಿದ್ದೆ. ಈಗಲೂ ನಿಮಗೆ ತನು ಮನ ಧನ ಸಹಾಯ ಮಾಡುವವರು ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ. ವೋಟು ನೋಟು ಹೇಳಿಕೆ ಮೂಲಕ ನಿಮ್ಮ ಸ್ಪರ್ಧೆಯ ಉದ್ದೇಶ ಬಯಲಾಗಿದೆ. ಈಗ ತನು ಮನ ಧನದ ಸಹಾಯವಿದೆ ಎಂದು ಹೇಳುತ್ತಿದ್ದೀರಿ. ನಿಮ್ಮ ಈ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ. ನಿಮ್ಮ ಸ್ಪರ್ಧೆಯ ಉದ್ದೇಶ ಹಿಂದುತ್ವದ ಹಿತ ಅಲ್ಲ, ಜನತೆಯ ಹಿತವಲ್ಲ. ತನು ಮನ ಧನ ನೋಟಿಗಾಗಿ ಅನ್ನೋದು ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು