ವೈಯಕ್ತಿಕ ಬೆಳವಣಿಗೆಗೆ ಪಕ್ಷವನ್ನು ತುಳಿಯಬಾರದು: ಸಿಟಿ ರವಿ ಗೂಡಾರ್ಥದ ಹೇಳಿಕೆ!

ಪಕ್ಷದ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿರುವವರ ವಿರುದ್ಧ ಶಿಸ್ತುಕ್ರಮ ವಿಚಾರವಾಗಿ ಮಾತನಾಡಿ, ಶಿಸ್ತುಕ್ರಮಕ್ಕೆ ಯಾವುದೇ ಗಡುವು ಹಾಕಿಲ್ಲ. ನೀವೇ ಗಡುವು ಹಾಕಿದ್ದೀರಿ ಅಷ್ಟೇ. ಅದನ್ನು ಚರ್ಚೆ ಮಾಡಿ ಮತ್ತೆ ನಾನು ಶಿಸ್ತಿನ ಉಲ್ಲಂಘನೆ ಮಾಡಬೇಕಾ? ಎಂದು ಮರುಪ್ರಶ್ನಿಸಿದರು.

ಸಿ ಟಿ ರವಿ.

ಸಿ ಟಿ ರವಿ.

 • Share this:
  ಬೆಂಗಳೂರು: ನಮಗೆ ಯಾವುದೇ ಅಸಮಾಧಾನ ಇಲ್ಲ. ವೈಯುಕ್ತಿಕ ಬೆಳವಣಿಗೆಗೆ
  ಪಕ್ಷ ತುಳಿಯಬೇಕು ಅಂತಾ ನಾವು ಯಾವತ್ತೂ ಯೋಚನೆ ಮಾಡಿದವರಲ್ಲ. ಪಕ್ಷದ ಬೆಳವಣಿಗೆಯ ಜೊತೆಗೆ ನಾವು ಬೆಳೆಯಬೇಕು ಅಂತಾ ಆಸೆ ಪಡುತ್ತೇವೆ. ಪಕ್ಷವನ್ನು ಮುಗಿಸಿ ನಾವು ಬೆಳೆಯಬೇಕು ಅಂತ ಯೋಚಿಸಲ್ಲ. ನಾನು ಯಾವುದೇ ವಿಷಯವನ್ನು ಎತ್ತಿದರೂ ವಿಷಯಾಧಾರಿತವಾಗಿಯೇ ಹೊರತು ಪೂರ್ವಾಗ್ರಹ ಇರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ.ರವಿ ಅವರು ಗೂಡಾರ್ಥದ ಹೇಳಿಕೆ ನೀಡಿದರು.

  ಇಂದು ಸುದ್ದಿಗಾರರೊಂದಿಗೆ ಸಿಟಿ ರವಿ ಅವರು ಮಾತನಾಡಿದರು. ಹಾಗಾದರೆ ನಿಮ್ಮ ಪಕ್ಷದಲ್ಲಿ ವೈಯಕ್ತಿಕ ಬೆಳವಣಿಗೆಗೆ ಪಕ್ಷವನ್ನು ತುಳಿಯುತ್ತಿದ್ದಾರಾ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ ಅವರು, ಮೋಡ ಸೂರ್ಯನನ್ನು ಮರೆ ಮಾಚಲು ಆಗುತ್ತಾ.!?  ಮರೆ ಮಾಚಿದರೂ ಎಷ್ಟು ಕಾಲ..!? ಕೆಲವು ಕಾಲ ಮಾತ್ರ ಮರೆ ಮಾಚಬಹುದು ಎಂದು ಹೇಳಿದರು.

  ಬಿಜೆಪಿ ಆಂತರಿಕ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಟಿ ರವಿ, ನಾನು ಹೇಳಿದ್ದನ್ನು ಅವರವರು ಹೇಗೆ ಗ್ರಹಿಸತ್ತಾರೋ ಹಾಗೆ. ಒಳ್ಳೆಯ ದೃಷ್ಟಿಯಿಂದ ಗ್ರಹಿಸಿದರೆ ಒಳ್ಳೆಯದು,‌ ಕೆಟ್ಟ ದೃಷ್ಟಿಯಿಂದ ಗ್ರಹಿಸಿದರೆ ಕೆಟ್ಟದು. ನನ್ನ ಪ್ರತಿ‌ ಮಾತಿನ ಉದ್ದೇಶ ಸದುದ್ದೇಶದಿಂದ ಕೂಡಿರುತ್ತದೆ ಯಾವತ್ತೂ ದುರುದ್ದೇಶ ಇಲ್ಲ ಎಂದರು.

  ಇದನ್ನು ಓದಿ: Coronavirus: ಮಾರಕ ಕೊರೋನಾದಿಂದ ಮೃತಪಟ್ಟ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

  ಪಕ್ಷದ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿರುವವರ ವಿರುದ್ಧ ಶಿಸ್ತುಕ್ರಮ ವಿಚಾರವಾಗಿ ಮಾತನಾಡಿ, ಶಿಸ್ತುಕ್ರಮಕ್ಕೆ ಯಾವುದೇ ಗಡುವು ಹಾಕಿಲ್ಲ. ನೀವೇ ಗಡುವು ಹಾಕಿದ್ದೀರಿ ಅಷ್ಟೇ. ಅದನ್ನು ಚರ್ಚೆ ಮಾಡಿ ಮತ್ತೆ ನಾನು ಶಿಸ್ತಿನ ಉಲ್ಲಂಘನೆ ಮಾಡಬೇಕಾ? ಎಂದು ಮರುಪ್ರಶ್ನಿಸಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: