Shri Krishna Janmashtami 2020: ಬೆಂಗಳೂರಿನ ಇಸ್ಕಾನ್​ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

36 ವರ್ಷದಿಂದ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮದಿನವನ್ನಾ ಆಚರಣೆ ಮಾಡುತ್ತಿದ್ದೆವು.  ಮೊದಲ ಬಾರಿಗೆ ಆನ್ ಲೈನ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಅಚರಣೆ ಮಾಡುತ್ತಿದ್ದೇವೆ.  ಇಲ್ಲಿ ಜನ್ಮಾಷ್ಟಮಿ ಮಾಡುತ್ತಿದ್ದಾಗ ಬೆಂಗಳೂರಿನ ಭಕ್ತರು ಮಾತ್ರ ಪಾಲ್ಗೊಳ್ಳುತ್ತಿದ್ದರು.  ಈ ಬಾರಿ ದೇಶ ವಿದೇಶದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. 

news18-kannada
Updated:August 11, 2020, 8:51 AM IST
Shri Krishna Janmashtami 2020: ಬೆಂಗಳೂರಿನ ಇಸ್ಕಾನ್​ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ
ಶ್ರೀ ಕೃಷ್ಣ ಜನ್ಮಾಷ್ಟಮಿ
  • Share this:
ಬೆಂಗಳೂರು(ಆ.11): ಇಂದು ಎಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಹೀಗಾಗಿ ಎಲ್ಲೆಡೆ ಬೆಣ್ಣೆ ಕೃಷ್ಣನಿಗೆ ವಿಶೇಷ ಪೂಜೆ ಆಚರಿಸಲಾಗುತ್ತಿದೆ. ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಸ್ಕಾನ್ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆಯುತ್ತಿದ್ದರು.  ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ. ಆದರೆ ಕೃಷ್ಣನಿಗೆ ಸಾಂಗವಾಗಿ ಪೂಜೆ ನಡೆಯುತ್ತಿದೆ.

ಮುಂಜಾನೆ 6.30 ಕ್ಕೆ ರಾಧಾಕೃಷ್ಣ ನೌಕಾವಿಹಾರ, 7.45 ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹಾ ಅಭಿಷೇಕ, 9.15 ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನಗಳು, ರಾತ್ರಿ 8ಕ್ಕೆ ಮತ್ತೊಮ್ಮೆ ಮಹಾಭಿಷೇಕ ನಡೆಯಲಿದೆ. ಇಂದು ರಾತ್ರಿ 10.30ರವರೆಗೂ ನಿರಂತರ ಕಾರ್ಯಕ್ರಮಗಳು ನಡೆಯಲಿವೆ.  ಭಕ್ತರು ಆನ್ ಲೈನ್ ಮೂಲಕ ಕೃಷ್ಣ ಪೂಜೆ ಮತ್ತು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶವಿದೆ. ನಿರಂತರವಾಗಿ ಭಜನೆ ಕೀರ್ತನೆಗಳು  ನಡೆಯುತ್ತಿವೆ.

ಹೇಮಾವತಿ ಹಿನ್ನೀರಿನಲ್ಲಿ ಮುಳುಗುತ್ತಿದೆ ತೇಲುವ ಟೈಟಾನಿಕ್...!

ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ಇಸ್ಕಾನ್ ದೇವಾಲಯ ಈ ಬಾರಿಯ ಜನ್ಮಾಷ್ಟಮಿ ದಿನ ಬೆರಳೆಣಿಕೆಯಷ್ಟು ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ಮಾತ್ರ ಉಪಸ್ಥಿತಿ ಇದ್ದರು.  ಹೂವಿನಿಂದ ಅಲಂಕೃತವಾದ ರಾಧಾಕೃಷ್ಣರ ಮೂರ್ತಿಯನ್ನು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿಯ ಸುತ್ತಲೂ ಉತ್ಸವ ನಡೆಸಲಾಗುತ್ತಿದೆ.  ಶ್ರೀಕೃಷ್ಣ, ರಾಧೆ, ಬಲರಾಮ ಮತ್ತು ಗೌರಂಗರ ಮೂರ್ತಿ ಎದುರು ಭಕ್ತಿಪರವಶರಾಗಿ ಭಜನೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

36 ವರ್ಷದಿಂದ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮದಿನವನ್ನಾ ಆಚರಣೆ ಮಾಡುತ್ತಿದ್ದೆವು.  ಮೊದಲ ಬಾರಿಗೆ ಆನ್ ಲೈನ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಅಚರಣೆ ಮಾಡುತ್ತಿದ್ದೇವೆ.  ಇಲ್ಲಿ ಜನ್ಮಾಷ್ಟಮಿ ಮಾಡುತ್ತಿದ್ದಾಗ ಬೆಂಗಳೂರಿನ ಭಕ್ತರು ಮಾತ್ರ ಪಾಲ್ಗೊಳ್ಳುತ್ತಿದ್ದರು.  ಈ ಬಾರಿ ದೇಶ ವಿದೇಶದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.  ಬೆಳಿಗ್ಗೆಯಿಂದ ಸಂಜೆವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಚರ್ಚಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ಅಭಿಷೇಕದ ನಂತರ ವಿಶೇಷ ಕಾರ್ಯಕ್ರಮಗಳು ಆನ್ ಲೈನ್ ಮೂಲಕ ನಡೆಯುತ್ತವೆ ಎಂದು ಇಸ್ಕಾನ್​ ದೇವಾಲಯದ ಸಂಪರ್ಕಾಧಿಕಾರಿ ನವೀನ ನೀರದ ದಾಸ ಹೇಳಿದ್ದಾರೆ.
Published by: Latha CG
First published: August 11, 2020, 8:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading