ಸೆ.14 ಕ್ಕೆ 88 ನೇ ಮಹಾಮಸ್ತಕಾಭಿಷೇಕಕ್ಕೆ ಸಂಪೂರ್ಣ ತೆರೆ

news18
Updated:August 28, 2018, 5:57 PM IST
ಸೆ.14 ಕ್ಕೆ 88 ನೇ ಮಹಾಮಸ್ತಕಾಭಿಷೇಕಕ್ಕೆ ಸಂಪೂರ್ಣ ತೆರೆ
news18
Updated: August 28, 2018, 5:57 PM IST
-ಅಶೋಕ್​, ನ್ಯೂಸ್​ 18 ಕನ್ನಡ

ಶ್ರವಣಬೆಳಗೊಳ,(ಆ.28): ಜೈನಕಾಶಿಯಲ್ಲಿ ಮಂದಸ್ಮಿತ ಅಜಾನುಬಾಹುವಿಗೆ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಈ ಬಾರಿ ನಡೆಯುತ್ತಿರುವ 88 ನೇ  ಮಹಾಮಸ್ತಕಾಭಿಷೇಕವು  ಸೆ.14 ರವರೆಗೆ ಮುಂದುವರೆಯುತ್ತದೆ ಎಂದು ಶ್ರವಣಬೆಳಗೊಳ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ಈ ಬಾರಿಯ ಮಹಾಮಸ್ತಕಾಭಿಷೇಕವು ಆಗಸ್ಟ್​ 31 ಕ್ಕೆ ಮುಗಿಯಬೇಕಾಗಿತ್ತು. ಆದರೆ ಬಾಹುಬಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅವಧಿ ವಿಸ್ತರಣೆ ಮಾಡಲಾಗಿದೆ.  ಕಳೆದ ವರ್ಷ ಸೆಪ್ಟೆಂಬರ್​ 14 ರಂದು 88 ನೇ ಮಹಾಮಸ್ತಕಾಭಿಷೇಕ ಪ್ರಾರಂಭವಾಗಿತ್ತು. 2018 ಸೆಪ್ಟೆಂಬರ್‌ 14 ರಂದು ಈ ಶತಮಾನದ ಮೊದಲ ಮಹಾಮಸ್ತಕಾಭಿಷೇಕಕ್ಕೆ ಸಂಪೂರ್ಣ ತೆರೆ ಎಳೆಯಲಾಗುತ್ತದೆ ಎಂದು ಅವರು ಹೇಳಿದರು.

ಕಳೆದ 2006 ರಲ್ಲಿ 87 ನೇ  ಮಹಾಮಸ್ತಕಾಭಿಷೇಕ ನಡೆದಿತ್ತು. ಈಗ 2018 ರ ಜನವರಿಯಲ್ಲಿ ಬಾಹುಬಲಿಗೆ ಮಹಾಮಜ್ಜನ ನಡೆದಿತ್ತು. ವಿಶ್ವವಿಖ್ಯಾತ ಮಹಾಮಸ್ತಕಾಭಿಷೇಕಕ್ಕೆ ಸೆಪ್ಟೆಂಬರ್ 14 ರಂದು ಸಂಪೂರ್ಣ ತೆರೆ ಎಳೆಯಲಾಗುತ್ತಿದೆ.

ವಿಶ್ವವಿಖ್ಯಾತ ಬಾಹುಬಲಿ ಮೂರ್ತಿಯ ಮಸ್ತಕಾಭಿಷೇಕ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ಜರುಗಿತು. ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ 58.8 ಅಡಿ ಎತ್ತರದ ವಿರಾಗಿಯ ದರ್ಶನ ಪಡೆಯಲು ಅನೇಕ ಗಣ್ಯಾತಿಗಣ್ಯರು ಆಗಮಿಸಿದ್ದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಾಲ್ನಡಿಗೆಯಲ್ಲೇ ವಿಂಧ್ಯಗಿರಿ ಬೆಟ್ಟ ಹತ್ತಿ ಮಹಾವಿರಾಗಿಗೆ ಅಭಿಷೇಕ ಮಾಡಿದ್ದರು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...